ಮೈಸೂರು(ಡಿ.10): 'ಮಾಮೂಲಿ' ಕೊಡಲು ನಿರಾಕರಿಸಿದ ಕಂಡಕ್ಟರ್ ಮೇಲೆ ಡಿಪೋ ಮ್ಯಾನೇಜರ್ ದರ್ಪ ತೋರಿಸಿರುವ ವಿಡಿಯೋ ವೈರಲ್ ಆಗಿದೆ. ಲಂಚ ಕೊಡುವುದಿಲ್ಲ ಎಂದ ಕಂಡಕ್ಟರ್‌ಗೆ ಮ್ಯಾಜೇಜರ್ ಆವಾಜ್ ಹಾಕಿದ್ದು, ವಿಡಿಯೋ ವೈರಲ್ ಆಗಿದೆ.

ನಾನು ಹೊಡಿಯೋಲ್ಲ ನಿನಗೆ ಬೇರೆಯವರು ಹೊಡೆಯುತ್ತಾರೆ ಎಂದು ಬೈದಿರುವ ಡಿಪೋ ಮ್ಯಾನೇಜರ್ ಕತ್ತು ಹಿಡಿದು ಆಚೆಗೆ ತಳ್ಳಲು ಸೂಚಿಸಿದ್ದಾರೆ. ಕೆ.ಆರ್. ನಗರದ ಕೆಎಸ್ಆರ್‌ಟಿಸಿ ಡಿಪೋ ಮ್ಯಾನೇಜರ್ ಪಾಪನಾಯಕ ಅವಾಜ್ ಹಾಕಿದ್ದು, ಚಾಲಕ ಶರಣಬಸಯ್ಯ ಎಂಬವವರಿಗೆ ಡಿಪೋ ಮ್ಯಾನೇಜರ್ ಪಾಪನಾಯಕ‌ ಧಮ್ಕಿ ಹಾಕಿದ್ದಾರೆ.

ಕಾಂಗ್ರೆಸ್ ಪಕ್ಷ ಜಂಬೂ ಸವಾರಿ ಇದ್ದ ಹಾಗೆ: ಶಾಸಕ ಮಂಜುನಾಥ್

ಪ್ರತೀ ತಿಂಗಳು ಮಾಮೂಲಿ ಕೊಟ್ರೆ ಮಾತ್ರ ಸರಿಯಾಗಿ ಡ್ಯೂಟಿ ಕೊಡುತ್ತಾರೆ. ಇಲ್ಲವಾದರೆ ಡ್ಯೂಟಿನೂ ಇಲ್ಲ. ಬದಲಿಗೆ ನೋಟೀಸ್ ಕೊಡುತ್ತಾರೆ ಎಂದು ನಿರ್ವಾಹಕ ಶರಣಬಸಯ್ಯ ಆರೋಪಿಸಿದ್ದಾರೆ.

ಕೇಳಲು ಹೋಗಿದ್ದಕ್ಕೆ ನನ್ನ ಕತ್ತಿನಪಟ್ಟಿ ಹಿಡಿದು ಹಲ್ಲೆ ಮಾಡಿದ್ದಾರೆ. ದಿನ ನಿತ್ಯ ಮಾನಸಿಕ‌ ಕಿರುಕುಳ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಲಾಗುತ್ತಿದೆ. ಮನನೊಂದು ಆತ್ಮಹತ್ಯೆಗೆ ನಿರ್ಧಾರಿಸಿದ್ದೆ. ಸಹೋದ್ಯೋಗಿಗಳು ಮನವೊಲಿಸಿದ್ದರು ಎಂದಿದ್ದಾರೆ.

ಎರಡು ದಿನ ರಜಾ ಹಾಕಿದ್ದಕ್ಕೆ 7 ತಿಂಗಳು ಅಮಾನತು

ಸಾವಿನ ವಿಚಾರವಾಗಿ ಎರಡು ದಿನ ರಜಾ ಹಾಕಿದ್ದೆ. ಏಳು ತಿಂಗಳು ಅಮಾನತು ಮಾಡಿದ್ದಾರೆ. ಈಗ ಕೇಸ್ ವಾಪಾಸ್ ಪಡೆಯಲು ಪುಸಲಾಯಿಸುತ್ತಿದ್ದಾರೆ. ನಾನು ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.

ಮರ್ಯಾದೆ ಇದ್ದರೆ ಜನರ ಬಳಿ ಕ್ಷಮೆ ಕೇಳಿ: ಸಿದ್ದು ವಿರುದ್ದ ಗುಡುಗಿದ ಸೊಗಡು ಶಿವಣ್ಣ