ಕಂಪ್ಯೂಟರನ್ನೇ ಮೀರಿಸುವ ಕೈ ಬರಹ: ಕೃಷ್ಣಮೂರ್ತಿ ಹಸ್ತಾಕ್ಷರಕ್ಕೆ ಮನಸೋತ ಕಾಫಿನಾಡಿನ ಜನತೆ..!

*   ಹಣ ಪಡೆಯದೇ ಅರ್ಜಿ ಬರೆದುಕೊಡುವ ಉದಾರಿ 
*   ಹಸ್ತಾಕ್ಷರಕ್ಕೆ ಅಕ್ಷರಕ್ಕೆ ಮನಸೋತ ಟೈ ಟಾನ್ ಕಂಪನಿಯಿಂದ ಉಡುಗೂರೆ, 
*   ದಿ. ದೇವರಾಜ ಅರಸು ಅವರಿಂದಲೂ ಮೆಚ್ಚುಗೆ ಪಡೆದ ಮಲೆನಾಡಿನ ಕೃಷ್ಣಮೂರ್ತಿ 
 

Krishnamurthy is Famous For His Handwriting in Chikkamagaluru grg

ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು(ಮಾ.24):  ಓದಿರುವುದು 5ನೇ ಕ್ಲಾಸ್ ಆದ್ರೆ ಬರವಣಿಗೆ ಮಾತ್ರ ಫಸ್ಟ್ ಕ್ಲಾಸ್, ಕಂಪ್ಯೂಟರ್‌ಅನ್ನು ಮೀರಿಸುವಂತಹ ಬರವಣಿಗೆ ಇವರ ಹಸ್ತಾಕ್ಷರದಲ್ಲಿ(Handwriting) ಅಡಗಿದೆ. ಇವರ ಕೈ ಬರಹಕ್ಕೆ ದಿ.ದೇವರಾಜ ಅರಸು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇವರ ಹಸ್ತಾಕ್ಷರಕ್ಕೆ ಮನಸೋತ ಟೈ ಟಾನ್ ಕಂಪನಿಯುವರು ಬೆಲೆ ಬಾಳುವ ಉಡುಗೂರೆಯನ್ನೇ ನೀಡಿದ್ದರು. ಇವರ ಕೈ ಬರಹದಲ್ಲಿ ಮೂಡುವ ಅಕ್ಷರಕ್ಕೆ ಸರಿಸಾಟಿಯೇ ಇಲ್ಲ. ಇವರ ಹಸ್ತಾಕ್ಷರಕ್ಕೆ ಇಡೀ ಮಲೆನಾಡಿನ ಜನ ಮೂಕವಿಸ್ಮಿತರಾಗಿದ್ದಾರೆ. 

Krishnamurthy is Famous For His Handwriting in Chikkamagaluru grg

ಮಲೆನಾಡಿನಲ್ಲಿ ಕಂಪ್ಯೂಟರ್ ಮೀರಿಸುವ ಹಸ್ತಾಕ್ಷರ ಹೊಂದಿರುವ ಕೃಷ್ಣ ಮೂರ್ತಿ

ಒಮ್ಮೆ ಈ ಪೋ ಈಟೋ ಕಾಫಿ ನೋಡಿದ್ರೆ ಇದು ಯಾವುದೋ ಕಂಪ್ಯೂಟರ್(Computer) ಬರಹ ಎನ್ನುವ ಅನುಮಾನ ಗ್ಯಾರೆಂಟಿ.  ಬದಲಾಗಿ ಇದು ಹಸ್ತಾಕ್ಷರ ಹೌದು ಮಲೆನಾಡಿನ ಕೃಷ್ಣಮೂರ್ತಿಯವರ ಕೈಬರಹದಲ್ಲಿ ಮೂಡಿಬಂದಿರುವ ಅಕ್ಷರಗಳು ಇದು.ಮೂಲತಃ ಚಿಕ್ಕಮಗಳೂರು(Chikkamagaluru) ಜಿಲ್ಲೆಯ ಜಯಪುರ ಪಟ್ಟಣದ ವಾಸಿಯಾಗಿರುವ ಕೃಷ್ಣಮೂರ್ತಿಯವರು(Krishnamurthy) ಓದಿರುವುದು 5ನೇ ಕ್ಲಾಸ್ ಅದ್ರೆ ಬರವಣಿಗೆ ಮಾತ್ರ ಫಾಸ್ಟ್ ಕ್ಲಾಸ್. ಏಕೆಂದ್ರೆ ಕೈಯಲ್ಲಿ ಬರಹದಲ್ಲಿ ಬರುವ ಅಕ್ಷರ ಕಂಪ್ಯೂಟರನ್ನು ಮೀರಿಸುವಂಥ ಶಕ್ತಿ ಹೊಂದಿದೆ. ಚಿಕ್ಕವಯ್ಸಸಿನಿಂದಲೂ ಬರವಣಿಗೆಯನ್ನು ಹವ್ಯಾಸ ಮಾಡಿಕೊಂಡಿರುವ ಫಲವೇ ಇಂದು ಅಕ್ಷರಗಳು ಅಚ್ಚುಕಟ್ಟಾಗಿ ಮೂಡಿಬರಲು ಸಾಧ್ಯವಾಗಿದೆ. ವೃತ್ತಿಯಲ್ಲಿ ವ್ಯಾಪಾರಿ(Businessman) ಆಗಿರುವ ಕೃಷ್ಣ ಮೂರ್ತಿ ಇಡೀ ಪಟ್ಟಣದಲ್ಲಿ ಪ್ರಸಿದ್ದಿ ಪಡೆದಿದ್ದಾರೆ. ಲಗ್ನಪತ್ರಿಕೆ, ಯಾವುದಾದರೂ ಅರ್ಜಿಗಳನ್ನು ಬರೆಯಬೇಕಾದರೆ ಮೊದಲು ಸಂಪರ್ಕಿಸುವುದು ಇವರನ್ನೇ ಏಕೆಂದರೆ ಅಚ್ಚುಕಟ್ಟಾಗಿ ಕನ್ನಡ ಇಂಗ್ಲಿಷ್ ಎರಡು ಭಾಷೆಯನ್ನು ಕರಗತ ಮಾಡಿಕೊಂಡಿರುವ ಕಲೆ ಕೃಷ್ಣ  ಮೂರ್ತಿ ಅವರ ಬಳಿ ಇದೆ.

Krishnamurthy is Famous For His Handwriting in Chikkamagaluru grg

ಮಲೆನಾಡಿನಲ್ಲಿ ಕಾಫಿ ಕಳ್ಳತನದ ಹಾದಿ ಹಿಡಿದಿರುವ ಕೆಲ ಯುವಕರು: ಓರ್ವನ ಬಂಧನ

ಹಣ ಪಡೆಯದೇ ಅರ್ಜಿ ಬರೆದುಕೊಡುವ ಉದಾರಿ 

ಕಂಪ್ಯೂಟರ್ ಪ್ರಿಂಟ್ ಮತ್ತು ಇವರ ಕೈ ಬರಹ ಎರಡನ್ನು  ಕೂಡ ತಾಳೆ ಹಾಕಿದರೆ ಕೆಲಕಾಲ ಗೊಂದಲಕ್ಕೆ ಒಳಗಾಗುವುದು ಗ್ಯಾರಂಟಿ .ಏಕೆಂದರೆ ಅಷ್ಟು ಅಚ್ಚುಕಟ್ಟಾಗಿ ಕನ್ನಡ , ಇಂಗ್ಲಿಷ್ ಅಕ್ಷರಗಳನ್ನು ಕೃಷ್ಣಮೂರ್ತಿ ಬರೆಯುತ್ತಾರೆ. ಪಟ್ಟಣದ ಸುತ್ತಮುತ್ತ ಕರೆಂಟ್ ಕೈಕೊಟ್ಟ ವೇಳೆಯಲ್ಲಿ ಯಾವುದಾದರೂ ಕಂಪ್ಯೂಟರ್ ಅರ್ಜಿ ಬರೆಬೇಕಾದ್ರೆ ಮೊದಲು ನೆನಪಾಗುವುದೇ ಕೃಷ್ಣಮೂರ್ತಿ , ಕರೆಂಟ್ ಕೈ ಕೊಟ್ಟ ವೇಳೆಯಲ್ಲಿ ಇವರ ಅಂಗಡಿಗೆ ಜನರು ಮುಗಿಬಿದ್ದು ಅರ್ಜಿಯನ್ನು ಬಳಸಿಕೊಳ್ಳುತ್ತಾರೆ. ಯಾವುದೇ ಹಣವನ್ನು ಪಡೆಯದೇ ಉಚಿತವಾಗಿ ಅರ್ಜಿಗಳನ್ನು ಬರೆದುಕೊಡುವ ಕೃಷ್ಣ ಮೂರ್ತಿ ಕಂಪ್ಯೂಟರನ್ನು ಮೀರಿಸುವ ಬರಹದ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ಹಿಂದೂಗಳು ಮಟನ್ ಸ್ಟಾಲ್ ಇಟ್ಟರೆ ಮುಸ್ಲಿಮರು ಅಲ್ಲಿ ಮಾಂಸ ಖರೀದಿ ಮಾಡುತ್ತಾರಾ: ಸಿಟಿ ರವಿ ಪ್ರಶ್ನೆ

Krishnamurthy is Famous For His Handwriting in Chikkamagaluru grg

ದಿ. ದೇವರಾಜ ಅರಸು ಅವರಿಂದಲೂ ಮೆಚ್ಚುಗೆ ಪಡೆದಿದ್ದ ಕೃಷ್ಣಮೂರ್ತಿ

ಮಲೆನಾಡು ಮಾತ್ರವಲ್ಲ ಇಡೀ ರಾಜ್ಯದಲ್ಲೇ(Karnataka) ಇವರ ಹಸ್ತಕ್ಷಾರ ಪ್ರಸಿದ್ದಿ ಪಡೆದಿದೆ. ಇವರ ಕೈ ಬರಹವನ್ನು ಗುರುತಿಸಿದ ಹಲವು ಸಂಘ ಸಂಸ್ಥೆಗಳು ಗೌರವಿಸಿವೆ.ಇನ್ನು ದಿ. ದೇವರಾಜ ಅರಸು ಕೂಡಹಸ್ತಾಕ್ಷರಕ್ಕೆ ಮನಸೋತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರ. ಅಲ್ಲದೆ ಟೈಟನ್(Titen) ಕಂಪನಿ, ಸ್ಥಳೀಯ ಸಂಘ ಸಂಸ್ಥೆಗಳು ಕೂಡ ಇವರ ಸಾಧನೆಯನ್ನು ಗಮನಿಸಿ ಸನ್ಮಾನವನ್ನು ಕೂಡ ಮಾಡಿವೆ. ಅಂದು ರೂಡಿಸಿಕೊಂಡ ಬಂದ ಹವ್ಯಾಸ ಇವರಿಗೆ ಇಂದು ವರದಾನವಾಗಿ ಪರಿಣಾಮಿಸಿದೆ. ಇವರ ಕಲೆಗೆ ಇಡೀ ಮಲೆನಾಡಿನ ಜನರೇ ಪ್ರಶಂಸಿಸುವ ಮಟ್ಟಿಗೆ ಕೈ ಬರಹ ಹೊಂದಿದೆ. ಇವರ ಹಸ್ತಾಕ್ಷರ ಕಂಪ್ಯೂಟರ್ ಮುದ್ರಣಕ್ಕಿಂತ ಒಂದು ಕೈ ಮೇಲೆ ಎನ್ನುವಷ್ಟರ ಮಟ್ಟಿಗೆ ಇದೆ.
 

Latest Videos
Follow Us:
Download App:
  • android
  • ios