ಮಂಡ್ಯ(ಜು.08): ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟನೂರು ಅಡಿ ತಲುಪಿದೆ. ಕಳೆದೊಂದು ತಿಂಗಳಲ್ಲಿ ಜಲಾಶಯಕ್ಕೆ 8 ಅಡಿಗಳಷ್ಟುನೀರು ಹರಿದುಬಂದಿದೆ. ಅಣೆಕಟ್ಟು ನೂರರ ಗಡಿ ತಲುಪಿರುವುದು ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಇದರ ಬೆನ್ನಲ್ಲೇ ಕೃಷಿ ಚಟುವಟಿಕೆಯೂ ಬಿರುಸುಗೊಂಡಿದೆ. ಮುಂಗಾರು ಹಂಗಾಮಿಗೆ ನೀರು ಸಿಗುವ ಆಶಾಭಾವನೆಯೂ ರೈತ ಸಮುದಾಯದಲ್ಲಿ ವ್ಯಕ್ತವಾಗಿದೆ.

ಜೂ.7ರಂದು ಅಣೆಕಟ್ಟೆಯ ನೀರಿನ ಮಟ್ಟ92.20 ಅಡಿ ದಾಖಲಾಗಿತ್ತು. ಅಂದು ಜಲಾಶಯಕ್ಕೆ 837 ಕ್ಯುಸೆಕ್‌ ನೀರು ಹರಿದುಬರುತ್ತಿದ್ದು, 415 ಕ್ಯುಸೆಕ್‌ ನೀರನ್ನು ಅಣೆಕಟ್ಟೆಯಿಂದ ಹೊರಬಿಡಲಾಗುತ್ತಿತ್ತು. ಆ ವೇಳೆ ಜಲಾಶಯದಲ್ಲಿ 17.291 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.

ಕೊಡಗಿನಲ್ಲಿ ಭಾರೀ ಮಳೆಗೆ ಉಕ್ಕಿ ಹರಿದ ನದಿಗಳು, ಗ್ರಾಮಗಳ ಸಂಪರ್ಕ ಕಡಿ​ತ

ಮಂಗಳವಾರ (ಜು.7) ಜಲಾಶಯದ ನೀರಿನ ಮಟ್ಟ99.40 ಅಡಿ ಇದ್ದು, ಅಣೆಕಟ್ಟೆಗೆ 6324 ಕ್ಯುಸೆಕ್‌ ನೀರು ಹರಿದುಬರುತ್ತಿದ್ದರೆ, ಜಲಾಶಯದಿಂದ 449 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. 22.345 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಕಳೆದ ವರ್ಷ ಇದೇ ವೇಳೆ ಜಲಾಶಯದಲ್ಲಿ 81.55ಅಡಿ ನೀರು ದಾಖಲಾಗಿತ್ತು. ಜಲಾಶಯಕ್ಕೆ 4651 ಕ್ಯುಸೆಕ್‌ ನೀರು ಹರಿದುಬರುತ್ತಿದ್ದರೆ, 348 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಲಾಶಯದಲ್ಲಿ 19 ಅಡಿಯಷ್ಟುಹೆಚ್ಚುವರಿ ನೀರು ಸಂಗ್ರಹವಾಗಿದೆ.

ಸತತ ಮಳೆಗೆ ಕೊಡಗಿನಲ್ಲಿ ಭೂಕುಸಿತ, ಮತ್ತೆ ಪ್ರವಾಹ ಭೀತಿ: ಇಲ್ಲಿವೆ ಫೋಟೋಸ್

ಕೃಷ್ಣರಾಜಸಾಗರ ಜಲಾಶಯ ನೂರು ಅಡಿ ತಲುಪಿರುವುದರಿಂದ ಜಿಲ್ಲಾದ್ಯಂತ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ರೈತರು ಅಗತ್ಯ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರಗಳನ್ನು ಖರೀದಿಸಿಟ್ಟುಕೊಂಡಿದ್ದು, ಭೂಮಿಯನ್ನು ಉಳುಮೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಮುಂಗಾರು ಹಂಗಾಮಿಗೆ ನೀರು ಸಿಗುವ ನಿರೀಕ್ಷೆಯೊಂದಿಗೆ ಭರದ ಸಿದ್ಧತೆ ನಡೆಸುತ್ತಿದ್ದಾರೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಚುರುಕುಗೊಂಡಿದೆ. ಇದರಿಂದ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಸ್ವಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ. ಪ್ರಸ್ತುತ ಜಲಾಶಯಕ್ಕೆ 6324 ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಜೂ.16ರಂದು ಜಲಾಶಯಕ್ಕೆ 1284 ಕ್ಯುಸೆಕ್‌ ಒಳಹರಿವಿತ್ತು. ಜೂ.17ರಂದು 1877 ಕ್ಯುಸೆಕ್‌ ಇದ್ದ ಒಳಹರಿವಿನ ಪ್ರಮಾಣ, ಜೂ.18ರಂದು 3036ಕ್ಕೆ ಏರಿಕೆಯಾಯಿತು. ಜೂ.19ರಂದು 2980 ಕ್ಯುಸೆಕ್‌ ಇದ್ದ ಒಳಹರಿವು, ಜೂ.20ಕ್ಕೆ 6005 ಕ್ಯುಸೆಕ್‌ಗೆ ಏರಿಕೆ ಕಂಡುಬಂದಿತ್ತು.

ಪಾಸಿಟಿವ್‌ ಎಂದು ತಿಳಿದೂ ತಂದೆ, ಮಗ ಬಸ್‌ನಲ್ಲಿ ಪ್ರಯಾಣ, ಬಸ್‌ ನಿಲ್ದಾಣ ಸೀಲ್‌ ಡೌನ್‌

ಜೂ.20ರಂದು 6159 ಕ್ಯುಸೆಕ್‌ ಇದ್ದ ಒಳಹರಿವು ನಂತರದ ದಿನಗಳಲ್ಲಿ 5406 ಕ್ಯುಸೆಕ್‌, 3842 ಕ್ಯುಸೆಕ್‌, 2334 ಕ್ಯುಸೆಕ್‌ಗೆ ಇಳಿಮುಖ ಕಂಡಿತ್ತು. ಜೂ.24 ರಿಂದ ಒಳಹರಿವಿನ ಪ್ರಮಾಣ 3381 ಕ್ಯುಸೆಕ್‌ಗೆ ಏರಿಕೆಯಾಗಿ ಜೂ.30ರ ವೇಳೆಗೆ 1812 ಕ್ಯುಸೆಕ್‌ಗೆ ಕುಸಿತ ಕಂಡಿತ್ತು.

ಜೂ.5ರಂದು 3339 ಕ್ಯುಸೆಕ್‌ ಇದ್ದ ಒಳಹರಿವಿನ ಪ್ರಮಾಣ ಆ ದಿನ ಸಂಜೆ ವೇಳೆಗೆ 5791 ಕ್ಯುಸೆಕ್‌ಗೆ ಏರಿಕೆಯಾಯಿತು. ಜೂ.7ರಂದು 6324 ಕ್ಯುಸೆಕ್‌ಗೆ ಒಳಹರಿವು ದಾಖಲಾಗಿತ್ತು.

6 ವರ್ಷದಲ್ಲಿ ನೂರರ ಗಡಿ ತಲುಪಿದ ವಿವರ

2014ರ ಜು.6ರಂದು ಕೆಆರ್‌ಎಸ್‌ ನೀರಿನ ಮಟ್ಟ100 ಅಡಿ ತಲುಪಿದ್ದರೆ 2015ರಲ್ಲಿ ಜೂ.27ರಂದು ಜಲಾಶಯದ ನೀರಿನ ಮಟ್ಟ100 ಅಡಿ ತಲುಪಿತ್ತು. ಮಳೆ ಕೊರತೆಯಿಂದಾಗಿ 2016ರಲ್ಲಿ ಕೆಆರ್‌ಎಸ್‌ ನೀರಿನ ಮಟ್ಟ100ರ ಗಡಿ ತಲುಪಿರಲೇ ಇಲ್ಲ. 99.65 ಅಡಿ ತಲುಪುವುದಕ್ಕಷ್ಟೇ ಸಾಧ್ಯವಾಗಿತ್ತು. 2017ರಲ್ಲಿ ಸೆಪ್ಟೆಂಬರ್‌ 3ರಂದು ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ100 ಅಡಿಗೆ ತಲುಪಿತ್ತು. ಅಂದು ಜಲಾಶಯಕ್ಕೆ 12,205 ಕ್ಯುಸೆಕ್‌ ನೀರು ಹರಿದುಬರುತ್ತಿದ್ದರೆ, 8,091 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿತ್ತು. 22.38 ಟಿಎಂಸಿ ನೀರು ಸಂಗ್ರಹವಾಗಿತ್ತು. 2018ರ ಜೂ.17ರಂದು ನೂರರ ಗಡಿ ತಲುಪಿತ್ತು. ಅಂದು ಅಣೆಕಟ್ಟೆಒಳಹರಿವಿನ ಪ್ರಮಾಣ 31,037 ಕ್ಯುಸೆಕ್‌ ದಾಖಲಾಗಿತ್ತು. 437 ಕ್ಯುಸೆಕ್‌ ನೀರನ್ನು ಹೊರಗೆ ಹರಿಯಬಿಡಲಾಗುತ್ತಿತ್ತು. 2019ರ ಆಗಸ್ಟ್‌ 9 ರಂದು ಜಲಾಶಯದ ನೀರಿನ ಮಟ್ಟ100ರ ಗಡಿ ತಲುಪಿತ್ತು. ಅಂದು ಜಲಾಶಯಕ್ಕೆ 70 ಸಾವಿರ ಕ್ಯುಸೆಕ್‌ ನೀರು ಹರಿದುಬರುತ್ತಿತ್ತು.