Asianet Suvarna News Asianet Suvarna News

Belagavi Violence: ಮಹಾರಾಷ್ಟ್ರಕ್ಕೆ KKRTC ಬಸ್‌ ಸಂಚಾರ ಸ್ಥಗಿತ

*   ಸಂಸ್ಥೆ ಖಜಾನೆಗೆ ನಿತ್ಯ 40 ಲಕ್ಷ ರುಪಾಯಿ ನಷ್ಟ
*   ಎಂಇಎಸ್‌- ಶಿವಸೇನೆ ಉದ್ಧಟತನದಿಂದ ಹೆಚ್ಚಿದ ಆತಂಕ
*   ಈಗಾಗಲೇ ಕೆಕೆಆರ್‌ಟಿಸಿಗೆ ಸೇರಿದ್ದ 3 ಬಸ್‌ ಗಾಜು ಪುಡಿ
 

KKRTC Bus  Service Stops to Maharashtra due to Belagavi Violence grg
Author
Bengaluru, First Published Dec 23, 2021, 12:15 PM IST
  • Facebook
  • Twitter
  • Whatsapp

ಕಲಬುರಗಿ(ಡಿ.23): ಸಮಾಜ ಸುಧಾರಕರು ಹಾಗೂ ಹೋರಾಟಗಾರರ ಪ್ರತಿಮೆ, ಧ್ವಜಗಳ ವಿರೂಪ ಹಾಗೂ ಆ ನಂತರ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(Kalyana Karnataka Road Transport Corporation) ಮಹಾರಾಷ್ಟ್ರ(Maharashtra) ರಾಜ್ಯದ ವಿವಿಧ ನಗರ ಹಾಗೂ ಪಟ್ಟಣಗಳಿಗೆ ನಿತ್ಯ ಓಡಿಸುತ್ತಿದ್ದ ಬಸ್‌ಗಳ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಈಗಾಗಲೇ ಸಂಸ್ಥೆಗೆ ಸೇರಿರುವ ಮುಂಬೈ(Mumabi), ಪುಣೆ(Pune) ಬಸ್ಸುಗಳಿಗೆ ಮಹಾರಾಷ್ಟ್ರದಲ್ಲಿ ಕಳೆದ ಭಾನುವಾರ, ಸೋಮವಾರ ತಡೆದು ನಿಲ್ಲಿಸಿ ಗಾಜು ಪುಡಿ ಮಾಡಿದ್ದಲ್ಲದೆ ಬಸ್ಸುಗಳ ಮೇಎ ಎಂಇಎಸ್‌(MES) ಹಾಗೂ ಶಿವಸೇನೆ(Shiv Sena) ಕಾರ್ಯಕರ್ತರು ಜೈ ಶಿವಾಜಿ, ಜೈ ಮಹಾರಾಷ್ಟ್ರ ಎಂದು ಬರೆದು ವಿವಾದ ಸೃಷ್ಟಿಸಿದ್ದರು. ಇದಲ್ಲದೆ ಸಂಸ್ಥೆಯ ಚಾಲಕರ ಕೈಗೆ ಬಲವಂತವಾಗಿ ಮಹಾರಾಷ್ಟ್ರದ ಧ್ವಜ ಕೊಟ್ಟು ಜೈ ಮಹಾರಾಷ್ಟ್ರ ಘೋಷಣೆ ಕೂಗುವಂತೆ ಆಗ್ರಹಿಸಿದ್ದ ಘಟನೆಗಳು ನಡೆದಿದ್ದವು.

MES Riots : ಸಾರಿಗೆ ಬಸ್ ಮೇಲೆ ಮಸಿ ಬರಹ : ಮತ್ತೆ ವಿಕೃತಿ

ಇವೆಲ್ಲ ಘಟನಾವಳಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿರುವ ಹಿನ್ನೆಲೆಯಲ್ಲಿ ಸಂಸ್ಥೆ ತಾನು ನಿತ್ಯ ವಿಜಯಪುರ, ಕಲಬುರಗಿ ಹಾಗೂ ಬೀದರ್‌ ಜಿಲ್ಲೆಗಳಿಂದ ಮಹಾರಾಷ್ಟ್ರಕ್ಕೆ ಓಡಿಸುತ್ತಿದ್ದಂತಹ 351 ಮಾಗಸೂಚೆಗಳನ್ನೆಲ್ಲ ತಾತ್ಕಾಲಿಕವಾಗಿ ರದ್ದು ಪಡಿಸಿದೆ.

ಈ ಕುರಿತಂತೆ ಕನ್ನಡಪ್ರಭ(Kannada Prabha) ಜೊತೆ ಮಾತನಾಡಿರುವ ಕೆಕೆಆರ್‌ಟಿಸಿ(KKRTC) ಮುಕ್ಯ ಸಂಚಾರ ವ್ಯವಸ್ಥಾಪಕ ಸಂತೋಷ ಕುಮಾರ್‌ ಉಭಯ ರಾಜ್ಯಗಳ ಗಡಿಲ್ಲಿ ತ್ವೇಷಮಯ ವಾತಾವರಣ ಮೂಡದ್ದರಿಂದ ಹಾಗೂ ಸಂಸ್ಥೆಯ ಅನೇ ಬಸ್ಸುಗಳಿಗೆ ಕಲ್ಲು ತೂರಿರುವ, ಗಾಜು ಒಡೆದಿರುವ ಪ್ರಕರಣಗಳು ನಡೆದಿದ್ದರಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸಂಸ್ಥೆ ಇಂತಹ ಕಠಿಣ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

ನಿತ್ಯ 40 ಲಕ್ಷ ರು. ನಷ್ಟ:

ಪ್ರತಿ ದಿನ ಕಲ್ಯಾಣ ಕರ್ನಾಟಕ ಭಾಗದಿಂದ ಕಲಬುರಗಿ, ವಿಜಯಪುರ ಹಾಗೂ ಬೀದರ್‌ ಜಿಲ್ಲೆಳ ಕೆಕೆಆರ್‌ಟಿಸಿ ಡಿಪೋಗಳಿಂದ ನೆರೆಯ ಮಹಾರಾಷ್ಟ್ರ ರಾಜ್ಯಕ್ಕೆ ಸರಿ ಸುಮಾರು 351 ಬಸ್‌ಗಳು ಓಡುತ್ತಿದ್ದವು. ಇದೀಗ ಇವೆಲ್ಲ ಬಸ್‌ ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ಕೆಕೆಆರ್‌ಟಿಸಿಗೆ ನಿತ್ಯ ಸುಮಾರು 40 ಲಕ್ಷ ರು. ನಷ್ಟ ಸಂಭವಿಸುತ್ತಿದೆ. ಸಂಸ್ಥೆಗೆ ನಷ್ಟ ಸಂಭವಿಸಿದರೂ ಪರವಾಗಿಲ್ಲ, ಪ್ರಯಾಣಿಕರ(Passengers) ಸುರಕ್ಷತೆ ಹಾಗೂ ಸಂಸ್ಥೆಯ ಆಸ್ತಿಪಾಸ್ತಿ ಸುರಕ್ಷತೆಗೋಸ್ಕರ ಇಂತಹ ಕಠಿಣ ನಿರ್ಧಾರಗಳನ್ನು ಸಂಸ್ಥೆ ಕೈಗೊಂಡಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಎಂಇಎಸ್‌ ಕಾರ್ಯಕರ್ತರೆಂದು ಹೇಳಿಕೊಂಡು ಕಿಡಿಗೇಡಿಗಳ ಗುಂಪುಗಳು ಸಂಸ್ಥೆಯ ಬಸ್ಸುಗಳನ್ನು ಅಡ್ಡಗಟ್ಟುವ, ತಡೆದು ನಿಲ್ಲಿಸಿ ಕಲ್ಲು ಊರುವ, ಗಾಜು ಪುಡಿ ಮಾಡುತ್ತಿದ್ದಾರೆ. ಇದರಿಂದಾಗಿ ಬಸ್ಸಿನೊಳಗಿರುವ ಪ್ರಯಾಣಿಕರಿಗೂ ಆತಂಕ ಕಾಡುತ್ತಿದೆ. ಹೀಗಾಗಿ ದ್ವೇಷಮಯ ವಾತಾವರಣ ತಿಳಿಯಾಗುವವರೆಗೂ ಮಹಾರಾಷ್ಟ್ರ ಬಸ್‌ ಸೇವೆ ಸ್ಥಗಿತಕ್ಕೆ ನಿರ್ಧರಿಸಲಾಗಿದೆ. ಪರಿಸ್ತಿತಿ ವಲೋಕಿಸಿ ಬಸ್‌ ಸೇವೆ ಪುನಃ ಆರಂಭಿಸುವ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಸಂತೋಷ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

Belagavi Violence: ಎಂಇಎಸ್‌ನವರು ದೇಶದ್ರೋಹಿಗಳು: ಸಚಿವ ಆರಗ ಜ್ಞಾನೇಂದ್ರ

ವಿಜಯಪುರ ಜಿಲ್ಲೆಯಿಂದ ಪಕ್ಕದ ಸೊಲ್ಲಾಪುರ, ಅಕ್ಕಲಕೋಟೆಗಳಿಗೆ ಸಂಚರಿಸುವ ಬಸ್ಸುಗಳ ಸೇವೆ ಎಂದಿನಂತಿದೆ, ಅಲ್ಲಿನ ಗಡಿಯಲ್ಲಿ ಅಂತಹ ವಿರೋಧ ಕಂಡಿಲ್ಲವಾದ್ದರಿಂದ ಪ್ರಯಾಣಿಕರಿಗೆ ಆಕೆ ಅನಾನುಕೂಲವೆಂದು ಆ ಭಾಗದಲ್ಲಿ ಬಸ್ಸುಗಳ ಸೇವೆ ಮುಂದುವರಿಸಿದ್ದೇವೆ. ಇದಲ್ಲದೆ ಉದಗೀರ್‌ ಭಾಗದಲ್ಲಿಯೂ ಬಸ್‌ ಸೇವೆ ಇದೆ. ಔರಂಗಾಬಾದ್‌, ಪುಣೆ, ಮುಂಬೈ, ಲಾತೂರ್‌, ಸಾಂಗಲಿ, ಮೀರಜ್‌ ಈ ಮಾರ್ಗಸೂಚಿಗಳನ್ನು ರದ್ದುಪಡಿಸಲಾಗಿದೆ ಎಂದು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕರಿಗೆ ಸೇವೆ ನೀಡುವ ಸಂಸ್ಥೆ ತಮ್ಮದಾಗಿದ್ದರಿಂದ ತ್ವೇಷದ ವಾತಾರಣದಲ್ಲಿ ಬಸ್‌ ಓಡಿಸುವಾಗ ಏನಾದರೂ ಅಚಾಯತುರ್ಯವಾದಲ್ಲಿ ಅದರಿಂದ ಸಂಸ್ಥೆಗೆ ಕೆಟ್ಟಹೆಸರು, ಹೀಗಾಗಿ ಗೊಂದಲದ ವಾತಾವರಣ ತಿಳಿಯಾಗೋವರೆಗೂ ಬಸ್‌ ಸಂಚಾರ ನಿಲ್ಲಿಸಲಾಗುತ್ತಿದೆ ಎಂದು ಸಿಟಿಎಂ ಸಂತೋಷ ಕುಮಾರ್‌ ಹೇಳಿದ್ದಾರೆ.
 

Follow Us:
Download App:
  • android
  • ios