Asianet Suvarna News Asianet Suvarna News

ಕುಹಕದ ಪ್ರಶ್ನೆಗಳಿಗೆ ಉತ್ತರ ಕೊಡಬೇಕಿಲ್ಲ: ಕೋಟ ತಿರುಗೇಟು

  • ಡ್ರಗ್ಸ್ ವಿಚಾರದಲ್ಲಿ ಬಿಜೆಪಿಯವರನ್ನು ಟೆಸ್ವ್‌ ಮಾಡಬೇಕೆಂಬ ಶಿವರಾಜ ತಂಗಡಗಿ ಹೇಳಿಕೆ 
  • ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ ಪ್ರತಿಕ್ರಿಯೆ 
  • ಕುಹಕದ ಪ್ರಶ್ನೆಗಳಿಗೆ ಉತ್ತರ ಕೊಡಬೇಕಿಲ್ಲ ಎಂದ ಸಚಿವ ಕೋಟಾ
Kota srinivas poojary reacts to Shivaraj tangadagi statement snr
Author
Bengaluru, First Published Sep 10, 2021, 9:31 AM IST
  • Facebook
  • Twitter
  • Whatsapp

ಮಡಿಕೇರಿ (ಸೆ.10): ಡ್ರಗ್ಸ್ ವಿಚಾರದಲ್ಲಿ ಬಿಜೆಪಿಯವರನ್ನು ಟೆಸ್ವ್‌ ಮಾಡಬೇಕೆಂಬ ಶಿವರಾಜ ತಂಗಡಗಿ ಹೇಳಿಕೆ ಬಗ್ಗೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ ಪ್ರತಿಕ್ರಿಯೆ ನೀಡಿದ್ದು, ಕುಹಕದ ಪ್ರಶ್ನೆಗಳಿಗೆ ಉತ್ತರ ಕೊಡಬೇಕಿಲ್ಲ ಎಂದು ಹೇಳಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಸರ್ಕಾರ ಗಟ್ಟಿನಿರ್ಧಾರ ತೆಗೆದುಕೊಂಡಿದೆ. ಎಂಥ ಕಠಿಣ ಪರಿಸ್ಥಿತಿ ಬಂದರೂ ಎದುರಿಸುತ್ತೇವೆ. ಡ್ರಗ್ಸ್ ದಂಧೆಯನ್ನು ಮಟ್ಟಹಾಕುತ್ತೇವೆ. ಎಂಥಾ ಶಕ್ತಿಗಳಿಗೂ ಸರ್ಕಾರ ಬಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ನಾಯಕರೆಲ್ಲರ ಕೂದಲು ಚೆಕ್‌ ಮಾಡಬೇಕು: ಶಿವರಾಜ ತಂಗಡಗಿ

ಸೆಲೆಬ್ರಿಟಿ ಡ್ರಗ್ಸ್ ವಿಚಾರದಲ್ಲಿ ಮಂಗಳೂರು ಪೊಲೀಸರು ಸಾಫ್ಟ್ ಕಾರ್ನರ್‌ ತಾಳಿದ್ದಾರೆಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಯಾವ ಸಾಫ್ಟ್ ಕಾರ್ನರೂ ಇಲ್ಲ. ಪೊಲೀಸರು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿ, ಗೃಹ ಸಚಿವರು ಆದೇಶ ಕೊಟ್ಟಿದ್ದಾರೆ. ಡ್ರಗ್ಸ್  ಲಾಬಿಯನ್ನು ಮಟ್ಟಹಾಕುತ್ತೇವೆ ಎಂದು ಹೇಳಿದರು.

Follow Us:
Download App:
  • android
  • ios