ಲಸಿಕೆ ಅಭಿಯಾನಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಬಾಡಿಗೆಗೆ ಲಭ್ಯ

* ಪ್ರತಿ ಕಿ.ಮೀಗೆ 39 ರು.
* ಕೊರೋನಾ ಸೋಂಕಿನಿಂದ ರಕ್ಷಿಸಲು ಲಸಿಕೆ ಅಭಿಯಾನ ನಡೆಸಲು ಜಿಲ್ಲಾಡಳಿತಗಳ ಚಿಂತನೆ
* ಒಪ್ಪಂದದ ಮೇರೆಗೆ ಬಸ್‌ ಸೇವೆ ನೀಡಲು ಕೆಎಸ್‌ಆರ್‌ಟಿಸಿ ನಿರ್ಧಾರ

KSRTC Bus  Available for the Vaccine Campaign in Karnataka grg

ಬೆಂಗಳೂರು(ಮೇ.30):  ಕೊರೋನಾ ಸೋಂಕು ನಿಯಂತ್ರಿಸಲು ಜಿಲ್ಲಾಡಳಿತಗಳು ಗ್ರಾಮೀಣ ಭಾಗಗಳಲ್ಲಿ ನಡೆಸಲು ಉದ್ದೇಶಿಸಿರುವ ಲಸಿಕೆ ಅಭಿಯಾನಕ್ಕೆ ನೆರವಾಗಲು ಕೆಎಸ್‌ಆರ್‌ಟಿಸಿ ಒಪ್ಪಂದದ ಮೇರೆಗೆ ಬಸ್‌ ಸೇವೆ ನೀಡಲು ಮುಂದಾಗಿದೆ.

ಗ್ರಾಮಗಳಲ್ಲಿ ವಾಸಿಸುತ್ತಿರುವವರಿಗೆ ಕೊರೋನಾ ಸೋಂಕಿನಿಂದ ರಕ್ಷಿಸಲು ಲಸಿಕೆ ಅಭಿಯಾನ ನಡೆಸಲು ಜಿಲ್ಲಾಡಳಿತಗಳು ಚಿಂತನೆ ನಡೆಸಿವೆ. ಅದರಂತೆ ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಿಂದ ಗ್ರಾಮಗಳಿಗೆ ಲಸಿಕೆ ತೆಗೆದುಕೊಂಡು ಹೋಗುವ ಸಲುವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನೀಡುವಂತೆ ಕೆಲ ಜಿಲ್ಲಾಡಳಿತ ಕೋರಿವೆ.

ಸಾರಿಗೆ ನೌಕರರಿಗೆ ಮಿಡಿದ ಸರ್ಕಾರ, ವೇತನ ಪಾವತಿಗೆ ಹಣ

ಅಂತಹ ಜಿಲ್ಲಾಡಳಿತಗಳಿಗೆ ಒಪ್ಪಂದದ ಮೇರೆಗೆ ಬಸ್‌ ಸೇವೆ ನೀಡಲು ನಿರ್ಧರಿಸಿದ್ದು, ಪ್ರತಿ ಕಿ.ಮೀ.ಗೆ 39 ರು.ಗಳ ದರ ನಿಗದಿ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Latest Videos
Follow Us:
Download App:
  • android
  • ios