ಸೋಮವಾರಪೇಟೆ [ಜ.06]: ಜಿಲ್ಲೆಯ ಯೋಗಪಟು, ರಷ್ಯಾದ ಯುವತಿಯೊಂದಿಗೆ ಹಿಂದೂ ಸಂಪ್ರದಾಯದಂತೆ ಭಾನುವಾರ ಇಲ್ಲಿನ ಜಾನಕಿ ಕನ್ವೆನ್ಶನ್‌ ಹಾಲ್‌ನಲ್ಲಿ ಹಿರಿಯರ ಸಮ್ಮುಖದಲ್ಲಿ ವಿವಾಹವಾದರು.

ಇಲ್ಲಿಗೆ ಸಮೀಪದ ನಂದಿಗುಂದ ಗ್ರಾಮದ ಕೃಷಿಕ ಎನ್‌.ಬಿ. ಚಿನ್ನಪ್ಪ ಮತ್ತು ಪುಷ್ಪಾ ದಂಪತಿ ಪುತ್ರ ಎನ್‌.ಸಿ. ಜೈಚಂದನ್‌, ರಷ್ಯಾದ ಮಾಸ್ಕೊ ವಿಶ್ವವಿದ್ಯಾನಿಲಯದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಲೆಗ್ಸಾಂಡ್ರೋನಾ (ಮಿಲನ) ಅವರನ್ನು ವರಿಸಿದರು.

'ಎರೆಡೆರಡು ಬಾರಿ ಮದುವೆ ಆದ್ರೂ ಮನೆಯವ್ರು ಸಂಸಾರ ಮಾಡೋಕೆ ಬಿಡ್ತಿಲ್ಲ'...

ಜೈ ಚಂದನ್‌ ಕಳೆದ 8 ವರ್ಷಗಳ ಹಿಂದೆ ಮಾಸ್ಕೊದಲ್ಲಿ ಯೋಗ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಕೇಂದ್ರದಲ್ಲಿ ಉಚಿತ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಅಲೆಗ್ಸಾಂಡ್ರೋನಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. 

ಈ ಮನೆಯಲ್ಲಿ ರಾಹು ಇದ್ದರೆ ದಾಂಪತ್ಯ ಸುಖ ಕನಸಷ್ಟೇ...

ಭಾರತದ ಸಂಸ್ಕೃತಿ ಬಗ್ಗೆ ಮಿಲನ ಅಧ್ಯಯನ ಮಾಡಿದ್ದು, ಭಗವದ್ಗೀತೆ ಮತ್ತು ರಾಮಾಯಣದ ಬಗ್ಗೆ ತಿಳಿದುಕೊಂಡಿದ್ದಾರೆ ಎಂದು ಜೈಚಂದನ್‌ ಪತ್ರಿಕೆಗೆ ತಿಳಿಸಿದ್ದಾರೆ. ಅಪಾರ ಬಂಧುಬಳಗದವರು, ಸ್ನೇಹಿತರು ವಧು ವರರನ್ನು ಹಾರೈಸಿದರು.