ಕಲ್ಯಾಣ ಕರ್ನಾಟಕ‌ ಭಾಗ ಶೈಕ್ಷಣಿಕ ರಂಗದಲ್ಲಿ ಹಿಂದುಳಿದ ಪ್ರದೇಶವಾಗಿದೆ. ಅಷ್ಟೇ ಅಲ್ಲ ಈ ಪ್ರದೇಶದಲ್ಲಿ ಮಹಿಳೆಯರೂ ಕೂಡ ಶಿಕ್ಷಣ ಪಡೆಯುವುದರದಲ್ಲಿ ಹಿಂದೆ ಇದ್ದಾರೆ. ಹೀಗಾಗಿ ಈ ಪ್ರದೇಶವನ್ನು..

ವರದಿ: ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ

Add Asianetnews Kannada as a Preferred SourcegooglePreferred

ಕೊಪ್ಪಳ (ಮೇ.03): ಕಲ್ಯಾಣ ಕರ್ನಾಟಕ‌ ಭಾಗ ಶೈಕ್ಷಣಿಕ ರಂಗದಲ್ಲಿ ಹಿಂದುಳಿದ ಪ್ರದೇಶವಾಗಿದೆ. ಅಷ್ಟೇ ಅಲ್ಲ ಈ ಪ್ರದೇಶದಲ್ಲಿ ಮಹಿಳೆಯರೂ ಕೂಡ ಶಿಕ್ಷಣ ಪಡೆಯುವುದರದಲ್ಲಿ ಹಿಂದೆ ಇದ್ದಾರೆ. ಹೀಗಾಗಿ ಈ ಪ್ರದೇಶವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಇಂದು ಕೊಪ್ಪಳದ ಗವಿಮಠ ಹೊಸದೊಂದು ಹೆಜ್ಜೆ ಇಟ್ಟಿದೆ. ಅಷ್ಟಕ್ಕೂ ಆ ಹೆಜ್ಜೆ ಯಾವುದು ಅಂತೀರಾ?

48 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ವಿಶಾಲವಾದ ಕ್ಯಾಂಪಸ್‌ನ ದೃಶ್ಯ,ಮತ್ತೊಂದಡೆ ಗವಿಸಿದ್ದೇಶ್ವರ ಗುರುಕುಲಕ್ಕೆ ಚಾಲನೆ ನೀಡುತ್ತಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ದೃಶ್ಯ, ಮತ್ತೊಂದಡೆ ಗುರುಕುಲದಲ್ಲಿನ ಹೈಟೆಕ್ ಲ್ಯಾಬ್,ಕ್ಲಾಸ್ ರೂಂಗಳ ದೃಶ್ಯ, ಇವೆಲ್ಲ ದೃಶ್ಯಗಳು ಕಂಡುಬಂದದ್ದು ಕೊಪ್ಪಳದಲ್ಲಿ. ಹೌದು ತಾಲೂಕಿನ ಕೊಳೂರು-ಕಾಟ್ರಳ್ಳಿ ಗ್ರಾಮಗಳ ಮಧ್ಯೆ ಕೊಪ್ಪಳದ ಗವಿಮಠದಿಂದ 48 ಎಕರೆ ಪ್ರದೇಶದಲ್ಲಿ ಶ್ರೀಗವಿಸಿದ್ದೇಶ್ಚರ ಗುರುಕುಲ ಪ್ರಾರಂಭಿಸಲಾಗಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳಲಿರುವ ಶ್ರೀಗವಿಸಿದ್ದೇಶ್ವರ ಗುರುಕುಲವನ್ನು ಮಾಜಿ ಸಿಎಂ ಹಾಗೂ ಸಂಸದ ಬಾವರಾಜ ಬೊಮ್ಮಾಯಿ ಉದ್ಘಾಟನೆ ನೆರವೇರಿಸಿದರು. ಪ್ರಸ್ತುತ ಆರಂಭಗೊಂಡಿರುವ ಗುರುಕುಲದಲ್ಲಿ 1500 ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶಿಕ್ಷಣ,ವಸತಿ, ಆಹಾರ ನೀಡಲಾಗುತ್ತಿದ್ದು, ವಿಜ್ಞಾನ, ಕಲಾ ವಿಭಾಗದಲ್ಲಿ ಪ್ರವೇಶಕ್ಕೆ ಅವಕಾಶ ಇದೆ. ಇನ್ನು ಗುರುಕುಲ ಉದ್ಘಾಟಿಸಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಗವಿಮಠ ಹೆಣ್ಣುಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿರುವುದು ಸಂತಸದ ಸಂಗತಿಯಾಗಿದ್ದು, ಕೊಪ್ಪಳ ಶಿಕ್ಷಣ ಕ್ಷೇತ್ರದಲ್ಲಿ ಜಗತ್ ಪ್ರಸಿದ್ಧಿಯಾಗಲಿ ಎಂದರು.

ಶ್ರೀ ಗವಿಸಿದ್ದೇಶ್ವರ ಗುರುಕುಲವನ್ನು ಗವಿಮಠ ದಾನಿಗಳಿಂದ 60 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇನ್ನು ಗುರುಕುಲದಲ್ಲಿ 6 ಎಕರೆ ಪ್ರಸೇಶದಲ್ಲಿ ಆಟದ ಮೈದಾನ,55000 ಚದುರ ಅಡಿಯಲ್ಲಿ ವಿಶಾಲವಾದ ಭೋಜನಶಾಲೆ ಹಾಗೂ ಸಭಾಂಗಣ ನಿರ್ಮಿಸಲಾಗಿದೆ. ಜೊತೆಗೆ ಹೈಟೆಕ್ ಲ್ಯಾಬ್,ಲೈಬ್ರರಿ ಸಹ ಇದ್ದು, ವಿದ್ಯಾರ್ಥಿನಿಯರಿಗೆ ಉಚೊತವಾಗಿ ಉತ್ತಮ‌ ಶಿಕ್ಷಣ ನೀಡುವ ನಿಟ್ಟಿನಲ್ಲಿ ಗವಿಸಿದ್ದೇಶ್ವರ ಮಠ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಗುರುಕುಲ ಆರಂಭ

ಇನ್ನು ಪ್ರವೇಶ ಪರೀಕ್ಷೆ ಮೂಲಕ ಗುರುಕುಲಕ್ಕೆ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗುತ್ತಿದ್ದು,ಇನ್ನೇನು ಕೆಲವೇ ದಿನಗಳಲ್ಲಿ ಕಾಲೇಜು ಆರಂಭಗೊಳ್ಳಲಿದೆ. ಒಟ್ಟಿನಲ್ಲಿ ಶೈಕ್ಷಣಿಕ ರಂಗದಲ್ಲಿ ಸರಕಾರ ಮಾಡದ ಕೆಲಸವನ್ನು ಕೊಪ್ಪಳದ ಗವಿಸಿದ್ದೇಶ್ವರ ಮಠ ಗುರುಕುಲ ಆರಂಭ ಮಾಡುವ ಮೂಲಕ ಮಾಡಿದೆ. ಗವಿಸಿದ್ದೇಶ್ವರ ಮಠದ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು,ಮುಂದಿನ ದಿನಗಳಲ್ಲಿ ಈ ಗುರುಕುಲ ಕಲ್ಯಾಣ ಕರ್ನಾಟಕದ ಶೈಕ್ಷಣಿಕ ರಂಗಕ್ಕೆ ದೊಡ್ಡ ಕೊಡುಗೆ ಕೊಡುವುದರಲ್ಲಿ ಎರಡು ಮಾತಿಲ್ಲ.