ಮಂಡ್ಯ(ಡಿ.06): ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಪ್ರಮುಖ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಅಭ್ಯರ್ಥಿಗಳು ಗುರುವಾರ ಮತದಾನ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಪಟ್ಟಣದ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಮತಗಟ್ಟೆ134ರಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ, ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್‌ ಮತದಾನ ಮಾಡಿದರು. ಜೆಡಿಎಸ್‌ ಅಭ್ಯರ್ಥಿ ಬಿ.ಎಲ್ ದೇವರಾಜು ತಾಲೂಕಿನ ಬಂಡಿಹೊಳೆ ಗ್ರಾಮದಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಹೈದರಾಬಾದ್ ರಾಕ್ಷಸರಿಗೆ ಕನ್ನಡಿಗನಿಂದ ಎನ್‌ಕೌಂಟರ್!

ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪತ್ನಿ ದೇವಕಿ, ಪುತ್ರಿ ನೇಹಾ ಅವರೊಂದಿಗೆ ಮತದಾನ ಮಾಡಿದರು. ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ ನಂತರ ನಾರಾಯಣಗೌಡರು ಕೇಂದ್ರದಿಂದ ಹೊರಬಂದು ವಿಜಯದ ಸಂಕೇತ ಪ್ರದರ್ಶಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ತಮ್ಮ ಪತ್ನಿ ರಮಾಮಣಿ ಅವರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಮತಗಟ್ಟೆ134ರಲ್ಲಿ ಚಂದ್ರಶೇಖರ್‌ ದಂಪತಿಗಳು ಮತ ಚಲಾಯಿಸಿ ನಂತರ ಹೊರ ಬಂದು ವಿಜಯದ ಸಂಕೇತ ತೋರಿಸಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರವೀಂದ್ರಬಾಬು, ಪುರಸಭೆಯ ಸದಸ್ಯ ಡಿ.ಪ್ರೇಮಕುಮಾರ್‌, ಚಂದ್ರಶೇಖರ್‌ ಪುತ್ರಿ ಅಂಶು ಸಾಥ್‌ ನೀಡಿದ್ದಾರೆ.

ವೈದ್ಯೆ ರೇಪ್, ಕೊಲೆ ಪ್ರಕರಣ: ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿ!

ಜೆಡಿಎಸ್‌ ಅಭ್ಯರ್ಥಿ ಬಿ.ಎಲ್. ದೇವರಾಜು ಪತ್ನಿ ಸರ್ವಮಂಗಳಾ ಅವರೊಂದಿಗೆ ತಮ್ಮ ಹುಟ್ಟೂರು ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಂಡಿಹೊಳೆ ಸರ್ಕಾರಿ ಶಾಲೆಯಲ್ಲಿ ಮತ ಚಲಾಯಿಸಿದ್ದಾರೆ.

ಈ ಬಾರಿ ಗೆಲುವು ನಿಶ್ಚಿತವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈಬಲಪಡಿಸಲು ತಾಲೂಕಿನ ಜನತೆ ತಮ್ಮನ್ನು ಆಶೀರ್ವದಿಸಿ ಕೈಹಿಡಿಯುತ್ತಾರೆ. ತಾಲೂಕಿನ ಅಭಿವೃದ್ಧಿಯ ಪರವಾಗಿ ಮತದಾರರು ಮತ ನೀಡುತ್ತಾರೆ. ನನ್ನ ಹ್ಯಾಟ್ರಿಕ್‌ ಗೆಲುವು ಶತಸಿದ್ಧ ಎಂದು ಬಿಜೆಪಿ ಅಭ್ಯರ್ಥಿ ಕೆ.ಸಿ. ನಾರಾಯಣ ಗೌಡ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ, ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜನಪರವಾದ ಕಾರ್ಯಕ್ರಮಗಳು ತಮ್ಮ ಕೈಹಿಡಿಯಲಿವೆ. ಅಲ್ಲದೇ, ಕ್ಷೇತ್ರದಲ್ಲಿ ಕಂಗ್ರೆಸ್‌ಗೆ ಹೆಚ್ಚಿನ ಮನಣೆ ಇದ್ದು, ಜನತೆ ಬಿಜೆಪಿ ಮತ್ತು ಜೆಡಿಎಸ್‌ ತಿರಸ್ಕರಿಸಿ ತಮ್ಮನ್ನು ಗೆಲ್ಲಿಸಲಿದ್ದಾರೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ಹೇಳಿದ್ದಾರೆ.

ಕೆ.ಆರ್‌.ಪೇಟೆ ಶೇ.80ರಷ್ಟುಮತದಾನ

ಕೆ.ಆರ್‌.ಪೇಟೆ ಜೆಡಿಎಸ್‌ ಭದ್ರಕೋಟೆ. ಈ ತಾಲೂಕಿನಲ್ಲಿ ಜೆಡಿಎಸ್‌ ಪರವಾದ ಅಲೆಯಿದೆ. ಅಲ್ಲದೇ, ಈ ಉಪಚುನಾವಣೆಯಲ್ಲಿ ಇದು ಸಾಭೀತಾಗುತ್ತದೆ. ನಾನು ಶಾಸಕನಾಗಬೇಕೆಂಬ ಕನಸು ನನಸಾಗಲಿದೆ. ನನ್ನ ಗೆಲುವು ನಿಶ್ಚಿತವಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎಲ್‌ .ದೇವರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.