ಇಟಿಸಿಎಂ ಆಸ್ಪತ್ರೆ ಲೆಕ್ಕಾಧಿಕಾರಿ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳ ಆರೋಪ: ನಾಲ್ವರ ಬಂಧನ
ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆ ಎಂದು ಹೆಸರುವಾಸಿ ಆಗಿರುವ ಇಟಿಸಿಎಂ ಆಸ್ಪತ್ರೆಯ ಲೆಕ್ಕಾಧಿಕಾರಿ ಆಗಿದ್ದ ಜಾನ್ಸನ್ ಕುಂದರ್ ಎಂಬುವವರ ವಿರುದ್ಧ ನಕಲಿ ವಿದ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳ ಎಂದು ಸುಳ್ಳು ದೂರು ಕೊಡಿಸಿದ್ದಾರೆ ಅನ್ನೋ ಸತ್ಯ ಬಯಲಾಗಿದೆ.
ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ (ಸೆ.18): ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆ ಎಂದು ಹೆಸರುವಾಸಿ ಆಗಿರುವ ಇಟಿಸಿಎಂ ಆಸ್ಪತ್ರೆಯ ಲೆಕ್ಕಾಧಿಕಾರಿ ಆಗಿದ್ದ ಜಾನ್ಸನ್ ಕುಂದರ್ ಎಂಬುವವರ ವಿರುದ್ಧ ನಕಲಿ ವಿದ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳ ಎಂದು ಸುಳ್ಳು ದೂರು ಕೊಡಿಸಿದ್ದಾರೆ ಅನ್ನೋ ಸತ್ಯ ಬಯಲಾಗಿದೆ. ಅಧಿಕಾರದ ಆಸೆಗಾಗಿ ನಿಮಗೆ ಇನ್ನು ಉನ್ನತ ಸ್ಥಾನ ನೀಡುತ್ತೇವೆ ಎಂದು ಉಪಾಯದಿಂದ ಜಾನ್ಸನ್ ಕುಂದರ್ ಅವರಿಂದಲೇ ರಾಜೀನಾಮೆ ಬರೆಸಿಕೊಂಡು ಬಳಿಕ ಸುಳ್ಳು ದೂರು ನೀಡಿರುವುದು ಪೊಲೀಸರ ತನಿಖೆಯಿಂದ ಸಾಬೀತಾಗಿದೆ .ಸದ್ಯ ನಾಲ್ವರು ಆರೋಪಿಗಳನ್ನು ಕೋಲಾರ ಮಹಿಳಾ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿದ್ದಾರೆ.
ಹೌದು! ಇಟಿಸಿಎಂ ಆಸ್ಪತ್ರೆ ಲೆಕ್ಕಾಧಿಕಾರಿಯಿಂದ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಸುಳ್ಳು ದೂರು ನೀಡಿದ್ದಾರೆ ಎಂದು ಸಾಬೀತಾಗಿದ್ದು, ಇಡೀ ಇಟಿಸಿಎಂ ಆಸ್ಪತ್ರೆಯೇ ತಲೆತಗ್ಗಿಸುವಂತೆಮಾಡಿದೆ. ಮೆಥೋಡಿಸ್ಟ್ ಚರ್ಚ್‌ನ ಪಾದ್ರಿ ರೆವರಂಟ್ ಶಾಂತಕುಮಾರ್, ಜನಿಫರ್, ಮಂಜು ಹಾಗೂ ಹಾಸ್ಟೆಲ್ ವಾರ್ಡನ್ ಶೀಲಾ ಬಂಧಿತ ಆರೋಪಿಗಳಾಗಿದ್ದು, ನೂರಾರು ವರ್ಷಗಳಿಂದ ಕಪ್ಪು ಚುಕ್ಕೆ ಇಲ್ಲದೆ ಸೇವೆ ಸಲ್ಲಿಸುತ್ತಿರುವ ಇಟಿಸಿಎಂ ಆಸ್ಪತ್ರೆಗೆ ಕಳಂಕ ತಂದಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಮಾತನಾಡಿಕೊಳ್ತಿದ್ದಾರೆ.
ಬಂಧಿತ ನಾಲ್ವರು ಆರೋಪಿಗಳು ಒಟ್ಟಾಗಿ ಸೇರಿಕೊಂಡು ಆಸ್ಪತ್ರೆಯ ಲೆಕ್ಕಾಧಿಕಾರಿಯಾಗಿದ್ದ ಜಾನ್ಸನ್ ಕುಂದರ್ ವಿರುದ್ಧ ನಕಲಿ ವಿದ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳ ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ಕೊಡಿಸಿದರು. ನ್ಯಾಯಾಧೀಶರ ಎದುರು ಸಹ ನಕಲಿ ವಿದ್ಯಾರ್ಥಿನಿಯರ ಹೇಳಿಕೆ ಸಹ ದಾಖಲು ಮಾಡಿಸಿದ್ರು. ಇನ್ನು ದೂರು ಆಧರಿಸಿ ಜಾನ್ಸನ್ ಕುಂದರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ FIR ಕೂಡ ಪೊಲೀಸರು ದಾಖಲು ಮಾಡಿದರು. ಆದರೆ ಈ ಕುರಿತು ಜಾನ್ಸನ್ ಕುಂದರ್ ಪತ್ನಿ ಸವಿತಾ ಜಾನ್ ಅವರು ತಮ್ಮ ಪತಿ ಜಾನ್ಸನ್ ಕುಂದರ್ ಜೊತೆ ಚರ್ಚಿಸಿ ನನ್ನ ಪತಿ ಆ ರೀತಿ ಕೆಲಸ ಮಾಡುವ ವ್ಯಕ್ತಿ ಅಲ್ಲ.
ಗಾಂಜಾ ದಂಧೆ ಮೂಲಕ ಕೋಟಿ ಕೋಟಿ ಸಂಪಾದನೆ: ಡ್ರಗ್ಸ್ ಪೆಡ್ಲರ್ ಆಸ್ತಿ ಮುಟ್ಟುಗೋಲು
ಸಮಾಜದಲ್ಲಿ ಉತ್ತಮ ಹೆಸರು ಹೊಂದಿದ್ದಾರೆ, ಸುಖಾಸುಮ್ಮನೆ ಅವರ ಹೆಸರನ್ನು ಹಾಳು ಮಾಡಲು ಈ ರೀತಿ ಹುನ್ನಾರ ನಡೆದಿದೆ ಇದರ ಬಗ್ಗೆ ತನಿಖೆ ನಡೆಸಿ ಎಂದು ಕೋಲಾರ ಜಿಲ್ಲಾ ವರಿಷ್ಠಾಧಿಕಾರಿ ಆಗಿರುವ ದೇವರಾಜ್ ಬಳಿ ದೂರು ನೀಡಿದ್ದರು. ಬಳಿಕ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಎಸ್ಪಿ ದೇವರಾಜ್ ಅವರು ತನಿಖೆ ನಡೆಸಿದ ಬಳಿಕ ಲೈಂಗಿಕಾ ಕಿರುಕುಳ ಎಂದು ಸುಳ್ಳು ದೂರು ನೀಡಿರುವುದು ಪತ್ತೆಯಾಗಿದೆ. ಸುಳ್ಳು ದೂರು ನೀಡಿರೋದು ಸಾಬೀತಾದ ಹಿನ್ನೆಲೆ ನಾಲ್ವರು ಆರೋಪಿಗಳನ್ನು ಕೋಲಾರ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇನ್ನು ಪ್ರಕರಣದ ಹಿನ್ನೆಲೆ ನೋಡೋದಾದ್ರೆ ಆಗಸ್ಟ್ 30ನೇ ತಾರೀಖಿನಂದು ಕೋಲಾರ ಮೆಥಡಿಸ್ಟ್ ಚರ್ಚ್ಗೆ ಸೇರಿರುವ ಇಟಿಸಿಎಂ ಆಸ್ಪತ್ರೆಯ ಲೆಕ್ಕಾಧಿಕಾರಿ ಜಾನ್ಸನ್ ಕುಂದರ್ ಅವರು ವಾರ್ಷಿಕ ಶುಲ್ಕ ಕಡಿಮೆ ಮಾಡುವ ಸಲುವಾಗಿ ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ ಪ್ರಕರಣಕ್ಕೆ ಬಿಗ್ ಟ್ವಿಸ್ ಸಿಕ್ಕಿದ್ದು, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿರುವ ವಿದ್ಯಾರ್ಥಿನಿಯರೇ ನಕಲಿ ಅನ್ನೋ ಅಂಶ ಬೆಳಕಿಗೆ ಬಂದಿದೆ.
ಇಬ್ಬರು ವಿದ್ಯಾರ್ಥಿನಿಯರ ಹೆಸರಲ್ಲಿ ದೂರು ನೀಡಲಾಗಿದ್ದು, ದೂರು ನೀಡಿರುವ ವಿಷಯ ಅಸಲಿ ಆ ವಿದ್ಯಾರ್ಥಿನಿಯರಿಗೇ ಗೊತ್ತಿಲ್ಲ, ಅಲ್ಲದೆ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಬೇರೆ ಇನ್ನಿಬ್ಬರು ನಕಲಿ ವಿದ್ಯಾರ್ಥಿನಿಯರು ಕೋಲಾರ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ, ನ್ಯಾಯಾಧೀಶರ ಎದುರಲ್ಲೂ ನಕಲಿ ವಿದ್ಯಾರ್ಥಿನಿಯರೇ ಹೇಳಿಕೆ ನೀಡುವ ಮೂಲಕ ಪೊಲೀಸರನ್ನೇ ವಂಚಿಸಿದ್ದಾರೆ ಅನ್ನೋದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಈ ಹಿನ್ನೆಲೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಏನಿದು ಪ್ರಕರಣ ಅಂತ ನೋಡೋದಾದ್ರೆ ಇದೇ ಆಗಸ್ಟ್-30 ರಂದು ಕೋಲಾರ ಮೆಥಡಿಸ್ಟ್ ಚರ್ಚ್ಗೆ ಸೇರಿದ ಇ.ಟಿ.ಸಿ.ಎಂ ಆಸ್ಪತ್ರೆಯ ಲೆಕ್ಕಾಧಿಕಾರಿ ಜಾನ್ಸನ್ ಕುಂದರ್ ಅವರು ವಾರ್ಷಿಕ ಶುಲ್ಕ ಕಡಿಮೆ ಮಾಡುವ ಸಲುವಾಗಿ ನನ್ನ ಜೊತೆ ಸಹಕರಿಸಿಬೇಕು ಎಂದು ಲೈಂಗಿಕ ಕಿರುಕುಳ ನೀಡಿದ್ದಾರೆ ಅಂತ ಪೂಜಾ ಎಂಬ ಪೂಜಾ ಎಂಬ ವಿದ್ಯಾರ್ಥಿನಿ ರಮ್ಯಾ ಅನ್ನೋ ತನ್ನ ಸ್ನೇಹಿತೆಯು ಕಿರುಕುಳ ನೀಡಿದ್ದಾರೆ ಎಂದು ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ರು, ಬಳಿಕ ಜಾನ್ಸನ್ ಕುಂದರ್ ವಿರುದ್ಧ FIR ಸಹ ದಾಖಲಾಗುತ್ತೆ.
ಬಳಿಕ ಪೊಲೀಸರು ತನಿಖೆ ನಡೆಸಿದಾಗ ಇಬ್ಬರು ವಿದ್ಯಾರ್ಥಿನಿಯರ ಹೆಸರಲ್ಲಿ ಸುಳ್ಳು ದೂರು ನೀಡಲಾಗಿದ್ದು, ದೂರು ನೀಡಿರುವ ವಿಷಯ ಅಸಲಿ ಆ ವಿದ್ಯಾರ್ಥಿನಿಯರಿಗೇ ಗೊತ್ತಿಲ್ಲ, ಅಲ್ಲದೆ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಬೇರೆ ಇನ್ನಿಬ್ಬರು ನಕಲಿ ವಿದ್ಯಾರ್ಥಿನಿಯರು ಕೋಲಾರ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ ಬಳಿಕ ನ್ಯಾಯಾಧೀಶರ ಎದುರಲ್ಲೂ ನಕಲಿ ವಿದ್ಯಾರ್ಥಿನಿಯರೇ ಹೇಳಿಕೆ ನೀಡುವ ಮೂಲಕ ಪೊಲೀಸರನ್ನೇ ವಂಚಿಸಿದ್ದಾರೆ ಅನ್ನೋ ವಿಚಾರ ಪೊಲೀಸರಿಗೆ ತಿಳಿದುಬಂದಿದೆ.
ಇನ್ನು ಜಾನ್ಸನ್ ಕುಂದರ್ ವಿರುದ್ಧ ಇಷ್ಟೇಲ್ಲಾ ಹುನ್ನಾರ ನಡೆಸಿರೋದಕ್ಕೆ ಕಾರಣವಾದ್ರು ಏನು ಅಂದ್ರೆ, ನೂರು ವರ್ಷಗಳ ಇತಿಹಾಸ ಹೊಂದಿರುವ ಇಟಿಸಿಎಂ ಆಸ್ಪತ್ರೆಯನ್ನು ಮಾರಾಟ ಮಾಡುವುದು ಅಥವಾ ಬೇರೆಯವರಿಗೆ ಗುತ್ತಿಗೆ ನೀಡಲು ಪ್ಲಾನ್ ಮಾಡಿದ್ದು ಅದಕ್ಕೆ ಜಾನ್ಸನ್ ಕುಂದರ್ ಅಡ್ಡಿಪಡಿಸುತ್ತಾರೆ. ಹಾಗಾಗಿ ನಿಮಗೆ ಇನ್ನು ಉನ್ನತವಾದ ಸ್ಥಾನ ನೀಡುತ್ತೇವೆ ಎಂದು ಉಪಾಯದಿಂದ ಜಾನ್ಸನ್ ಅವರ ಕಡೆಯಿಂದಲೇ ರಾಜೀನಾಮೆ ಬರೆಸಿಕೊಳ್ತಾರೆ, ಇನ್ನು ಎಲ್ಲಿ ಮತ್ತೆ ವಾಪಸ್ಸು ಬಂದು ಜಾನ್ಸನ್ ನಮಗೆ ತೊಂದರೆ ಕೊಡುತ್ತಾರೋ ಅನ್ನೋ ಉದ್ದೇಶದಿಂದ ಕೆಟ್ಟು ಹೆಸರು ತರೊದಕ್ಕೆ ಜಾನ್ಸನ್ ಕುಂದರ್ ವಿರುದ್ಧ ಅವರ ಮೇಲೆ ಲೈಂಗಿಕ ಕಿರುಕುಳದ ಸುಳ್ಳು ಆರೋಪ ಮಾಡಿರೋದು ತಿಳಿದುಬಂದಿದೆ.
Kolar: ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯದ ಕೊರತೆ ಆಗಬಾರದು: ಜಿಲ್ಲಾಧಿಕಾರಿ ಸೂಚನೆ
ಇನ್ನು ಆರೋಪಿ ಆಗಿರುವ ಶಾಂತ್ಕುಮಾರ್ ಅವರು ಈ ಮೊದಲು ಮೆಥೋಡಿಸ್ಟ್ ಚರ್ಚ್ಗೆ ಸೇರಿದ ಕೆಲವೊಂದು ಆಸ್ತಿ ಪಾಸ್ತಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಕಡಿಮೆ ಹಣ ಲೆಕ್ಕಕ್ಕೆ ತೋರಿಸಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಅನ್ನೊ ಆರೋಪ ಸಹ ಕೇಳಿಬಂದಿತ್ತು,. ಅದೇನೇ ಇರಲಿ ಬ್ರಿಟಿಷರ ಕಾಲದಿಂದಲೂ ನೂರಾರು ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿಕೊಂಡು ಬರುತ್ತಿರುವ ಪ್ರತಿಷ್ಠಿತ ಇಟಿಸಿಎಂ ಆಸ್ಪತ್ರೆಯನ್ನು ಅವರದೇ ಸಮುದಾಯದ ಅಧಿಕಾರಿಗಳು ಹಾಗೂ ಪಾದ್ರಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಈ ಮಟ್ಟಕ್ಕೆ ಇಳಿದಿದ್ದು ದುರಂತವೇ ಸರಿ.