BJP ಪರ ಬ್ಯಾಟ್ ಬೀಸೋಕೆ ರೆಡಿಯಾದ JDS-ಕಾಂಗ್ರೆಸ್ ಸ್ಟಾರ್ ಬ್ಯಾಟ್ಸ್‌ಮನ್‌ಗಳು
ಕೆ. ಆರ್. ಪೇಟೆ ಉಪಚುನಾವಣಾ ಕ್ಷೇತ್ರ ರಂಗೇರಿದ್ದು, ಜೆಡಿಎಸ್ ಹಾಗೂ ಬಿಜೆಪಿ ಈಗಾಗಲೇ ಪ್ರಚಾರಕ್ಕೆ ಧುಮುಕಿದೆ. ಕ್ಷೇತ್ರದಲ್ಲಿ ಮುಖಂಡರ ಪಕ್ಷಾಂತರ ಪರ್ವ ಶುರುವಾಗಿದೆ. ಜೆಡಿಎಸ್-ಕಾಂಗ್ರೆಸ್ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಬಿಜೆಪಿ ಪರ ಬ್ಯಾಟ್ ಬೀಸಲು ರೆಡಿಯಾಗಿದ್ದಾರೆ. ಮುಖಂಡರ ಪಕ್ಷಾಂತರದಿಂದ ಕಾಂಗ್ರೆಸ್-ಜೆಡಿಎಸ್ ಆರಂಭಿಕ ಹಿನ್ನಡೆ ಅನುಭವಿಸಿದ್ದರೆ, ನೂತನ ಮುಖಂಡರ ಆಗಮನದಿಂದ ಬಿಜೆಪಿ ಪಾಳಯದಲ್ಲಿ ಉತ್ಸಾಹ ಹೆಚ್ಚಾಗಿದೆ.
ಮಂಡ್ಯ(ನ.17): ಕೆ. ಆರ್. ಪೇಟೆ ಉಪಚುನಾವಣಾ ಕ್ಷೇತ್ರ ರಂಗೇರಿದ್ದು, ಜೆಡಿಎಸ್ ಹಾಗೂ ಬಿಜೆಪಿ ಈಗಾಗಲೇ ಪ್ರಚಾರಕ್ಕೆ ಧುಮುಕಿದೆ. ಕ್ಷೇತ್ರದಲ್ಲಿ ಮುಖಂಡರ ಪಕ್ಷಾಂತರ ಪರ್ವ ಶುರುವಾಗಿದೆ.
ಜೆಡಿಎಸ್-ಕಾಂಗ್ರೆಸ್ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಬಿಜೆಪಿ ಪರ ಬ್ಯಾಟ್ ಬೀಸಲು ರೆಡಿಯಾಗಿದ್ದಾರೆ. ಕೆ. ಆರ್. ಪೇಟೆಯ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಕೈ-ದಳ ನಾಯಕರನ್ನ ತನ್ನತ್ತ ಸೆಳೆಯುತ್ತಿದ್ದಾರೆ. ಜೆಡಿಎಸ್‌ನ ಕಿಕ್ಕೇರಿ ಪ್ರಭಾಕರ್,ಕಾಂಗ್ರೆಸ್‌ನ ಶೀಳನೆರೆ ಅಂಬರೀಶ್, ಚನ್ನಿಂಗೇಗೌಡ, ಬೂಕನಕೆರೆ ಜವರಾಯಿಗೌಡ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಕೆ. ಆರ್. ಪೇಟೆ: ಪಕ್ಷೇತರ ಅಭ್ಯರ್ಥಿಯಾಗಿ ಸರ್ವೇ ದೇವೇಗೌಡ ನಾಮಪತ್ರ ಸಲ್ಲಿಕೆ
ಕಿಕ್ಕೇರಿ ಪ್ರಭಾಕರ್, ಜೆಡಿಎಸ್ ಮುಖಂಡ. ಜಿ.ಪಂ ಮಾಜಿ ಉಪಾಧ್ಯಕ್ಷ, ಶೀಳನೆರೆ ಅಂಬರೀಶ್, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಮಾಜಿ ನಿರ್ದೇಶಕ, ಚನ್ನಿಂಗೇಗೌಡ, ಮನ್ಮುಲ್ ಮಾಜಿ ಉಪಾಧ್ಯಕ್ಷ, ಕಾಂಗ್ರೆಸ್ ಮುಖಂಡ ಬೂಕನಕೆರೆ ಜವರಾಯಿಗೌಡ ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಸ್ವಪಕ್ಷದ ಮೇಲಿನ ಅಸಮಾಧಾನದಿಂದ ಕೈ-ದಳ ಮುಖಂಡರು ಬಿಜೆಪಿ ಸೇರಿದ್ದು, ಸೂಕ್ತ ಸ್ಥಾನಮಾನ ನೀಡೋದಾಗಿ ಭರವಸೆ ನೀಡಿ ಸಿಎಂ ಎಲ್ಲರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಕೆಆರ್ ಪೇಟೆಯ ಮತ್ತಷ್ಟು ನಾಯಕರನ್ನು ಸೆಳೆಯಲು ಬಿಜೆಪಿ ನಾಯಕರಿಂದ ಪ್ರಯತ್ನ ಮುಂದುವರಿದಿದೆ.
'ಬ್ರಿಟಿಷರನ್ನು ಓಡಿಸಿದಂತೆ ದೇಶದಿಂದ ಮೋದಿಯನ್ನು ಓಡಿಸ್ಬೇಕು'..!.
ಮುಖಂಡರ ಪಕ್ಷಾಂತರದಿಂದ ಕಾಂಗ್ರೆಸ್-ಜೆಡಿಎಸ್ ಆರಂಭಿಕ ಹಿನ್ನಡೆ ಅನುಭವಿಸಿದ್ದರೆ, ನೂತನ ಮುಖಂಡರ ಆಗಮನದಿಂದ ಬಿಜೆಪಿ ಪಾಳಯದಲ್ಲಿ ಉತ್ಸಾಹ ಹೆಚ್ಚಾಗಿದೆ. ಈ ಬಾರಿ ಶತಾಯಗತಾಯ ಖಾತೆ ತೆರೆಯಲು ಕಮಲ ನಾಯಕರು ಪ್ರಯತ್ನ ಪಡುತ್ತಿದ್ದಾರೆ. ಮುಖಂಡರ ಪಕ್ಷಾಂತರ ಪರ್ವ ಕೆ. ಆರ್. ಪೇಟೆ ಉಪಚುನಾವಣೆಯಲ್ಲಿ ಮಹತ್ವ ಪಡೆದುಕೊಂಡಿದೆ.
ಉಪಚುನಾಣಾ ಕಣಗಳು ರಂಗೇರಿದ್ದು, ಡಿ.5 ರಂದು ಉಪಚುನಾವಣೆ ನಡೆಯಲಿದೆ. ಡಿ. 09ರಂದು ಫಲಿತಾಂಶ ಪ್ರಕಟವಾಗಲಿದೆ.
ಕಳೆದ ಬಾರಿ BJP ಸಹಕಾರದಿಂದಲೇ ಶಾಸಕರಾದ್ರಂತೆ ನಾರಾಯಣ ಗೌಡ