ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ವಾಟರ್‌ ಟ್ಯಾಂಕರ್‌ ಹೊಂದಿದ ಟ್ಯಾಂಕರ್‌ ಅನ್ನು ಹರಿಸಿದ ಚಾಲಕ. ಪುಟ್ಟ ಪೋರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಆನೇಕಲ್ (ಜೂ.07): ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು ಎಂಬ ನಿಯಮವಿದ್ದರೂ ಇಲ್ಲೊಬ್ಬ ವಾಟರ್‌ ಟ್ಯಾಂಕರ್‌ ಅಳವಡಿಸಿದ ಟ್ರ್ಯಾಕ್ಟರ್‌ ಚಾಲಕ ಕುಡಿದ ಮತ್ತಿನಲ್ಲಿ ಟ್ರ್ಯಾಕ್ಟರ್‌ ಚಾಲನೆ ಮಾಡಿದ್ದಲ್ಲದೇ ಬಾಲಕನ ಮೇಲೆ ಟ್ಯಾಂಕರ್‌ ಹರಿಸಿ ಬಾಲಕನ ಸಾವಿಗೆ ಕಾರಣವಾಗಿದ್ದಾನೆ. 

ಕುಡಿದ ಮುತ್ತಿನಲ್ಲಿ ಟ್ರ್ಯಾಕ್ಟರ್ ವಾಟರ್ ಟ್ಯಾಂಕರ್ ಚಾಲನೆ ಬಾಲಕ ಸಾವನ್ನಪ್ಪಿದ ದುರ್ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸಿ.ಕೆ. ಪಾಳ್ಯದಲ್ಲಿ ಬುಧವಾರ ನಡೆದಿದೆ. ಬೇಸಿಗೆಯ ಹಿನ್ನೆಯಲ್ಲಿ ಮನೆಗಳಿಗೆ ನೀರು ಸರಬರಾಜು ಮಾಡುವುದಕ್ಕೆ ವಾಟರ್ ಟ್ಯಾಂಕರ್‌ಗಳ ಹಾವಳಿ ಹೆಚ್ಚಾಗಿರುತ್ತದೆ. ಪ್ರತಿನಿತ್ಯ ಟ್ಯಾಂಕರ್‌ ನೀರು ಸರಬರಾಜು ಮಾಡಲು ನಾಮುಂದು- ತಾಮುಂದು ಎಂದು ಪೈಪೋಟಿಗೆ ಬಿದ್ದು ನೀರು ಸರಬರಾಜು ಮಾಡುವ ಟ್ಯಾಂಕರ್‌ಗಳು ಆಗಿಂದಾಗ್ಗೆ ಮನೆಗಳ ಮುಂದೆ ನಿಲ್ಲಿಸಿರುವ ವಾಹಗಳಿಗೆ ಹಾನಿಗೊಳಿಸುತ್ತಿದ್ದವು. ಆದರೆ, ಇಂದು ಟ್ಯಾಂಕರ್‌ ಚಾಲಕರ ಆರ್ಭಟಕ್ಕೆ ಮಗು ಬಲಿಯಾಗಿದೆ.

ಬಸ್ಟ್ಯಾಂಡ್‌ನಲ್ಲಿ ನಿಂತಿದ್ದ ಬಸ್‌ ಚಲಾಯಿಸಿಕೊಂಡು ಹೋದ ಕುಡುಕ: ಆಕ್ಸಿಡೆಂಟ್‌ ಮಾಡಿ ನಿಲ್ಲಿಸಿದ

ಐಸ್‌ಕ್ರೀಮ್‌ ನಂತೆ ಜೀವವೂ ಕರಗಿ ಹೋಯಿತು: ಸಿ ಕೆ ಪಾಳ್ಯದ ನಿವಾಸಿ ಭುವನ್(4) ಮೃತ ಬಾಲಕ ಎಂದು ಗುರುತಿಸಲಾಗಿದೆ. ಅಣ್ಣನ ಜೊತೆ ಬೇಕರಿಯಲ್ಲಿ ಐಸ್ ಕ್ರೀಮ್ ತೆಗೆದುಕೊಂಡು ಬರುವಾಗ ಅಪಘಾತ ಸಂಭವಿಸಿದೆ. ಇನ್ನು ರಸ್ತೆಯಲ್ಲಿ ಬರುತ್ತಿದ್ದ ಬಾಲಕನ ಮೇಲೆ ಟ್ಯಾಂಕರ್‌ ಹರಿಸಿದ ನಂತರ ಬಾಲಕನ್ನು ರಕ್ಷಣೆ ಮಾಡದೇ ಕೂಡಲೇ ಅಲ್ಲಿಂದ ವಾಟರ್ ಟ್ಯಾಂಕರ್ ಅನ್ನು ಬಿಟ್ಟು ಪರಾರಿಯಾಗಿದ್ದಾನೆ. ತುಂಬಾ ಹೊತ್ತು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಗುವಿನ ಪೋಷಕರು ಬಂದು ಆಸ್ಪತ್ರೆಗೆ ರವಾನಿಸುವ ವೇಳೆಗೆ ಮಗು ಸಾವನ್ನಪ್ಪಿತ್ತು.

ಆಸ್ಪತ್ರೆಗೆ ದಾಖಲಿಸುವ ವೇಳೆ ಸಾವು: ಇನ್ನು ವಾಟರ್‌ ಟ್ಯಾಂಕರ್‌ ಮಗುವಿನ ಮೇಲೆ ಹರಿಸಿದ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ನಡೆದ ನಂತರ ಪೋಷಕರು ಬಾಲಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರಗೆ ಸೇರಿಸುವ ಮುನ್ನವೇ ಮೃತಪಟ್ಟಿದ್ದನು. ಇನ್ನೇನು ಎರಡು ದಿನದಲ್ಲಿ ಶಾಲೆಗೆ ಹೋಗಬೇಕಿದ್ದ ಬಾಲಕ ಈಗ ಸಾವಿನ ಮನೆಗೆ ಹೋಗಿದ್ದಾನೆ. ಈ ಘಟನೆಯಿಂದ ಬಾಲಕನ ಪೋಷಕರ ಆಕ್ರಂದನ ಮುಗಿಟಲು ಬಿಟ್ಟಿತ್ತು. ಆನೇಕಲ್‌ ತಾಲೂಕಿನ ಟಿ. ಚಿನ್ನಣ್ಣ ರವರಿಗೆ ಸೇರಿದ ವಾಟರ್‌ ಟ್ಯಾಂಕರ್ ಟ್ರ್ಯಾಕ್ಟರ್‌ನಿಂದ ಘಟನೆ ನಡೆದಿದ್ದು, ಸಾವಿಗೆ ಕಾರಣವಾದ ವಾಹನ ಸ್ಥಳಲ್ಲಿಯೇ ಇದೆ. 

ಮಾನಸಿಕ ಖಿನ್ನತೆಯಿಂದಾಗಿ 19ನೇ ಫ್ಲೋರ್‌ನಿಂದ ಬಿದ್ದ ಯುವಕ: ದೇಹವೆಲ್ಲಾ ಪೀಸ್‌ ಪೀಸ್‌

ಪೊಲೀಸರಿಂದ ಸ್ಥಳ ಪರಿಶೀಲನೆ: ಇನ್ನು ಅಪಘಾತ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿದ್ದಾರೆ. ಮದ್ಯ ಸೇವಿಸಿ ಟ್ರ್ಯಾಕ್ಟರ್‌ ಚಾಲನೆ ಮಾಡಲು ಅವಕಾಶ ನೀಡಿದ್ದಕ್ಕೆ ಮಾಲೀಕರಿಗೆ ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಅಪಘಾತ ಮಾಡಿ ಸ್ಥಳದಿಂದ ನಾಪತ್ತೆ ಆಗಿರುವ ಟ್ರ್ಯಾಕ್ಟರ್‌ ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.