ಕೊಪ್ಪಳದ ಶಾರದಾ ಇಂಟರ್‌ ನ್ಯಾಷನಲ್ ಶಾಲೆಯ 4ನೇ ತರಗತಿ ವಿದ್ಯಾರ್ಥಿ ತೇಜಸ್, ಕಣ್ಣು ಮುಚ್ಚಿ ಭಾರತದ ಮ್ಯಾಪ್ ಪಜಲ್ ಅನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಳಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2026ರಲ್ಲಿ ವಿಶಿಷ್ಟ ದಾಖಲೆ ಮಾಡಿದ್ದಾರೆ. 

ಕೊಪ್ಪಳ (ಏ.23): ಜಿಲ್ಲೆಯ ಕಿದದಾಳದ ಶಾರದಾ ಇಂಟರ್‌ ನ್ಯಾಷನಲ್ ಶಾಲೆಯ ವಿದ್ಯಾರ್ಥಿ ತೇಜಸ್ (4ನೇ ತರಗತಿ) ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2026ನಲ್ಲಿ ವಿಶಿಷ್ಟ ದಾಖಲೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತೇಜಸ್, ಕಣ್ಣು ಮುಚ್ಚಿದ (ಬ್ಲೈಂಡ್‌ ಫೋಲ್ಡ್) ಸ್ಥಿತಿಯಲ್ಲಿ ಭಾರತದ ಮ್ಯಾಪ್ ಪಜಲ್‌ಗಳನ್ನು ಅಚ್ಚುಕಟ್ಟಾಗಿ ಹಾಗೂ ಅತ್ಯಂತ ವೇಗವಾಗಿ ಪರಿಹರಿಸುವ ಅಪೂರ್ವ ಸಾಮರ್ಥ್ಯ ಪ್ರದರ್ಶಿಸಿ ನಿಗದಿತ 5 ನಿಮಿಷಗಳಿಗಿಂತ ಮುನ್ನ ಪೂರ್ಣಗೊಳಿಸಿ ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ಕೊಪ್ಪಳದ ಸಾಮೂಹಿಕ ವಿವಾಹದಲ್ಲಿ ನಕಲಿ ದಾಖಲೆ ನೀಡಿ ಅಪ್ರಾಪ್ತೆಗೆ ಮದುವೆ ಮಾಡಲು ಯತ್ನ!

ಶಾಲೆಯ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ತೇಜಸ್‌ನನ್ನು ಅತ್ಯಂತ ಶಿಸ್ತುಬದ್ಧ, ಏಕಾಗ್ರತೆ ಹೊಂದಿದ ಮತ್ತು ವಿದ್ಯಾಭ್ಯಾಸದಲ್ಲಿ ಶ್ರೇಷ್ಠ ಸಾಧನೆ ಮಾಡುವ ವಿದ್ಯಾರ್ಥಿ ಎಂದು ಶ್ಲಾಘಿಸಿದ್ದು, ಇಂತಹ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಪೋಷಕರು ತೇಜಸ್ ಅವರ ಸಾಧನೆಗೆ ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.

ಜಿಲ್ಲೆಯ ಕಿದದಾಳದ ಶಾರದಾ ಇಂಟರ್‌ ನ್ಯಾಷನಲ್ ಶಾಲೆಯ ವಿದ್ಯಾರ್ಥಿ ತೇಜಸ್ (4ನೇ ತರಗತಿ) ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2026ನಲ್ಲಿ ವಿಶಿಷ್ಟ ದಾಖಲೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.