ಹೆಣ್ಣೆಂಬ ಕಾರಣಕ್ಕೆ ಹುಟ್ಟಿದ ಮಗುವನ್ನೇ ಮುಳ್ಳಲ್ಲಿ ಬೀಸಾಡಿ ಹೋದ ಪೋಷಕರು
ಹೆಣ್ಣು ಮಗು ಹುಟ್ಟಿದೆ ಎಂಬ ಕಾರಣಕ್ಕೆ ಬೆಳಗ್ಗೆ ತಾನೆ ಹುಟ್ಟಿದ ಇನ್ನೂ ಕಣ್ಣನ್ನು ಬಿಡದ ನವಜಾತ ಶಿಶುವನ್ನು ಮುಳ್ಳಿನ ಬೇಲಿಯಲ್ಲಿ ಬೀಸಾಡಿ ಹೋಗಿದ್ದಾರೆ.
ಕೊಪ್ಪಳ (ಜೂ.08): ರಾಜ್ಯದಲ್ಲಿ ಮಕ್ಕಳಿಲ್ಲದೇ ಸಾಕಷ್ಟು ಜನರು ಜೀವನಪೂರ್ತಿ ಬಳಲುವುದನ್ನು ನಾವು ನೋಡಿದ್ದೇವೆ. ಆದರೆ, ಹೆಣ್ಣು ಮಗು ಹುಟ್ಟಿದೆ ಎಂಬ ಕಾರಣಕ್ಕೆ ಬೆಳಗ್ಗೆ ತಾನೆ ಹುಟ್ಟಿದ ಇನ್ನೂ ಕಣ್ಣನ್ನು ಬಿಡದ ನವಜಾತ ಶಿಶುವನ್ನು ಮುಳ್ಳಿನ ಬೇಲಿಯಲ್ಲಿ ಬೀಸಾಡಿ ಹೋಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ.
ಹೆಣ್ಣು ಮಗು ಎಂದು ನವಜಾತ ಶಿಶುವನ್ನು ಮುಳ್ಳಿನಲ್ಲಿ ಎಸೆದು ಹೋದ ಪಾಪಿ ತಾಯಿ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪ್ರಗತಿನಗರ ಗ್ರಾಮದಲ್ಲಿ ಘಟನೆ ನಡೆದಿದೆ. ಬೆಳಗಿನ ಜಾವ ನವಜಾತ ಶಿಶು ಅಳುವುದನ್ನು ಕಂಡ ಸ್ಥಳೀಯರು. ನವಜಾತ ಶಿಶುವನ್ನು ರಕ್ಷಣೆ ಮಾಡಿ ಆರೈಕೆ ಮಾಡಿದ್ದಾರೆ. ಹೆರಿಗೆಯಾದ ಬಳಿಕ ಮಗುವನ್ನು ಎಸೆದು ಹೋದ ಪಾಪಿ ತಾಯಿಯನ್ನು ಹುಡಕಿದರೂ ಪತ್ತೆಯಾಗಿಲ್ಲ. ನಂತರ, ಸ್ಥಳೀಯ ಮಹಿಳೆಯರು ಮಗುವನ್ನು ರಕ್ಷಣೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪ್ರಗತಿನಗರ ಗ್ರಾಮದ ಗಂಗಮ್ಮ ಎನ್ನುವವರ ಮನೆಯಲ್ಲಿ ಮಗು ಆರೈಕೆ ಆಗುತ್ತಿದೆ. ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ಮಾಡಿದ್ದಾರೆ.
Bengaluru ಕುಡಿದ ಮತ್ತಲ್ಲಿ ಬಾಲಕನ ಮೇಲೆಯೇ ವಾಟರ್ ಟ್ಯಾಂಕರ್ ಹರಿಸಿದ ಚಾಲಕ:
ಜಗತ್ತನ್ನು ನೋಡುವ ಮೊದಲೇ ಅನಾಥವಾದ ಮಗು: ಎಷ್ಟೋ ಜನರು ಮಕ್ಕಳಿಲ್ಲ ಎಂಬ ಕೊರಗಿನಿಂದಲೇ ಜೀವನ ನಡೆಸುತ್ತಿರುವಾಗ ಹುಟ್ಟಿದ ಆರೋಗ್ಯವಂತ ಹೆಣ್ಣು ಮಗುವನ್ನು ಮುಳ್ಳಿನ ಬೇಲಿಯಲ್ಲಿ ಬೀಸಾಡಿ ಹೋಗಿರುವ ಘಟನೆಯಿಂದ ಇಡೀ ಮಾನವ ಜನಾಂಗವೇ ತಲೆ ತಗ್ಗಿಸುವಂತಾಗಿದೆ. ಇನ್ನು ತಾಯಿ ತನ್ನ ಮಗುವನ್ನು ಯಾವುದಾದರೂ ಅನಾಥಾಶ್ರಮಕ್ಕೆ ಕೊಟ್ಟಿದ್ದರೂ ಮಗು ಬೆಳೆಯುತ್ತಿತ್ತು. ಆದರೆ, ಆಗತಾನೆ ಹುಟ್ಟಿ ಮೈಮೇಲಿನ ರಕ್ತವೂ ಮಾಸಿಲ್ಲ, ಕಣ್ಣು ಬಿಟ್ಟು ಜಗತ್ತನ್ನೂ ನೋಡದ ಮಗುವನ್ನು ಹೀಗೆ ಅನಾಥವಾಗಿ ಬೀದಿಯಲ್ಲಿ ಬೀಸಾಡಿದ್ದು ಸರಿಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ತಾಯಿಗೆ ಎಷ್ಟೇ ಕಷ್ಟವಿದ್ದರೂ ಮಾನವೀಯತೆ ದೃಷ್ಟಿಯಿಂದ ಮಗುವನ್ನು ರಕ್ಷಣೆ ಮಾಡದೇ ಬೀದಿಯಲ್ಲಿ ಬಿಟ್ಟು ಹೋಗಿದ್ದು, ಅತ್ಯಂತ ದುರಾದೃಷ್ಟಕರ ಘಟನೆಯಾಗಿದೆ. ಇನ್ನು ಸ್ಥಳೀಯ ಮಹಿಳೆಯರು ಮಗುವನ್ನು ರಕ್ಷಿಸಿ ಆರೈಕೆ ಮಾಡಿ ಮಾನವೀಯತೆ ತೋರಿಸಿದ್ದಾರೆ.
ಹುಟ್ಟಿದ ಮಗುವಿಗೆ ಹಾಲುಣಿಸದ ತಾಯಿ: ಇನ್ನು ಆಗತಾನೆ ಹುಟ್ಟಿದ ಮಗುವಿನ ಮೇಲಿನ ರಸ್ತವೂ ಕೂಡ ಆರಿಲ್ಲ. ಕರುಳ ಬಳ್ಳಿಯನ್ನು ಸುರಿಯಾಗಿ ಕತ್ತರಿಸಿಲ್ಲ. ತಾಯಿಯ ಒಂದು ಹನಿ ಎದೆ ಹಾಲನ್ನೂ ಕುಡಿದಿಲ್ಲ. ಇನ್ನು ಕಣ್ಣು ಬಿಟ್ಟು ಜಗತ್ತು ನೋಡುತ್ತಿದ್ದಂತೆ, ಬಾಬಿ ಬಿಟ್ಟು ಅಮ್ಮಾ ಎಂದು ಅಳುತ್ತಿದ್ದಂತೆ ಮಗು ಬೀದಿಯಲ್ಲಿ ಅನಾಥವಾಗಿ ಬಿದ್ದಿತ್ತು. ತಂದೆ- ತಾಯಿ ರಕ್ತ ಹಂಚಿಕೊಂಡು ಹುಟ್ಟಿದ್ದು ಬಿಟ್ಟರೆ ಈ ಮಗುವಿಗೆ ಪೋಷಕರ ಬೇರ್ಯಾವ ಆರೈಕೆಯೂ ಸಿಕ್ಕಿಲ್ಲ. ಇಂತಹ ಅವಸ್ಥೆ ಯಾವ ಮಗುವಿಗೂ ಬಾರದಿರಲಿ.
BENGALURU: ಶಾಲಾ ಬಸ್ ಹರಿದು ಸ್ಥಳದಲ್ಲೇ 7 ವರ್ಷದ ವಿದ್ಯಾರ್ಥಿನಿ ಸಾವು
ಶಾಲಾ ಬಸ್ ಹರಿದು ಸ್ಥಳದಲ್ಲೇ 7 ವರ್ಷದ ವಿದ್ಯಾರ್ಥಿನಿ ಸಾವು: ಬೆಂಗಳೂರು (ಜೂ.08): ನಗರದ ತಾವರೆಕೆರೆಯಲ್ಲಿ ಶಾಲೆಯ ಬಸ್ ಹರಿದು ಶಾಲಾ ವಿದ್ಯಾರ್ಥಿನಿ ಸಾವನ್ನಪ್ಪಿರೋ ಘಟನೆ ನಡೆದಿದೆ. ಕೃಷ್ಣೇಗೌಡ ರಾಧಾ ದಂಪತಿಯ ಪುತ್ರಿ, ಎಂಇಎಸ್ ಶಾಲೆಯ ವಿದ್ಯಾರ್ಥಿನಿ 7 ವರ್ಷದ ಲಿಸ್ಮಿತಾ ಮೃತ ಬಾಲಕಿ. ನಿನ್ನೆ ಶಾಲೆಯಿಂದ ಮನೆಗೆ ವಾಪಸ್ ಆಗಿ ಬಸ್‌ನಿಂದ ಇಳಿದ ವೇಳೆ ಮನೆ ಮುಂದೆಯೇ ಬಾಲಕಿ ಮೇಲೆ ಶಾಲಾ ಬಸ್ ಹರಿದಿದೆ. ವಾಹನ ಹರಿದು ತೀವ್ರವಾಗಿ ಗಾಯಗೊಂಡಿದ್ದ ಲಿಸ್ಮಿತಾಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮಗು ಸಾವನ್ನಪ್ಪಿದ್ದು, ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಎಂಇಎಸ್ ಶಾಲೆಯ ಆಡಳಿತ ಮಂಡಳಿ ಹಾಗೂ ಡ್ರೈವರ್ ವಿರುದ್ಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.