Asianet Suvarna News Asianet Suvarna News

ಹೈದರಾಬಾದ್ ರಾಕ್ಷಸರಿಗೆ ಕನ್ನಡಿಗನಿಂದ ಎನ್‌ಕೌಂಟರ್!

ಹೈದ್ರಾಬಾದ್ನಲ್ಲಿ ರಾಕ್ಷಸರಿಗೆ ಕನ್ನಡಿಗನಿಂದಲೇ ಎನ್ಕೌಂಟರ್| ವಿಶ್ವನಾಥ್ ಸಜ್ಜನರ್ ನೇತೃತ್ವದ ತಂಡದಿಂದ ಎನ್ಕೌಂಟರ್| ವಿಶ್ವನಾಥ್ ಸಜ್ಜನರ್, ಸೈಬರಾಬಾದ್ ಪೊಲೀಸ್ ಆಯುಕ್ತ

Hyderabad Encounter Hubli Based IPS officer Vishwanath Sajjanar Lead The Team
Author
Bangalore, First Published Dec 6, 2019, 8:29 AM IST

ಹೈದರಾಬಾದ್[ಡಿ.06]: ಹೈದ್ರಾಬಾದ್ ರೇಪ್ ಹಾಗೂ ಲಕೊಲೆ ಪ್ರಕರಣದ ಆರೋಪಿಗಳು ಪೊಲೀಸ್ ಎನ್ ಕೌಂಟರ್ ನಲ್ಲಿ ಬಲಿಯಾಗಿದ್ದಾರೆ. ಹೀಗಿರುವಾಗ ಅತ್ಯಾಚಾರ ಆರೋಪಿಗಳನ್ನು ರೆನ್ ಕೌಂಟರ್ ಮಾಡಿದ್ದು ಯಾರೆಂಬ ಪ್ರಶ್ನೆ ಮೂಡುವುದು ಸಹಜ. ಸದ್ಯ ಈ ಪ್ರಶ್ನೆಗೆ ಉತ್ತರ ಲಭಿಸಿದ್ದು, ಎನ್ ಕೌಂಟರ್ ನಡೆಸಿದ್ದ ಹುಬ್ಬಳ್ಳಿ ಮೂಲಕ ಪೊಲೀಸ್ ಅಧಿಕಾರಿ ಎಂದು ತಿಳಿದು ಬಂದಿದೆ.

ವೈದ್ಯೆ ರೇಪ್, ಕೊಲೆ ಪ್ರಕರಣ: ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿ!

ಹೌದು ಶುಕ್ರವಾರ ಬೆಳಗ್ಗಿನ ಜಾವ ಸುಮಾರು 03.30ರ ವೇಳೆಗೆ ರಾಷ್ಟ್ರೀಯ ಹೆದ್ದಾರಿ 44ರ ಶಾದ್ ನಗರ ಬಳಿ ನಡೆದ ಎನ್ ಕೌಂಟರ್ ಗೆ ವೈದ್ಯೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳು ಬಲಿಯಾಗಿದ್ದಾರೆ. ಈ ಎನ್‌ಕೌಂಟರ್ ಹುಬ್ಬಳ್ಳಿ ಮೂಲಕ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ನೇತೃತ್ವದ ತಂಡ ನಡೆಸಿದ್ದಾರೆ. ವಿಶ್ವನಾಥ್ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎನ್‌ಕೌಂಟರ್‌ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿರುವ ಸಜ್ಜನರ್ ಈ ಹಿಂದೆ ವಾರಂಗಲ್ ಆ್ಯಸಿಡ್ ಪ್ರಕರಣದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿದ್ದರು.

ಕರ್ನಾಟಕದ ಹುಬ್ಬಳ್ಳಿಯವರು:

ಎನಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ ಸಜ್ಜನರ್ ಮೂಲತಃ ಹುಬ್ಬಳ್ಳಿಯ ಪಗಣಿ ಓಣಿಯವರು. ತಂದೆ ಚನ್ನಬಸಪ್ಪ ಬಿ ಸಜ್ಜನ್, ಟ್ಯಾಕ್ಸ್‌ ಕನ್ಸಲ್ಟಂಟ್ ಆಗಿ ಕೆಲಸ‌ ಮಾಡುತ್ತಿದ್ದರು. ಮೂರು ಜನ ಮಕ್ಕಳ‌ ಪೈಕಿ ವಿಶ್ವನಾಥ ಸಜ್ಜನರ್ ಕಿರಿಯರು. ಹಿರಿಯ ಸಹೋದರ ಡಾ. ಮಲ್ಲಿಕಾರ್ಜುನ ಸಜ್ಜನರ್ ಮಕ್ಕಳ ತಜ್ಞರು‌. 

ವಿಶ್ವನಾಥ ಸಜ್ಜನರ್, ಹುಬ್ಬಳ್ಳಿಯ ಲಾಯ್ಸ್ ಸ್ಕೂಲ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದಿದ್ದರು. ಬಳಿಕ ಜೆಜಿ ಕಾಮರ್ಸ್ ಕಾಲೇಜಿನಲ್ಲಿ  ಬಿಕಾಂ ವ್ಯಾಸಂಗ ಪೂರೈಸಿ, ಕರ್ನಾಟಕದ ವಿಶ್ವವಿದ್ಯಾಲಯದಲ್ಲಿ ಕೌಶಾಳಿಯಲ್ಲಿ ಎಂಬಿಎ ವ್ಯಾಸಂಗ ನಡೆಸಿದ್ದಾರೆ. 1989 MBA ಪದವಿ ಗಳಿಸಿದ ಸಜ್ಜನರ್, 1996 ಯುಪಿಎಸ್ಇ ಪರೀಕ್ಷೆ ತೇರ್ಗಡೆ ಹೊಂದಿದ್ದರು. ಬಳಿಕ ಆಂದ್ರ ಪ್ರದೇಶದ ಕೇಡರ್ ಅಧಿಕಾರಿಯಾಗಿ ಸೇವೆಗೆ ನಿಯುಕ್ತಿ.

"

ಏನಿದು ಹೈದರಾಬಾದ್ ಪ್ರಕರಣ?

ಸಂತ್ರಸ್ತ 27 ವರ್ಷದ ಪಶುವೈದ್ಯೆ ಶಂಶಾಬಾದ್‌ನಲ್ಲಿರುವ ತನ್ನ ಮನೆಯಿಂದ ಕೊಲ್ಲೂರು ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಗೆ ಬುಧವಾರ ಕರ್ತವ್ಯಕ್ಕೆ ದ್ವಿಚಕ್ರ ವಾಹನದ ಮೂಲಕ ತೆರಳಿದ್ದಳು. ಸಂಜೆ ಕರ್ತವ್ಯದಿಂದ ವಾಪಸು ಬರುವಾಗ ಗಚ್ಚಿಬೌಲಿಯಲ್ಲಿ ಚರ್ಮರೋಗ ತಜ್ಞರ ಭೇಟಿ ಮಾಡಬೇಕಿತ್ತು. ಹೀಗಾಗಿ ಸಂಜೆ 6ಕ್ಕೆ ತೊಂಡುಪಲ್ಲಿ ಎಂಬಲ್ಲಿನ ಟೋಲ್‌ ಪ್ಲಾಜಾದಲ್ಲಿ ತನ್ನ ದ್ವಿಚಕ್ರ ವಾಹನ ನಿಲ್ಲಿಸಿದ ಈಕೆ, ಅಲ್ಲಿಂದ ಬಾಡಿಗೆ ಕಾರಿನಲ್ಲಿ ಗಚ್ಚಿಬೌಲಿಗೆ ತೆರಳಿದಳು. ಆದರೆ ರಾತ್ರಿ 9ರ ಸುಮಾರಿಗೆ ಟೋಲ್‌ ಪ್ಲಾಜಾಗೆ ಮರಳುವ ವೇಳೆ ಆಕೆಯ ಸ್ಕೂಟರ್‌ ಪಂಕ್ಚರ್‌ ಆಗಿತ್ತು.

ಮನುಷ್ಯ ರೂಪದ ರಾಕ್ಷಸರಿದ್ದಾರೆ: ಪೋರ್ನ್‌ ಸೈಟ್‌ನಲ್ಲಿ ಪ್ರಿಯಾಂಕಾ ರೇಪ್ ವಿಡಿಯೋ ಹುಡುತ್ತಿದ್ದಾರೆ!

ಈ ವೇಳೆ ಸ್ಥಳದಲ್ಲಿಯೇ ಇದ್ದ ಕೆಲ ಟ್ರಕ್‌ ಚಾಲಕರು ಹಾಗೂ ಕ್ಲೀನರ್‌ಗಳು, ‘ನಿಮ್ಮ ವಾಹನದ ಪಂಕ್ಚರ್‌ ಹಾಕಿಸಿಕೊಡುತ್ತೇವೆ’ ಎಂದು ಸಹಾಯಕ್ಕೆ ಧಾವಿಸಿದ್ದರು. ಈ ಪೈಕಿ ಒಬ್ಬ ಸ್ಕೂಟರ್‌ ಅನ್ನು ಸಮೀಪದ ಪಂಕ್ಚರ್‌ ಶಾಪ್‌ಗೆ ತೆಗೆದುಕೊಂಡು ಹೋಗಿದ್ದ. ಈ ವೇಳೆ, ತನ್ನ ಸೋದರಿಗೆ ಕರೆ ಮಾಡಿದ ಪಶುವೈದ್ಯೆ, ‘ನನ್ನ ಗಾಡಿ ಪಂಕ್ಚರ್‌ ಆಗಿದೆ. ಇಲ್ಲೊಬ್ಬರು ಬಂದು ವಾಹನವನ್ನು ಪಂಕ್ಚರ್‌ ಶಾಪ್‌ಗೆ ತೆಗೆದುಕೊಂಡು ಹೋಗಿದ್ದಾರೆ. ನನ್ನ ಸುತ್ತ ಕೆಲವು ಟ್ರಕ್‌ ಡ್ರೈವರ್‌ಗಳಿದ್ದು, ಅವರನ್ನು ನೋಡಿ ನನಗೆ ಭಯವಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಳು. ಈ ವೇಳೆ ‘ಗಾಡಿಯನ್ನು ಟೋಲ್‌ ಪ್ಲಾಜಾದಲ್ಲೇ ಬಿಡು. ಬಾಡಿಗೆ ಕಾರಿನಲ್ಲಿ ಮನೆಗೆ ಮರಳು’ ಎಂದು ಸೂಚಿಸಿ ಸೋದರಿ ಫೋನ್‌ ಇಟ್ಟಳು. ಇದಾದ ಕೆಲವು ಹೊತ್ತಿನ ಬಳಿಕ ಮತ್ತೆ ಸೋದರಿ ಪಶುವೈದ್ಯೆಗೆ ಕರೆ ಮಾಡಿದಾಗ, ಆಕೆಯ ಮೊಬೈಲ್‌ ಸ್ವಿಚ್‌ಆಫ್‌ ಆಗಿತ್ತು.

ಶವದ ಜೊತೆ ಸೆಕ್ಸ್‌ಗಿಳಿಯುವಷ್ಟು ಸ್ಯಾಡಿಸ್ಟ್ ಆಗೋದಾದ್ರೂ ಯಾಕೆ?

ಇದೇ ಸಂದರ್ಭ ಬಳಸಿಕೊಂಡ ಟ್ರಕ್‌ ಚಾಲಕರು ಹಾಗೂ ಕ್ಲೀನರ್‌ಗಳು, ಪಶುವೈದ್ಯೆಯನ್ನು ಟೋಲ್‌ ಪ್ಲಾಜಾ ಸಮೀಪದ ನಿರ್ಜನ ಕೋಣೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದಾರೆ. ಬಳಿಕ ದೇಹವನ್ನು 25 ಕಿ.ಮೀ. ದೂರದ ಚಾತನಪಲ್ಲಿ ಎಂಬಲ್ಲಿಗೆ ಸಾಗಿಸಿ, ಅದನ್ನು ಶಾದ್‌ನಗರ ಪ್ರದೇಶದ ಹೈದರಾಬಾದ್‌-ಬೆಂಗಳೂರು ಹೈವೇ ಬ್ರಿಜ್‌ ಕೆಳಗೆ ಎಸೆದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಈ ನಡುವೆ ಪಶುವೈದ್ಯೆ ನಾಪತ್ತೆಯಾಗಿದ್ದರಿಂದ ಆತಂಕಿತರಾದ ಆಕೆಯ ಕುಟುಂಬದವರು 11 ಗಂಟೆ ಸುಮಾರಿಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಆಗ ಪೊಲೀಸರು ಹುಡುಕಾಟ ನಡೆಸಿದಾಗ ಶಾದ್‌ನಗರ ಬ್ರಿಜ್‌ ಕೆಳಗೆ ಗುರುವಾರ ಸುಟ್ಟಮೃತದೇಹ ಪತ್ತೆಯಾಗಿದೆ.

ಉದ್ದೇಶಪೂರ್ವಕ ಪಂಕ್ಚರ್‌:

‘ಬಂಧಿತ ನಾಲ್ವರೂ ದುರುಳರು ಉದ್ದೇಶಪೂರ್ವಕವಾಗಿ ಪಶುವೈದ್ಯೆಯ ದ್ವಿಚಕ್ರವಾಹನವನ್ನು ಪಂಕ್ಚರ್‌ ಮಾಡಿದ್ದರು ಎಂದು ದೃಢಪಟ್ಟಿದೆ. ಬಳಿಕ ಸಹಾಯ ಮಾಡುವ ನೆಪದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದು’ ಎಂದು ಪೊಲೀಸರು ಹೇಳಿದ್ದಾರೆ.

ವೈದ್ಯೆ ಕಿರುಚದಂತೆ ವಿಸ್ಕಿ ಸುರಿದಿದ್ದ ರೇಪಿಸ್ಟ್‌ಗಳು: ಪ್ರಜ್ಞೆ ತಪ್ಪಿದಾಗ ಅತ್ಯಾಚಾರ!

ಸಿಸಿಟೀವಿಯಲ್ಲಿ ಸುಳಿವು:

‘ಟೋಲ್‌ನಾಕಾದ ಸಿಸಿಟೀವಿಯನ್ನು ಪೊಲೀಸರು ಪರಿಶೀಲಿಸಿದಾಗ, ಗಾಡಿ ರಿಪೇರಿ ಮಾಡಿಸಿಕೊಡುವ ನೆಪದಲ್ಲಿ ನಾಲ್ವರು ಬಂದಿದ್ದು ಕಂಡುಬಂದಿದೆ. ಇದರ ಜಾಡನ್ನು ಹಿಡಿದು ಪೊಲೀಸರು ಶೋಧಿಸಿದಾಗ ಇಬ್ಬರು ಟ್ರಕ್‌ ಚಾಲಕರು ಹಾಗೂ ಇಬ್ಬರು ಕ್ಲೀನರ್‌ಗಳನ್ನು ಬಂಧಿಸಿದ್ದಾರೆ. ಇವರೆಲ್ಲರೂ ಕೃತ್ಯ ಎಸಗಿದಾಗ ಪಾನಮತ್ತರಾಗಿದ್ದು ಹಾಗೂ ಸಾಮೂಹಿಕ ಅತ್ಯಾಚಾರ ನಡೆಸಿದ್ದು ದೃಢಪಟ್ಟಿದೆ’ ಎಂದು ಸೈಬರಾಬಾದ್‌ ಪೊಲೀಸ್‌ ಆಯುಕ್ತ ವಿ.ಸಿ. ಸಜ್ಜನರ ಹೇಳಿದರು.

Follow Us:
Download App:
  • android
  • ios