ದಾವಣಗೆರೆ [ಜ.03]:  ಪ್ರೀತಿ ಮಾಡಿ ವಿವಾಹವಾದ ಪ್ರೇಮಿಗಳು ತಮ್ಮ ರಕ್ಷಣೆಗಾಗಿ ಪೊಲೀಸ್ ಇಲಾಖೆ ಮೊರೆ ಹೋಗಿರೋ ಘಟನೆ ದಾವಣಗೆರೆಯಲ್ಲಾಗಿದೆ. 

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಟ್ರೇಶ್ ಎಂಬ ಯುವಕ ತನ್ನದೇ ಊರಿನ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಪುತ್ರಿಯನ್ನು ವಿವಾಹವಾಗಿದ್ದು, ಆಕೆಯ ತಂದೆಯಿಂದಲೇ ತಮಗೆ ಕಿರುಕುಳ ಆಗಿದೆ ಎಂದು ದೂರು ನೀಡಿದ್ದಾರೆ. 

ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದು,  ಡಿಸೆಂಬರ್ 21 ರಂದು ಬೆಂಗಳೂರಿನ ದೇವಾಲಯ ಒಂದರಲ್ಲಿ ವಿವಾಹವಾಗಿದ್ದಾರೆ. ಆದರೆ ಯುವತಿ ಮನೆಯವರಿಂದ ಪ್ರೇಮಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. 

ಕಾರಿನಲ್ಲಿ ಪತ್ತೆಯಾಯ್ತು ಕೊಳೆತು ಹೋದ ಮಹಿಳೆ ಶವ...

ಯುವತಿಯ ತಂದೆಯೇ ಪೊಲೀಸ್ ಆಗಿದ್ದು, ರಕ್ಷಣೆ ನೀಡಬೇಕಾದವರೇ ಸಮಸ್ಯೆ ಉಂಟು ಮಾಡುತ್ತಿದ್ದಾರೆ.  ಅಲ್ಲದೇ ತಮ್ಮ ಮನವಿಯಲ್ಲಿ ಎರಡು ಬಾರಿ ತಮ್ಮಿಬ್ಬರ ವಿವಾಹ ನಡೆದಿದೆ. ಆದರೆ ಸಂಸಾರ ಮಾಡಲು ಬಿಡುತ್ತಿಲ್ಲವೆಂದು ಪ್ರೇಮಿಗಳು ಹೇಳಿದ್ದಾರೆ.  ಈ ನಿಟ್ಟಿನಲ್ಲಿ ತಮಗೆ ಮನೆಯವರಿಂದ ರಕ್ಷಣೆ ಕೊಡಿಸಬೇಕು ಎಂದು ಪೊಲೀಸ್ ಇಲಾಖೆಯಿಂದ ಪ್ರೀತಿಸಿ ವಿವಾಹವಾದ ದಂಪತಿ ರಕ್ಷಣೆ ಕೋರಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ