ಕೋಲಾರ ಬಂದ್‌ : ಸ್ಟೇ ತಂದು ತೆರಳುವೆ - ಮುತಾಲಿಕ್

  • ಕೋಲಾರದಲ್ಲಿ ದತ್ತ ಮಾಲಾಧಾರಿಗಳ ಮೇಲೆ ದಾಳಿಗೆ ಯತ್ನ
  • ಇಂದು ಹಿಂದು ಸಂಘಟನೆಗಳಿಂದ ಕೋಲಾರ ಬಂದ್
Kolar bandh called by hindu organisations snr

 ಗದಗ (ನ.18):  ಕೋಲಾರದಲ್ಲಿ (kolar) ದತ್ತ ಮಾಲಾಧಾರಿಗಳ ಮೇಲೆ ಗೋಧ್ರಾ ಮಾದರಿಯ ದಾಳಿಗೆ ಯತ್ನ ನಡೆದಿದ್ದು, ಪೊಲೀಸರು (Police) ಚಾಣಾಕ್ಷತನದಿಂದ ಅದನ್ನು ತಡೆದಿದ್ದಾರೆ ಎಂದು ಶ್ರೀರಾಮ ಸೇನೆಯ (shriramasena) ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್‌ (pramod muthalik) ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, 27 ಜನ ಮಾಲಾಧಾರಿಗಳಿದ್ದ ಮಿನಿ ಬಸ್ಸನ್ನೇ (Bus) ಸುಡಲು ದುಷ್ಕರ್ಮಿಗಳು ಯತ್ನಿಸಿದ್ದರು. ಈ ಕೃತ್ಯದ ಮಾಹಿತಿ ಅರಿತ ಪೊಲೀಸರು (Police) ಸಕಾಲಕ್ಕೆ ಮಧ್ಯ ಪ್ರವೇಶಿಸಿ ಭಾರಿ ದುರಂತವನ್ನು ತಪ್ಪಿಸುವ ಮೂಲಕ ದುಷ್ಕರ್ಮಿಗಳ ಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ವಿವರಿಸಿದರು.

ಇದೊಂದು ಹೇಡಿಗಳ ಕೆಲಸ. ಸಹಿಸಿಕೊಂಡು ಹಿಂದೂ ಸಮಾಜ ಎಂದಿಗೂ ಸುಮ್ಮನೆ ಕೂರುವುದಿಲ್ಲ. ಸರ್ಕಾರ ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಈ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುವ ದುಷ್ಟಶಕ್ತಿಗಳನ್ನು ಹದ್ದುಬಸ್ತಿನಲ್ಲಿ ಇಡಬೇಕು ಎಂದು ನಾನು ರಾಜ್ಯ ಸರ್ಕಾರವನ್ನು (karnataka govt) ಆಗ್ರಹಿಸುತ್ತೇನೆ. ಸರ್ಕಾರ ಇದೇ ರೀತಿ ಹಿಂದೂ ವಿರೋಧಿ ನಡೆಗಳನ್ನು ನಿರ್ಲಕ್ಷ್ಯಮಾಡಿದಲ್ಲಿ ನಾವು ಉತ್ತರ ಕೊಡಬೇಕಾಗುತ್ತೆ. ಕಿಡಿಗೇಡಿಗಳಿಗೆ ಎಚ್ಚರ ಕೊಡಲು ಬಯಸುತ್ತೇನೆ, ನಾವು ತಿರುಗಿ ಉತ್ತರ ಕೊಟ್ಟರೆ ನೀವು ಪಾಕಿಸ್ತಾನದವರೆಗೆ (Pakistan) ಓಡಬೇಕಾಗುತ್ತೆ ಎಂದು ಅಬ್ಬರಿಸಿದ ಅವರು, ಬಾಯಿ ಮುಚ್ಕೊಂಡು ಹಿಂದೂ ಸಮಾಜವನ್ನು, ನಮ್ಮ ಸಂವಿಧಾನವನ್ನು ಗೌರವಿಸಬೇಕು ಎಂದು ಕಿವಿಮಾತು ಹೇಳಿದರು.

ತ್ರಿಪುರಾದಲ್ಲಾದ ಗಲಾಟೆಗೆ ಕೆಲವರು ಸವಣೂರಲ್ಲಿ ಪ್ರತಿಭಟನೆ ಮಾಡುತ್ತಾರೆ. ಪ್ರತಿಭಟನೆ ಮಾಡುವುದು ನಿಮ್ಮ ಹಕ್ಕು, ಮಾಡಿ. ಆದರೆ, ಆರ್‌ಎಸ್‌ಎಸ್‌ (RSS) ನಾಯಿಗಳಿಗೆ ಗುಂಡು ಹೊಡೀತಿವಿ ಅಂತಾ ಹೇಳುತ್ತಿರುವುದು ಯಾತಕ್ಕೆ? ಆರ್‌ಎಸ್‌ಎಸ್‌ ದೇಶ ಭಕ್ತ ಸಂಘಟನೆಯಾಗಿದ್ದು ಅದು ನಿಮಗೇನು ಮಾಡಿದೆ? ಹಿಂಸೆಯಲ್ಲಿ ಅವರು ಎಂದಿಗೂ ತೊಡಗಿಲ್ಲ, ಸಕಾರಣವಿಲ್ಲದೇ ಅನಗತ್ಯ ಗೊಂದಲ ಸೃಷ್ಟಿಸುವುದು ದುಷ್ಕರ್ಮಿಗಳ ಉದ್ದೇಶ. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದಾಗ ಕರ್ನಾಟದಲ್ಲಿ ಗಲಭೆ ಸೃಷ್ಟಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದರು.
 
ದತ್ತಮಾಲಾ ಧಾರಿಗಳ ಮೇಲಿನ ಹಲ್ಲೆ ಖಂಡಿಸಿ ಇಂದು ಕೋಲಾರ ಬಂದ್‌ ಕರೆ ನೀಡಲಾಗಿದೆ. ಈ ಬಂದ್‌ನಲ್ಲಿ ನಾನೂ ಭಾಗಿಯಾಗಲಿರುವೆ. ಕೋಲಾರ ಜನರಲ್ಲಿ ಮಾಧ್ಯಮದ ಮೂಲಕ ವಿನಂತಿ ಮಾಡುತ್ತೇನೆ ದಯವಿಟ್ಟು ಎಲ್ಲರೂ ಸಹಕಾರ ಕೊಡಿ.

ಪ್ರಮೋದ ಮುತಾಲಿಕ್‌, ಶ್ರೀರಾಮ ಸೇನೆಯ ಅಧ್ಯಕ್ಷ

ಕೋಲಾರ ಪ್ರವೇಶ ನಿರ್ಬಂಧ ಆಜ್ಞೆಗೆ ಸ್ಟೇ ತಂದು ಹೋಗುವೆ :   ಕೋಲಾರ ಜಿಲ್ಲೆಗೆ ನಾನು ಹೋಗದಂತೆ ನಿರ್ಬಂಧ ಹಾಕಿದ್ದು ಸಮಗ್ರ ಹಿಂದುತ್ವಕ್ಕೆ ಮಾಡಿದ ಅವಮಾನವಾಗಿದೆ. ಈ ಕುರಿತು ನ್ಯಾಯಾಲಯದಲ್ಲಿ ತಡæಯÞಜ್ಞೆ ತಂದು ಹೋಗಲು ಪ್ರಯತ್ನಿಸುತ್ತೇನೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಹೇಳಿದರು.

ಅವರು ಬುಧವಾರ ರಾತ್ರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೂ ನಾಯಕರನ್ನ ತಡೆದರೆ ಹಿಂದುತ್ವ ತಡೆದಂತೆ, ಅದೇಕೆ ಹೀಗೆ ಮಾಡಿತ್ತಿದ್ದೀರಿ. ಈ ನಿರ್ಬಂಧ ಆಜ್ಞೆಯನ್ನ ಮುಖ್ಯಮಂತ್ರಿ, ಗೃಹ ಮಂತ್ರಿಗಳು ತಕ್ಷಣವೇ ವಾಪಾಸ್ಸು ಪಡೆಯಬೇಕು. ಕೋಲಾರ ಬಂದ್‌ ಯಶಸ್ವಿಯಾಗುತ್ತೆ, ಇದಕ್ಕೆ ಕೋಲಾರ ಜಿಲ್ಲೆಯ ಜನರು ಸ್ಪಂದಿಸುತ್ತಾರೆ ಎನ್ನುವ ಬಲವಾದ ವಿಶ್ವಾಸವೂ ನನಗಿದೆ.

ಕೋಲಾರದಲ್ಲಿ ದತ್ತಮಾಲಾಧಾರಿಗಳ ಮೇಲಿನ ಹಲ್ಲೆ ತಾಲಿಬಾನ್‌ ರೀತಿಯ ಹೀನ ಕೃತ್ಯವಾಗಿದೆ. ಹಲ್ಲೆಯನ್ನ ಖಂಡಿಸಿ ಆರ್‌ಎಸ್‌ಎಸ್‌, ಹಿಂದೂ ಜಾಗರಣ ವೇದಿಕೆ ನ. 18ರಂದು ಕೋಲಾರ ಬಂದ್‌ಗೆ ಕರೆ ನೀಡಿದ್ದು, ಬಂದ್‌ನಲ್ಲಿ ಭಾಗವಹಿಸಲು ಗದಗನಿಂದಲೇ ಕೋಲಾರಕ್ಕೆ ಹೋಗಲು ನಿರ್ಧರಿಸಿದ್ದೆ. ಆದರೆ, ಕೋಲಾರ ಗಡಿ ಪ್ರವೇಶ ನಿರ್ಬಂಧ ಆದೇಶ ಪ್ರತಿಯನ್ನು ಪೊಲೀಸರು ಇಂದು ನೀಡಿದ್ದಾರೆ. ಆದರೆ, ಪ್ರವೇಶ ನಿರ್ಬಂಧ ಪತ್ರದಲ್ಲಿ ಹಳೆಯ 30 ಕೇಸ್‌ ನಮೂದಿಸಿದ್ದಾರೆ. ಬಂದ್‌ಗೂ ಇದಕ್ಕೂ ಏನು ಸಂಬಂಧ. ನ್ಯಾಯ್ಯಾಲಯದಲ್ಲಿ ನನಗೆ ವಿಶ್ವಾಸವಿದೆ ಅದಕ್ಕಾಗಿಯೇ ಪ್ರವೇಶ ನಿರ್ಬಂಧಕ್ಕೆ ಸ್ಟೇ ಆರ್ಡರ್‌ ಪಡೆದುಕೊಂಡು ಕೋಲಾರಕ್ಕೆ ಹೋಗುತ್ತೇನೆ.

ಕಾಂಗ್ರೆಸ್‌, ಜೆಡಿಎಸ್‌ ಹಿಂದೂ ವಿರೋಧಿಗಳು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಬಿಜೆಪಿ ಸರ್ಕಾರ ಇದ್ದಾಗಲೂ ಬ್ಯಾನ್‌ ಮಾಡಿದ್ದಾರೆ. ರಾಜ್ಯ ಸರ್ಕಾರದ ನಡೆಯನ್ನು ನಾಡಿನ ಸಮಗ್ರ ಹಿಂದುಗಳು, ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹಲ್ಲೆ ಮಾಡೋದನ್ನ ಸರ್ಕಾರ ಪರೋಕ್ಷವಾಗಿ ಸಮರ್ಥಿಸಿಕೊಳ್ಳುವ ರೀತಿ ವರ್ತಿಸುತ್ತಿದೆ. ಸತ್ಯವಾಗಿ ಮಾತನಾಡುವುದು, ಉಗ್ರವಾಗಿ ಮಾತನಾಡುವುದು ತಪ್ಪೇ?, ಗಲಾಟೆ ಮಾಡಿದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ನಾನು ಕಾನೂನು ಬಾಹೀರವಾಗಿ ಮಾತನಾಡಿದರೆ ಪ್ರಕರಣ ದಾಖಲಿಸಿ, ಬಂಧಿಸಲು. ಅದನ್ನು ಬಿಟ್ಟು ನನ್ನ ಪ್ರವೇಶಕ್ಕೆ ನಿರ್ಬಂಧ ಏಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಸ್ಥಳೀಯ ಮುಖಂಡರು ಹಾಜರಿದ್ದರು.

Latest Videos
Follow Us:
Download App:
  • android
  • ios