Bengaluru: ಶಾಲಾ ಬಸ್ ಹರಿದು ಸ್ಥಳದಲ್ಲೇ 7 ವರ್ಷದ ವಿದ್ಯಾರ್ಥಿನಿ ಸಾವು
ನಗರದ ತಾವರೆಕೆರೆಯಲ್ಲಿ ಶಾಲೆಯ ಬಸ್ ಹರಿದು ಶಾಲಾ ವಿದ್ಯಾರ್ಥಿನಿ ಸಾವನ್ನಪ್ಪಿರೋ ಘಟನೆ ನಡೆದಿದೆ. ಎಂಇಎಸ್ ಶಾಲೆಯ ವಿದ್ಯಾರ್ಥಿನಿ 7 ವರ್ಷದ ಕೃಷ್ಣೇಗೌಡ ರಾಧಾ ದಂಪತಿಯ ಪುತ್ರಿ ಲಿಸ್ಮಿತಾ ಮೃತ ಬಾಲಕಿ.

ಬೆಂಗಳೂರು (ಜೂ.08): ನಗರದ ತಾವರೆಕೆರೆಯಲ್ಲಿ ಶಾಲೆಯ ಬಸ್ ಹರಿದು ಶಾಲಾ ವಿದ್ಯಾರ್ಥಿನಿ ಸಾವನ್ನಪ್ಪಿರೋ ಘಟನೆ ನಡೆದಿದೆ. ಕೃಷ್ಣೇಗೌಡ ರಾಧಾ ದಂಪತಿಯ ಪುತ್ರಿ, ಎಂಇಎಸ್ ಶಾಲೆಯ ವಿದ್ಯಾರ್ಥಿನಿ 7 ವರ್ಷದ ಲಿಸ್ಮಿತಾ ಮೃತ ಬಾಲಕಿ. ನಿನ್ನೆ ಶಾಲೆಯಿಂದ ಮನೆಗೆ ವಾಪಸ್ ಆಗಿ ಬಸ್‌ನಿಂದ ಇಳಿದ ವೇಳೆ ಮನೆ ಮುಂದೆಯೇ ಬಾಲಕಿ ಮೇಲೆ ಶಾಲಾ ಬಸ್ ಹರಿದಿದೆ. ವಾಹನ ಹರಿದು ತೀವ್ರವಾಗಿ ಗಾಯಗೊಂಡಿದ್ದ ಲಿಸ್ಮಿತಾಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮಗು ಸಾವನ್ನಪ್ಪಿದ್ದು, ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಎಂಇಎಸ್ ಶಾಲೆಯ ಆಡಳಿತ ಮಂಡಳಿ ಹಾಗೂ ಡ್ರೈವರ್ ವಿರುದ್ಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಲಾರಿ-ಬೈಕ್ ನಡುವೆ ಅಪಘಾತ: ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ತಾಲೂಕಿನ ಸಾಥ್ ಮೈಲ್ ಸಮೀಪದಲ್ಲಿ ನಡೆದಿದೆ. ತಾಲೂಕಿನ ಹುಣಸಿಹಾಳಹುಡಾ ಗ್ರಾಮದ ನಿವಾಸಿಗಳಾದ ಹನುಮೇಶ (30) ಮತ್ತು ಆಂಜನೇಯ (30) ಅವರು ಅಪಘಾತದಲ್ಲಿ ಮೃತಪಟ್ಟಿದ್ದು, ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್‌ಗಳ ಮನೆ ಮೇಲೆ ಪೊಲೀಸರ ದಾಳಿ: ಮಾರಕಾಸ್ತ್ರ ಪತ್ತೆ
ರಾಯಚೂರಿನಿಂದ ಹುಣಿಸಿಹಾಳ ಹುಡಾ ಗ್ರಾಮಕ್ಕೆ ತೆರಳುತ್ತಿದ್ದಾಗ ರಾಯಚೂರು ಕಡೆಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಲಾರಿಯ ಚಕ್ರಗಳಿಗೆ ಸಿಕ್ಕಿಬಿದ್ದು ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ರಾಯಚೂರು ಗ್ರಾಮಾಂತರ ಠಾಣೆ ಪಿಐ ಮಂಜುನಾಥ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಂತರ ಲಾರಿ ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು: ಸಮೀಪದ ಕೊಟ್ಟಮುಡಿ ಕಾವೇರಿ ಹೊಳೆಯಲ್ಲಿ ಸ್ಥಾನಕ್ಕೆ ತೆರಳಿದ ವ್ಯಕ್ತಿ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ. ಕಣ್ಣೂರು ಜಿಲ್ಲೆಯ ತಳಿಪರಂಬು ನಿವಾಸಿ ಕರುಣಾಕರ ನಾಯರ್ ಮತ್ತು ವತ್ಸಲ ದಂಪತಿ ಪುತ್ರ ಅಪ್ಪು (34) ಮೃತ ವ್ಯಕ್ತಿ. ಇಲ್ಲಿಗೆ ಸಮೀಪದ ಹಳೆ ತಾಲೂಕಿನಲ್ಲಿ ಕಂಟ್ರಾಕ್ಟರ್ ಜಿಮ್ಮಿ ಅವರ ಬಳಿ ನಾಲ್ವರು ಕಾರ್ಮಿಕರು ಕಟ್ಟಡ ಕೆಲಸ ನಿರ್ವಹಿಸುತ್ತಿದ್ದರು.
ಕಾರು ಡಿಕ್ಕಿ, ಪಾದಚಾರಿ ಸಾವು: ನಡು ರಸ್ತೆಯಲ್ಲಿಯೇ ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ
ಅಪ್ಪು ಜೊತೆಯಲ್ಲಿ ಸಂಗಡಿಗರಾದ ಸುನಿಲ್ ( 34), ಬಿಜು (48) ಮತ್ತು ಮೋಹನ್ (51) ಬುಧವಾರ ಮಧ್ಯಾಹ್ನ ಕೊಟ್ಟಮುಡಿಯ ಕಾವೇರಿ ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ್ದರು. ಈ ಸಂದರ್ಭ ಅಪ್ಪು ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳೀಯರಾದ ರಜಾಕ್, ಮೂಸ, ಕರೀಂ ಮತ್ತು ಹನೀಫ್ ಸೇರಿದಂತೆ ಸಾರ್ವಜನಿಕರ ನೆರವಿನಿಂದ ಶವವನ್ನು ನೀರಿನಿಂದ ಹೊರ ತೆಗೆಯಲಾಯಿತು . ಸ್ಥಳಕ್ಕೆ ಮಡಿಕೇರಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದರು. ಮೃತದೇಹವನ್ನು ಮಡಿಕೇರಿ ಶವಗಾರದಲ್ಲಿ ಇರಿಸಲಾಗಿದ್ದು ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿದ್ದಾರೆ.