ಉಡುಪಿ(24): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆಯ ವಿಡಿಯೋ ರಿಲೀಸ್ ಆಗಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಗರಂ ಆಗಿದ್ದಾರೆ. ಪೊಲೀಸರು ಈಗಲೇ ಯಾಕೆ ವಿಡಿಯೋ ಬಿಡುಗಡೆ ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ಮಂಗಳೂರು ಗಲಭೆ ವಿಚಾರವಾಗಿ ಪ್ರತಿಕ್ರಿಯಿಸಿ, ಪೊಲೀಸರು ಯಾಕೆ ವಿಡಿಯೋ ಬಿಡುಗಡೆ ಮಾಡಿದ್ದು? ಮಾದ್ಯಮಗಳಿಗೆ ಯಾಕೆ ಈ ವಿಡಿಯೋಗಳನ್ನು ಕೊಟ್ಟಿದ್ದು. ಸಿ.ಐ.ಡಿ ತನಿಖೆಗೆ ಕೊಟ್ಟ ಮೇಲೆ ವಿಡಿಯೋ ತನಿಖೆಗೆ ನೀಡಬೇಕಾಗಿತ್ತು ಎಂದು ಹೇಳಿದ್ದಾರೆ.

ಮಂಗಳೂರು ಗಲಭೆ: ಕಾರಣವೇ ಇಲ್ಲದೆ ಅಮಾಯಕರನ್ನು ಕೊಂದರು ಎಂದ ಮಾಜಿ ಸಂಸದ

ಹಾಲಿ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಿಂದ ಘಟನೆ ಬಗ್ಗೆ ತನಿಖೆಯಾಗಬೇಕು. ಉನ್ನತ ಮಟ್ಟದ ತನಿಖೆಯಾಗಬೇಕು. ಸಿ.ಐ.ಡಿ,ಮ್ಯಾಜಿಸ್ಟ್ರೇಟ್ ತನಿಖೆ ಬಗ್ಗೆ ವಿಶ್ವಾಸ ವಿಲ್ಲ. ಕಮಿಷನರ್,ಇಬ್ಬರು ಇನ್ಸ್ಪೆಕ್ಟರ್ ಮೇಲೆ ಶಂಕೆ ಇದೆ. ಪ್ರತಿಭಟನೆ ಮಾಡುವುದಕ್ಕೆ ಸರ್ಕಾರ ಅವಕಾಶ ಕೊಡಬೇಕಿತ್ತು ಎಂದು ಅವರು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಮಂಗಳೂರು ಗಲಭೆಯ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಂಗಳೂರಲ್ಲಿ ನಿನ್ನೆ ಶಾಂತಿಯುತ ಪ್ರತಿಭಟನೆ ಆಗಿದೆ. ಪೋಲಿಸರಿಗೆ ಪರಿಸ್ಥಿತಿ ಹ್ಯಾಂಡಲ್ ಮಾಡೋದಿಕ್ಕೆ ಆಗಿಲ್ಲ. ಪೊಲೀಸರು ಪ್ರಚೋದನಕಾರಿಯಾಗಿ ನಡೆದುಕೊಂಡಿದ್ದಾರೆ. ಅಮಾಯಕರು ಸತ್ತು ಹೋಗಿದ್ದಾರೆ. ಇದರಲ್ಲಿ ಸರ್ಕಾರದ ವೈಫಲ್ಯ ಇದೆ ಎಂದಿದ್ದಾರೆ.

ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಯಾಕೆ ಮಾಡಿದ್ದಾರೆ..? ಅಷ್ಟು ಸುಲಭವಾಗಿ ಗೋಲಿಬಾರ್ ಹೇಗೆ ಮಾಡಿದರು ಎಂದು ಉಡುಪಿಯಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಪ್ರಶ್ನಿಸಿದ್ದಾರೆ.

ಕಮಿಷನರ್‌ ಮನವಿಗೆ ಮಾಸ್ ರಿಪ್ಲೈ: ಮಂಗಳೂರು ಗಲಭೆಯ 1000ಕ್ಕೂ ಹೆಚ್ಚು ವಿಡಿಯೋ ಲಭ್ಯ