Asianet Suvarna News Asianet Suvarna News

ಬಿಜೆಪಿ ನಾಯಕರೆಲ್ಲರ ಕೂದಲು ಚೆಕ್‌ ಮಾಡಬೇಕು: ಶಿವರಾಜ ತಂಗಡಗಿ

*  ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಡ್ರಗ್ಸ್‌ ಕಿರಾಣಿ ಮಾರಿದಂತೆ ಮಾರಾಟ
*  ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜನ್ಮತಳೆದ ಇಂದಿರಾ ಕ್ಯಾಂಟೀನ್‌
*  ಬಿಜೆಪಿಯವರು ಡ್ರಗ್ಸ್‌ ತೆಗೆದುಕೊಂಡವರಂತೆ ಮಾತನಾಡುತ್ತಾರೆ 

Congress Leader Shivaraj Tangadagi Slams BJP grg
Author
Bengaluru, First Published Sep 9, 2021, 8:36 AM IST
  • Facebook
  • Twitter
  • Whatsapp

ಕೊಪ್ಪಳ(ಸೆ.09): ಇಂದಿರಾ ಕ್ಯಾಂಟೀನ್‌ ಹೆಸರು ಬದಲಾಯಿಸುವಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಹೇಳಿದ್ದನ್ನು ಹಾಗೂ ನನ್ನನ್ನು ಕಾಂಗ್ರೆಸ್‌ನವರು ರೇಪ್‌ ಮಾಡುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿರುವುದನ್ನು ನೋಡಿದರೆ ಇವರೇ ಡ್ರಗ್ಸ್‌ ತೆಗೆದುಕೊಂಡವರಂತೆ ಮಾತನಾಡುತ್ತಾರೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಕುಟುಕಿದ್ದಾರೆ.

ಕೊಪ್ಪಳದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರೆಲ್ಲರ ಕೂದಲು ಚೆಕ್‌ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಡ್ರಗ್ಸ್‌ ಕಿರಾಣಿ ಮಾರಿದಂತೆ ಮಾರಾಟವಾಗುತ್ತಿದೆ. ಇದಕ್ಕೆ ಇವರು ಹೊಣೆಯಲ್ಲವೇ ಎಂದು ಪ್ರಶ್ನೆ ಮಾಡಿದರು.

ಇವಿಎಂ ಮೂಲಕವೇ ಬಿಜೆಪಿ ಪಾಲಿಕೆ ಚುನಾವಣೆ ಜಯಿಸಿದೆ : ಕೈ ನಾಯಕರ ಆರೋಪ

ನಿರೂಪಕಿ ಅನುಶ್ರೀ ಅವರನ್ನು ಚೆಕ್‌ ಮಾಡುವ ಮೊದಲು ಅಧಿಕಾರದಲ್ಲಿ ಇರುವ ಬಿಜೆಪಿಯನ್ನು ಚೆಕ್‌ ಮಾಡಬೇಕು. ಪೆಡ್ಲರ್‌ಗಳು ದೊಡ್ಡ ದೊಡ್ಡವರನ್ನು ಮತ್ತು ಅವರ ಮಕ್ಕಳನ್ನೇ ಟಾರ್ಗೆಟ್‌ ಮಾಡುತ್ತಿದ್ದಾರೆ. ಈ ಬಗ್ಗೆಯೂ ತನಿಖೆಯಾಗಬೇಕು. ಇಂದಿರಾ ಕ್ಯಾಂಟೀನ್‌ ನಮ್ಮ ಸರ್ಕಾರದ ಅವಧಿಯಲ್ಲಿ ಜನ್ಮತಳೆದಿದೆ. ಈಗ ಅದರ ಹೆಸರು ಇವರು ಬದಲಾಯಿಸುತ್ತಾರೆ ಎಂದು ಕಿಡಿಕಾರಿದರು.
 

Follow Us:
Download App:
  • android
  • ios