ಜಾತ್ರೆ ದೇವಸ್ಥಾನಗಳಲ್ಲಿ ಮುಸ್ಲಿಮರಿಗೆ  ವ್ಯಾಪಾರ ವಹಿವಾಟುಗಳ ನಿಷೇಧದ ಕುರಿತ  ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ವಿಚಾರದಲ್ಲಿ ದಿನದಿಂದ ದಿನಕ್ಕೆ ರಾಜಕೀಯ ನಾಯಕರು ನಾನಾ ಹೇಳಿಕೆಗಳನ್ನು ನೀಡುತ್ತಾ ಇದ್ದಾರೆ. 

ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು (ಮಾ.23): ಜಾತ್ರೆ ದೇವಸ್ಥಾನಗಳಲ್ಲಿ (Temple) ಮುಸ್ಲಿಮರಿಗೆ (Muslims) ವ್ಯಾಪಾರ ವಹಿವಾಟುಗಳ ನಿಷೇಧದ (Ban) ಕುರಿತ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ವಿಚಾರದಲ್ಲಿ ದಿನದಿಂದ ದಿನಕ್ಕೆ ರಾಜಕೀಯ ನಾಯಕರು ನಾನಾ ಹೇಳಿಕೆಗಳನ್ನು ನೀಡುತ್ತಾ ಇದ್ದಾರೆ. ಇದರ ನಡುವೆ ಸಿ.ಟಿ ರವಿ (CT Ravi) ಈ ಅಭಿಯಾನಕ್ಕೆ ತಮ್ಮದೇ ಆದ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿ ಹಿಂದುತ್ವದ ಪರ ಬ್ಯಾಟಿಂಗ್ ಬೀಸಿದ್ದಾರೆ. 

ನಿಷೇಧ ಪ್ರಶ್ನಿಸುವ ನೈತಿಕತೆ ಮುಸ್ಲಿಮರಿಗೆಲ್ಲಿದೆ: ಹಿಂದೂ ದೇವಾಲಯಗಳ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಿರುವದನ್ನು ಪ್ರಶ್ನಿಸುವ ನೈತಿಕತೆ ಮುಸ್ಲಿಮರಿಗೆಲ್ಲಿದೆ? ಹಿಂದೂಗಳು ಮಟನ್ ಸ್ಟಾಲ್ (Mutton Stall) ಇಟ್ಟರೆ ಮುಸ್ಲಿಮರು ಅಲ್ಲಿ ಮಾಂಸ (Meat) ಖರೀದಿ ಮಾಡುತ್ತಾರ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಹಿಂದೂಗಳ ಅಂಗಡಿಯಲ್ಲಿ ಮಾಂಸ ಖರೀದಿಸುವುದಿಲ್ಲ. ಅದು ನಮ್ಮ ದೇವರಿಗೆ ಆಗುವುದಿಲ್ಲ ಎನ್ನುತ್ತಾರೆ. ಹಾಗಾದರೆ ಅವರ ದೇವರಿಗೆ ಒಪ್ಪಿಸಿದ್ದನ್ನು ನಮ್ಮ ದೇವರು ಒಪ್ಪಲು ಸಾಧ್ಯವೇ ಎಂದರು.

ಕ್ರಿಯೆಗೆ ಪ್ರತಿಕ್ರಿಯೆ ಇರುತ್ತೇ: ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ. ಉಡುಪಿಯ (Udupi) ಗಂಗೊಳ್ಳಿ ಸುತ್ತಮುತ್ತ ಹಿಂದೂ ಮಹಿಳೆಯರ ಬಳಿ ಮೀನು ಖರೀದಿಸಬಾರದು ಎಂದು ಫರ್ಮಾನು ಹೊರಡಿಸಿದರು. ಅದಕ್ಕೆ ಪ್ರತಿಕ್ರಿಯೆಯಾಗಿ ಇದು ಬಂದಿದೆ ಎಂದರು.ಜಾತ್ಯಾತೀತತೆ, ಉದಾರತೆ ಎಲ್ಲವೂ ಬಹುಸಂಖ್ಯಾತ ಹಿಂದೂಗಳಿಗೆ ಮೋಸ ಮಾಡಲೆಂದೇ ಇಟ್ಟಿರುವ ಪದಗಳು. ಸಮಾನತೆ ಇಬ್ಬರಿಗೂ ಒಂದೇ ಇರಬೇಕು. ಏಕಪಕ್ಷೀಯವಾಗಿರಬಾರದು. ಹಿಂದೂಗಳಿಗೆ ಉದಾರತೆ ಪಾಠವನ್ನು ಯಾರೂ ಹೇಳಬೇಕಿಲ್ಲ 

'ಮೇಕೆದಾಟು: ಡಿಎಂಕೆ ಮನವೊಲಿಕೆಗೆ ಕಾಂಗ್ರೆಸ್‌ನವರು ಸ್ಪೆಷಲ್ ಫ್ಲೈಟ್‌ನಲ್ಲಿ ಹೋಗಲಿ'

ಅಂಬೇಡ್ಕರ್ ಸಂವಿಧಾನದಲ್ಲಿ ಹೇಳಿಲ್ಲ ಜಾತ್ಯಾತೀತ ಅಂತಾ: ಸಂವಿಧಾನದಲ್ಲಿ ಅಂಬೇಡ್ಕರ್ (BR Ambedkar) ಅವರು ಜಾತ್ಯತೀತತೆ ಎನ್ನುವುದನ್ನು ಹೇಳಲಿಲ್ಲ. ನಂತರ ತುರ್ತು ಪರಿಸ್ಥಿತಿ ಕಾಲಘಟ್ಟದಲ್ಲಿ ಕಾಂಗ್ರೆಸಿಗರು ಈ ಪದವನ್ನು ತಂದಿಟ್ಟರು. ಯಾಕೆಂದರೆ ಹಿಂದೂಗಳಿಗೆ ಮೋಸ ಮಾಡಲಿಕ್ಕೆ. ಆ ಶಬ್ದ ಇರಬೇಕೋ ಬಿಡಬೇಕೋ ಎನ್ನುವುದು ಚರ್ಚೆ ಆಗಬೇಕು. ಜಾತ್ಯತೀತ ಪದ ಬರುವ ಮುಂಚೆ ದೇಶ ಕೋಮುವಾದಿ ದೇಶವಾಗಿತ್ತೇ? ಈ ನೆಲದ ನಂಬಿಕೆಯಲ್ಲೇ ಸರ್ವಧರ್ಮ ಸಮಭಾವ ಇದೆ. ಇಲ್ಲಿ ಹುಟ್ಟಿದ ಯಾವ ಮತ ಧರ್ಮಗಳು ಸಹ ಇದೇ ಇರಬೇಕೆಂದು ಹೇಳಿಲ್ಲ. 

ಬಹುತ್ವವನ್ನೇ ಒಪ್ಪಿವೆ ಅದಕ್ಕೆ ನಮಗೆ ಸಿಕ್ಕ ಬಳುವಳಿ ಏನು ಎಂದು ಪ್ರಶ್ನಿಸಿದರು.ಮಹಾತ್ಮಗಾಂಧಿ ಅವರು ಹಿಂದೂಗಳ ಭಜನೆಯಲ್ಲಿ ರಘುಪತಿ ರಾಘವ ರಾಜಾರಾಂ ಪತಿತ ಪಾವನ ಸೀತಾರಾಂ ಈಶ್ವರ ಅಲ್ಲಾ ತೇರೇನಾಮ್ ಎಂದು ಹೇಳಿದ್ದರು. ಇದನ್ನು ನಾವು ಎಲ್ಲ ಕಡೆ ಸಂಕೋಚ ಇಲ್ಲದೆ ಹೇಳುತ್ತೇವೆ. ಆದರೆ ಯಾವುದಾದರೂ ಒಂದು ಮಸೀದಿಯಲ್ಲಿ ಈಶ್ವರ ಅಲ್ಲಾ ತೇರೇ ನಾಮ್ ಎಂದು ಹೇಳಿದ್ದನ್ನು ಕೇಳಿದ್ದೀರ ಎಂದರು.ಒಬ್ಬ ಮೌಲ್ವಿ, ಮುತಾವಲ್ಲಿ, ಮುಸ್ಲಿಂ ಧರ್ಮಗುರು ದೇವನೊಬ್ಬ ನಾಮ ಹಲವು ಎಂದು ಹೇಳಿದ್ದನ್ನು ಕೇಳಿದ್ದೀರ? 

ಅಲ್ಲಾ ಮತ್ತು ಈಶ್ವರ ಎಂದು ಹೇಳಿದ್ದನ್ನು ಕೇಳಿದ್ದೀರ? ಅವರು ಬಹುತ್ವವನ್ನು ಒಪ್ಪಿಕೊಳ್ಳದ ಮೇಲೆ ನಮಗೇಕೆ ಮೋಸಮಾಡಬೇಕು ಎಂದು ಪ್ರಶ್ನಿಸಿದರು.ಇಸ್ಲಾಂನಲ್ಲಿ ಜಾತ್ಯತೀತ ಪದಕ್ಕೆ ಅರ್ಥವಿದೆಯೇ? ಹಾಗಿದ್ದರೆ ಅವರು ಪ್ರತಿದಿನ ನಮಾಜ್ನಲ್ಲಿ ಅಲ್ಲಾ ಒಬ್ಬನೇ ದೇವರು ಎಂದು ಕೂಗುವುದೇಕೆ? ಈಶ್ವರ, ಕೃಷ್ಣ, ರಾಮ ಹುಟ್ಟಿದ ಜಾಗದಲ್ಲಿ ಇದನ್ನು ಕೂಗುತ್ತಾರೆ. ಅದನ್ನು ಕೇಳಿಸಿಕೊಂಡು ಸುಮ್ಮನಿರಬೇಕು. ಅವರು ಮಾತ್ರ ಕೋಮುವಾದಿಗಳಾಗಿರಬೇಕು. ಹಿಂದೂಗಳು ಮಾತ್ರ ಜಾತ್ಯತೀತರಾಗಿಬೇಕೆ ಎಂದರು.

ಚಿಕ್ಕಮಗಳೂರು ನಗರಸಭೆ ಸಿಬ್ಬಂದಿ ಕರ್ತವ್ಯಕ್ಕೆ ಚಕ್ಕರ್...ದಿ ಕಾಶ್ಮೀರ್ ಫೈಲ್ಸ್ ಸಿನಿಮಾಕ್ಕೆ ಹಾಜರ್

ಮುಸ್ಲಿಮರು ಮಾತ್ರ ಹಿಂದೂಗಳ ಅಂಗಡಿಯಲ್ಲಿ ವ್ಯಾಪಾರ ಮಾಡಬಾರದು.ಹಿಂದೂಗಳೆಲ್ಲರೂ ಅವರ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಕೆ? ಇದು ಕೊಡು-ಕೊಳ್ಳುವ ನೀತಿ. ಏಕ ಪಕ್ಷೀಯವಲ್ಲ. ಅವರು ಬೇಲಿ ಹಾಕಿಕೊಂಡು ಇನ್ನೊಬ್ಬರ ಬುಟ್ಟಿಗೆ ಮಾತ್ರ ಕೈ ಹಾಕಲು ಬರುವುದಿಲ್ಲ ಎಂದರು.ನಮ್ಮ ಮೂಲ ನಂಬಿಕೆಯಲ್ಲೇ ದೇವನೊಬ್ಬ ನಾಮ ಹಲವು ಎಂದಿದೆ. ಇದು ಇಸ್ಲಾಂನಲ್ಲಿ ಇದೆಯಾ? ಅದಿದ್ದರೆ ಜಗಳವೇ ಇರುವುದಿಲ್ಲವಲ್ಲ. ಅವರು ಅಳವಡಿಸಿಕೊಂಡಿರುವುದನ್ನು ಇನ್ನೊಬ್ಬರ ಮೇಲೆ ಹೇರಲು ಅವಕಾಶವಿದೆಯೇ ಎಂದು ಪ್ರಶ್ನಿಸಿದರು.

50% ಹಿಂದೂ 50% ಮುಸ್ಲಿಮರು ಇರೋ ಕಡೆ ಹಿಂದೂಗಳು ಸುರಕ್ಷಿತರಾಗಿದ್ದಾರಾ: ಶೇ.90 ರಷ್ಟು ಹಿಂದೂಗಳು, ಶೇ.10 ರಷ್ಟು ಮುಸ್ಲಿಮರು ಇರುವ ಕಡೆ ಮುಸ್ಲಿಮರು ಸುರಕ್ಷಿತವಾಗಿದ್ದಾರೆ. ಆದರೆ ಶೇ.50 ರಷ್ಟು ಹಿಂದೂಗಳು, ಶೇ.50 ರಷ್ಟು ಮುಸ್ಲಿಮರು ಇರುವ ಕಡೆ ಹಿಂದೂಗಳು ಸುರಕ್ಷಿತವಾಗಿರಲು ಸಾಧ್ಯವಿಲ್ಲ, ಮುಸ್ಲಿಮರಿಗೆ ಪಾಕಿಸ್ತಾನವನ್ನು ಕೊಟ್ಟಮೇಲೂ ಅವರನ್ನು ಇಲ್ಲಿ ಉಳಿಸಿಕೊಂಡಿದ್ದು ನಮ್ಮ ಔಧಾರ್ಯತನವಲ್ಲವೇ? ಈ ಎಲ್ಲಾ ಸತ್ಯಗೊತ್ತಿದ್ದರೂ ಸೋಗಲಾಡಿತನದ ರಾಜಕಾರಣವನ್ನು ಕಾಂಗ್ರೆಸ್ ಮಾಡಬಹುದು ನಾವು ಮಾಡುವುದಿಲ್ಲ ಎಂದರು.