ಹುಬ್ಬಳ್ಳಿ(ಡಿ.14): ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಸಾಧಿಸಿದ ಯಶಸ್ಸು ಹಾಗೂ ಈಚೆಗೆ ಸಚಿವರು ಭೇಟಿ ನೀಡಿದ ಕಿಮ್ಸ್‌ ವಿವಿಧ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ಸಿಬ್ಬಂದಿ ಬಾಡೂಟ ಸವಿದಿದ್ದಾರೆ.

ಗೆಟ್‌ ಟು ಗೆದರ್‌ ಮಾದರಿಯ ಈ ಕಾರ್ಯಕ್ರಮಕ್ಕೆ ಕಿಮ್ಸ್‌ ಆಡಳಿತ ಮಂಡಳಿಯ ಪದಾಧಿಕಾರಿಗಳು, ವೈದ್ಯರು ಹಾಗೂ ಸ್ಟಾಫ್‌ ನರ್ಸ್‌ಗಳು ಸೇರಿ 60ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು. 

ಯೋಗೀಶ್ ಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಮತ್ತೊಬ್ಬರ ಹತ್ಯೆಗೆ ವಿನಯ್‌ ಕುಲಕರ್ಣಿ ಸ್ಕೆಚ್‌?

ಈ ಬಗ್ಗೆ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದ ಕಿಮ್ಸ್‌ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಕಾರ್ಯಕ್ರಮದ ಯಶಸ್ಸಿಗಾಗಿ ಸಿಬ್ಬಂದಿ ಹಗಲಿರುಳು ಶ್ರಮಿಸಿದ್ದಾರೆ. ಎಲ್ಲರೂ ಸೇರಿ ಊಟ ಮಾಡುವ ಮೂಲಕ ಸಿಬ್ಬಂದಿಯ ವಿಶ್ವಾಸ ಗಳಿಸುವ, ಕೆಲಸಕ್ಕೆ ಪ್ರೋತ್ಸಾಹಿಸುವ ಕೆಲಸ ಮಾಡಿದ್ದೇವೆ. ಬಿರಿಯಾನಿ ಏನೂ ಭರ್ಜರಿ ಬಾಡೂಟವಲ್ಲ ಎಂದರು.