ಕೊಪ್ಪಳ ಜಿಲ್ಲೆಯ ಮಸಬಹಂಚಿನಾಳ ಗ್ರಾಮದ ನಿವೃತ್ತ ಶಿಕ್ಷಕ ಜಿ.ಎಂ. ನದಾಫ್ ಅವರಿಗೆ, ಅವರ ಹಳೆಯ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮದಲ್ಲಿ ಬೈಕ್ ಉಡುಗೊರೆಯಾಗಿ ನೀಡಿದ್ದಾರೆ. 31 ವರ್ಷಗಳ ಸೇವೆ ಸಲ್ಲಿಸಿದ ಗುರುವಿನ ಈ ಉಡುಗೊರೆಗೆ ಭಾವುಕರಾದ ನದಾಫ್, ತಮ್ಮ 85 ವರ್ಷದ ತಾಯಿಯನ್ನು ಕೂರಿಸಿಕೊಂಡು ಮೊದಲ ಸವಾರಿ ಮಾಡಿದರು.

ಕೊಪ್ಪಳ: 1995ರಿಂದ ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಶಿಕ್ಷಕ ಜಿ.ಎಂ ನದಾಫ್‌ ಅವರಿಗೆ ವಿದ್ಯಾರ್ಥಿಗಳು ಹೊಸ ಬೈಕ್‌ ಉಡುಗೊರೆ ನೀಡಿದ್ದಾರೆ. ಮಸಬಹಂಚಿನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಅದೇ ಶಾಲೆಯಲ್ಲಿ 31 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಜಿ.ಎಂ. ನದಾಫ್ ಅವರಿಗೆ ₹1.25 ಲಕ್ಷ ಮೌಲ್ಯದ ಬೈಕ್ ನೀಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿದ್ಯಾರ್ಥಿಗಳ ಉಡುಗೊರೆ ಕಂಡು ಶಿಕ್ಷಕ ನದಾಫ್ ಅವರ ಕಣ್ಣಾಲಿಗಳು ತುಂಬಿಬಂದವು. ವಿದ್ಯಾರ್ಥಿಗಳ ಪ್ರೀತಿಗೆ ಮೂಕವಿಸ್ಮಿತರಾದರು. ಈ ಮೊದಲು ನದಾಫ್ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.

ಇದನ್ನೂ ಓದಿ: ಈ ವರ್ಷ ಮೊದಲ ಬಾರಿಗೆ ತುಂಗಾ & ಭದ್ರಾ ನದಿ ನೀರಿನ ಮಟ್ಟದಲ್ಲಿ ಏರಿಕೆ; ಮಲೆನಾಡಿನಲ್ಲಿ ಮಳೆ

ಹಡೆದವ್ವನಿಗೆ ಮೊದಲ ರೈಡ್

ವಿದ್ಯಾರ್ಥಿಗಳು ನೀಡಿದ ಬೈಕಿನಲ್ಲಿ ಶಿಕ್ಷಕ ನದಾಫ್ 85 ವರ್ಷದ ತಮ್ಮ ತಾಯಿ ಫೀರಾಬಿ ನದಾಫ್ ಅವರನ್ನು ಮೊದಲು ಕೂರಿಸಿಕೊಂಡು ಸಂಚಾರ ಮಾಡಿದರು. ಶಿಕ್ಷಕರಾದ ನದಾಫ್ ಅವರು ನಮ್ಮ ಗ್ರಾಮದಲ್ಲಿ 31 ವರ್ಷಗಳಿಂದ ಸೇವೆ ಸಲ್ಲಿಸಿದ್ದು, ಅವರು ಎಲ್ಲರಿಗೂ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಅವರ ನಿವೃತ್ತಿ ಸಮಯಕ್ಕೆ ಹಳೆಯ ವಿದ್ಯಾರ್ಥಿಗಳೆಲ್ಲರೂ ಕೂಡಿ ಅವರಿಗೆ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದೇವೆ. ಅವರ ಅನುಪಮ ಸೇವೆಗೆ ಬೆಲೆ ಕಟ್ಟಲಾಗದು ಎಂದು ಶಿಕ್ಷಕ ಜಿ.ಎಂ.ನದಾಫ್ ಹೇಳಿದ್ದಾರೆ.

ಇದನ್ನೂ ಓದಿ: 2010ರ ಮೇ 23ಕ್ಕೂ ಮುಂಚೆ ನೇಮಕಗೊಂಡು ಸೇವೆಯಲ್ಲಿರುವ ಶಿಕ್ಷಕರಿಗೆ ಸಿಗುತ್ತಾ ವಿನಾಯ್ತಿ?