ಪ್ರಧಾನಿ ಮೋದಿ ಜನ್ಮ ದಿನದ ಪ್ರಯುಕ್ತ ರಕ್ತದಾನ ಶಿಬಿರ: 2 ಸಾವಿರಕ್ಕೂ ಹೆಚ್ಚು ಯೂನಿಟ್‌ನಷ್ಟು ರಕ್ತ ಸಂಗ್ರಹ

ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಮಾಲೂರು ಬಿಜೆಪಿಯಿಂದ ಹೂಡಿ ವಿಜಯಕುಮಾರ್ ನೇತೃತ್ವದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 2 ಸಾವಿರಕ್ಕೂ ಹೆಚ್ಚು ಯೂನಿಟ್‌ಗಳನ್ನು ಸಂಗ್ರಹ ಮಾಡುವ ಮೂಲಕ ದಾಖಲೆ ನಿರ್ಮಾಣ ಆಯಿತು.

kolar bjp yuva morcha organized a blood donation camp to celebrate pm narendra modi birthday gvd

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಸೆ.18): ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಮಾಲೂರು ಬಿಜೆಪಿಯಿಂದ ಹೂಡಿ ವಿಜಯಕುಮಾರ್ ನೇತೃತ್ವದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 2 ಸಾವಿರಕ್ಕೂ ಹೆಚ್ಚು ಯೂನಿಟ್‌ಗಳನ್ನು ಸಂಗ್ರಹ ಮಾಡುವ ಮೂಲಕ ದಾಖಲೆ ನಿರ್ಮಾಣ ಆಯಿತು. ಮಾಲೂರಿನ ಶ್ರೀರಂಗಂ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಡಾ.ಅಶ್ವತ್ಥ್ ನಾರಾಯಣ್, ರಕ್ತದಾನ ಮಾಡಲು ಯುವಜನರು ನೂಕುನುಗ್ಗಲು ನಡೆಸುತ್ತಿರುವುದು ಸಾರ್ಥಕತೆಯ ಸೇವೆಗೆ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು.

ಜೊತೆಗೆ ಹೆಮ್ಮೆಯ ಸೇವೆಯನ್ನು ಆಯೋಜಿಸಿದ ಹೂಡಿ ವಿಜಯಕುಮಾರ್ ಅಭಿನಂದನಾರ್ಹರೆಂದರು. ಬಿಜೆಪಿ ಸಮಾಜ ಕಟ್ಟಲು ಮುಂದಾಗಿದ್ದು ಮೋದಿ ಅವರು ಪ್ರಧಾನಿಯಾದ ನಂತರ ವೇಗ ಸಿಕ್ಕಿದೆ. ಸದಾಕಾಲ ಜನಪರ ಕೆಲಸ ಆಗಬೇಕಿದ್ದು ಈ ಮೂಲಕ ಮಾಲೂರು ಶಾಸಕ ಸ್ಥಾನ ಬಿಜೆಪಿ ತೆಕ್ಕೆಗೆ ಬರಬೇಕೆಂದು ಆಶಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿ, ಪಕ್ಷ ಸಾಧಕರಿಗೆ ಸ್ಥಾನಮಾನ ಕೊಡಲಿದ್ದು ಹೂಡಿ ವಿಜಯಕುಮಾರ್ ಅವರ ಕೈ ಬಿಡುವ ಪ್ರಶ್ನೆಯೇ ಇಲ್ಲ. ವಿಧಾನಸೌಧದಲ್ಲಿ ಮಾಲೂರು ಲ್ಬಿಜೆಪಿ ಶಾಸಕರನ್ನು ನೋಡಬೇಕಿದ್ದು ಈ ದೆಸೆಯಲ್ಲಿ ವರಿಷ್ಠರು ತೀರ್ಮಾನ ಕೈಗೊಳ್ಳುವರು ಎಂದು ತಿಳಿಸಿದರು. 

ಇಟಿಸಿಎಂ ಆಸ್ಪತ್ರೆ ಲೆಕ್ಕಾಧಿಕಾರಿ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳ ಆರೋಪ: ನಾಲ್ವರ ಬಂಧನ

ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಮುಖಂಡ ಹೂಡಿ ವಿಜಯಕುಮಾರ್ ನೇತೃತ್ವದಲ್ಲಿ ದಾಖಲೆಯ ರಕ್ತದಾನ ಶಿಬಿರ ನಡೆಯುತ್ತಿದ್ದು ಅ.2ರವರೆಗೆ ಸೇವಾ ಕಾರ್ಯಕ್ರಮಗಳು ನಡೆಯಲಿವೆ. ಇಂತಹ ಸೇವಾ ಕಾರ್ಯಕ್ರಮಗಳನ್ನು ಮಾದರಿಯಾಗಿಸಿಕೊಂಡು ಜಿಲ್ಲೆಯಲ್ಲಿ ಕನಿಷ್ಠ ೪ ಶಾಸಕರನ್ನು ಗೆಲ್ಲಿಸಿಕೊಳ್ಳಬೇಕಿದೆ. ಭಾರತವನ್ನು ಪಾಕಿಸ್ತಾನ್ ಮತ್ತು ಚೈನಾಕ್ಕೆ ಹಂಚಿ ಛಿದ್ರ ಮಾಡಿದ ಕಾಂಗ್ರೆಸ್ಸಿಗರು ಇದೀಗ ಭಾರತ ಜೋಡೋ ಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದ. ಪಾಕಿಸ್ತಾನ್ ಸಹಾ ಭಾರತದ ನೆರವು ಬೇಕೆಂದು ಕೇಳುವಷ್ಟರ ಮಟ್ಟಿಗೆ ಪ್ರಧಾನಿ ಮೋದಿ ಅವರ ನಾಯಕಯತ್ವದಲ್ಲಿ ದೇಶ ಸುಭದ್ರವಾಗಿದ್ದು ಇದನ್ನು ಜೋಡಿಸುವ ಕೆಲಸ ಅಗತ್ಯವಿಲ್ಲ ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು. 

Kolar: ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯದ ಕೊರತೆ ಆಗಬಾರದು: ಜಿಲ್ಲಾಧಿಕಾರಿ ಸೂಚನೆ

ಕಾರ್ಯಕರ್ತರ ಶ್ರಮಕ್ಕೆ ಸಂದ ಫಲ: ಮೋದಿ ಹುಟ್ಟುಹಬ್ಬಕ್ಕೆ ದಾಖಲೆಯ ರಕ್ತವನ್ನು ಸಂಗ್ರಹ ಮಾಡುವ ಮೂಲಕ ಸಾಧನೆ ಮಾಡಲಾಗಿದ್ದು ಇದು ಮಾಲೂರು ತಾಲೂಕಿನ ಬಿಜೆಪಿ ಕಾರ್ಯಕರ್ತರ ಶ್ರಮಕ್ಕೆ ಸಂದ ಫಲವಾಗಿದ್ದು ನಾನು ನಿಮಿತ್ತ ಮಾತ್ರ ಎಂದು ಮುಖಂಡ ಹೂಡಿ ವಿಜಯಕುಮಾರ್ ಪ್ರತಿಕ್ರಿಯಿಸಿದರು. ಪ್ರತಿ ಬೂತ್‌ನಿಂದ ಕನಿಷ್ಠ 25 ಮಂದಿಯನ್ನು ರಕ್ತದಾನಕ್ಕೆ ಕರೆತರಲಾಗಿದೆ.ಕಳೆದ ಬಾರಿಗಿಂತ ಎರಡು ಪಟ್ಟು ರಕ್ತ ಶೇಖರಣೆ ಮಾಡುವ ಮೂಲಕ ರಾಷ್ಟ್ರೋತ್ಥಾನಕ್ಕೆ ನೀಡಲಾಗುತ್ತಿದ್ದು, ಇದರಿಂದ ನೂರಾರು ಮಕ್ಕಳ ಪ್ರಾಣ ಉಳಿಸುವ ಕೆಲಸ ಆಗುತ್ತದೆ. ರಕ್ತದಾನಿಗಳಿಗೆ ಹೆಲ್ಮೆಟ್, ತಿಂಡಿ, ಊಟ, ಸ್ನಾಕ್ಸ್, ಹಣ್ಣು,ಜ್ಯೂಸ್ ವಿತರಿಸಲಾಗಿದೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios