Asianet Suvarna News Asianet Suvarna News

ವಿಜಯಪುರ: ಭೂತನಾಳ ಕೆರೆಗೆ ಕೃಷ್ಣಾ ನದಿ ನೀರು ಆತಂಕ ಬೇಡ, ಶಾಸಕ ಯತ್ನಾಳ

ಆಲಮಟ್ಟಿ ಜಲಾಶಯ ಹಿನ್ನಿರಿನಿಂದ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಲಿಂಗದಳ್ಳಿ ಜಾಕವೆಲ್‌ದಿಂದ ಕೆರೆಗೆ ನೀರು ತುಂಬಿಸುವ ಕಾರ್ಯ ಆರಂಭಗೊಂಡಿದ್ದು, ಶೀಘ್ರದಲ್ಲೇ ಭೂತನಾಳ ಕೆರೆ ಸಂಪೂರ್ಣ ಭರ್ತಿ ಆಗಲಿದೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ  

Krishna River Water to Bhutanal Lake in Vijayapura Says MLA Basanagouda Patil Yatnal grg
Author
First Published Aug 3, 2023, 9:01 PM IST

ವಿಜಯಪುರ(ಆ.03): ಕೃಷ್ಣಾ ನದಿಯಿಂದ ನಗರ ಹೊರ ವಲಯದ ಐತಿಹಾಸಿಕ ಭೂತನಾಳ ಕೆರೆಗೆ ನೀರು ತುಂಬಿಸುತ್ತಿದ್ದು, ಶೀಘ್ರ ಕೆರೆ ಸಂಪೂರ್ಣ ತುಂಬಲಿದೆ. ಇದರಿಂದ ನಗರದಲ್ಲಿ ಕುಡಿಯುವ ನೀರಿಗೆ ಎಳ್ಳಷ್ಟುತೊಂದರೆ ಆಗುವುದಿಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿರುವ ಐತಿಹಾಸಿಕ ಭೂತನಾಳ ಕೆರೆಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಯ ಉತ್ತರ ಮತ್ತು ಪಶ್ಚಿಮ ಭಾಗದ 10 ವಾರ್ಡ್‌ಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಪ್ರಸಕ್ತ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯದೆ ಇರುವುದರಿಂದ ಕೆರೆಗೆ ನೀರು ಹರಿದು ಬರದೆ ಇರುವ ಕಾರಣ ಕೆರೆಯಲ್ಲಿ ನೀರು ಡೆಡ್‌ ಸ್ಟೋರೇಜ್‌ಗಿಂತ ಕಡಿಮೆ ಆಗಿತ್ತು. ಆಲಮಟ್ಟಿ ಜಲಾಶಯ ಹಿನ್ನಿರಿನಿಂದ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಲಿಂಗದಳ್ಳಿ ಜಾಕವೆಲ್‌ದಿಂದ ಕೆರೆಗೆ ನೀರು ತುಂಬಿಸುವ ಕಾರ್ಯ ಆರಂಭಗೊಂಡಿದ್ದು, ಶೀಘ್ರದಲ್ಲೇ ಭೂತನಾಳ ಕೆರೆ ಸಂಪೂರ್ಣ ಭರ್ತಿ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

BIG3: ಚಿನ್ನದ ಪದಕ ಗೆಲ್ಲೋ ಸ್ಫೂರ್ತಿ ಚಿವುಟಿದ ಕತ್ತಲೆಯ ಜಿಲ್ಲಾ ಕ್ರೀಡಾಂಗಣ: ಟಾರ್ಚ್‌ ಹಿಡಿದು ರನ್ನಿಂಗ್‌ ಅಭ್ಯಾಸ

ಈ ಕೆರೆಯಿಂದ ನಗರದ ಶೇ 30 ರಷ್ಟುಭಾಗಕ್ಕೆ ನೀರು ಪೂರೈಕೆಯಾಗುತ್ತದೆ. ಉಳಿದ ಶೇ. 70 ರಷ್ಟುಭಾಗಕ್ಕೆ ಕೊಲ್ಹಾರ ಜಾಕವೆಲ್‌ದಿಂದ ನೀರು ಪೂರೈಕೆ ಆಗುತ್ತದೆ. ಹೀಗಾಗಿ ವಿಜಯಪುರ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎಳ್ಳಷ್ಟು ಆಗುವುದಿಲ್ಲ. ಸಾರ್ವಜನಿಕರು ಕುಡಿಯುವ ನೀರಿಗಾಗಿ ಆತಂಕ ಪಡುವ ಅಗತ್ಯವಿಲ್ಲ. ಸಮರ್ಪಕವಾಗಿ ನೀರು ಸರಬರಾಜು ಆಗಲಿದೆ ಎಂದು ನಗರ ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Follow Us:
Download App:
  • android
  • ios