Asianet Suvarna News Asianet Suvarna News

ಮಂಗಳೂರು: 'ಸತ್ತವರ ಮನೆಗೆ ಭೇಟಿ ನೀಡದ ಉಸ್ತುವಾರಿ ಸಚಿವ, ಶಾಸಕ'..!

ಮಂಗಳೂರಿನಲ್ಲಿ ನಡೆದ ಪೊಲೀಸ್‌ ಗೋಲಿಬಾರ್‌ನಲ್ಲಿ ಸಾವಿಗೀಡಾದ ಇಬ್ಬರು ಸಂತ್ರಸ್ತರ ಮನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‌ ಇದುವರೆಗೂ ಭೇಟಿ ನೀಡಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಆರೋಪಿಸಿದ್ದಾರೆ.

kota srinivas vedavyas kamath never visit golibar victims home says Ivan D'Souza
Author
Bangalore, First Published Dec 23, 2019, 12:12 PM IST

ಮಂಗಳೂರು(ಡಿ.23): ಮಂಗಳೂರಿನಲ್ಲಿ ನಡೆದ ಪೊಲೀಸ್‌ ಗೋಲಿಬಾರ್‌ನಲ್ಲಿ ಸಾವಿಗೀಡಾದ ಇಬ್ಬರು ಸಂತ್ರಸ್ತರ ಮನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‌ ಇದುವರೆಗೂ ಭೇಟಿ ನೀಡಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಆರೋಪಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಮಂಗಳೂರು ಗಲಭೆಯ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಮ್ಮದೇ ಕಾರ್ಯಕ್ಷೇತ್ರದಲ್ಲಿ ದುರ್ಘಟನೆ ನಡೆದಿದ್ದರೂ ಕನಿಷ್ಠ ಸಂತ್ರಸ್ತರ ಮನೆಗೆ ಹೋಗುವ ಸೌಜನ್ಯವನ್ನೂ ಜನಪ್ರತಿನಿಧಿಗಳು ತೋರಿಲ್ಲ. ಇದರ ಅರ್ಥವೇನು? ಗೋಲಿಬಾರ್‌ ಮತ್ತು ಲಾಠಿಚಾರ್ಜ್‌ನಿಂದ ಅನೇಕ ಮಂದಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲಿಗೂ ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸವನ್ನೂ ಮಾಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.

ಸಿಎಂ ಬಂದದ್ದು ಶಹಬ್ಬಾಸ್‌ಗಿರಿಗೆ:

ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳೂರಿಗೆ ಆಗಮಿಸಿದ್ದು ಪೊಲೀಸರಿಗೆ ಶಹಬ್ಬಾಸ್‌ಗಿರಿ ನೀಡಲು ಎಂದು ಆರೋಪಿಸಿದ ಐವನ್‌, ಬಿಜೆಪಿ ಸರ್ಕಾರ ದ್ವೇಷದ ನೀತಿ ಅನುಸರಿಸುತ್ತಿದೆ ಎಂದಿದ್ದಾರೆ.

ಮಂಗಳೂರು ಗೋಲಿಬಾರ್: 3 ಕಡೆ ಶಾಸಕ ಖಾದರ್ ವಿರುದ್ಧ ದೂರು ದಾಖಲು

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಮುಖಂಡರಾದ ಶಶಿಧರ ಹೆಗ್ಡೆ, ಅಬ್ದುಲ್‌ ರವೂಫ್‌, ನವೀನ್‌ ಡಿಸೋಜ, ಜಿ.ಎ. ಬಾವ ಮತ್ತಿತರರಿದ್ದರು.

Follow Us:
Download App:
  • android
  • ios