Asianet Suvarna News Asianet Suvarna News

ಎಸ್‌ಡಿಪಿಐ, ಪಿಎಫ್‌ಐ ಬಿಜೆಪಿಯ ಬೀ ಟಿಂ: ರಾಜ್ಯ ಸರ್ಕಾರದ ವಿರುದ್ಧ ಪ್ರಮೋದ್‌ ಮುತಾಲಿಕ್‌ ಕಿಡಿ

Pramod Muthalik on Kerur violence: ಘಟನೆ ಸಂಬಂಧ ವಿಜಯಪುರದಲ್ಲಿ ಮಾತನಾಡಿದ ಪ್ರಮೋದ್‌ ಮುತಾಲಿಕ್ ಹಿಂದೂ ಹುಡುಗಿರನ್ನ ಚುಡಾಯಿಸುವುದನ್ನ ತಡೆಯಲು ಹೋದಾಗ ಘಟನೆ ನಡೆದಿದೆ, ಹಿಂದೂ ಹುಡುಗಿರಯನ್ನ ಚುಡಾಯಿಸೊದನ್ನ ತಡೆಯಬಾರದಾ? ಎಂದು ಪ್ರಶ್ನಿಸಿದರು 

Kerur violence SDPI PFI is BJP B Team Says Sri Ram Sena pramod muthalik in Vijayapura mnj
Author
Bengaluru, First Published Jul 22, 2022, 4:24 PM IST

ವಿಜಯಪುರ (ಜು. 22): "ಎಸ್‌ಡಿಪಿಐ, ಪಿಎಫ್‌ಐ ಬಿಜೆಪಿಯ ಬೀ ಟಿಂ, ಕಾಂಗ್ರೆಸ್ ಹೇಳ್ತಿರೋದು ನೂರಕ್ಕೆ ನೂರು ಸತ್ಯ, ಕಾಂಗ್ರೆಸ್ ಮುಸ್ಲಿಂ ಓಟ್ ಬ್ಯಾಂಕ್‌ ಒಡೆಯೋದು ಎಸ್‌ಡಿಪಿಐ ಪ್ಲಾನ್" ಎಂದು ಶ್ರಿರಾಮಸೇನೆ ಮುಖ್ಯಸ್ಥ  ಪ್ರಮೋದ್ ಮುತಾಲಿಕ್ ಹೇಳಿದರು. ಕೆರೂರು ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳನ್ನು ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ಭೇಟಿ ಮಾಡಿದ ಪ್ರಮೋದ್ ಮುತಾಲಿಕ್ "ಬಿಜೆಪಿಗೆ ಅಧಿಕಾರ ಮುಖ್ಯ, ದೇಶದ ಸುರಕ್ಷತೆ ಮುಖ್ಯ ಅಲ್ಲ. ಹಿಂದೂ ಕಾರ್ಯಕರ್ತರ ಸುರಕ್ಷತೆ ಇವರಿಗೆ ಬೇಕಿಲ್ಲ. ಎಸ್‌ಡಿಪಿಐ ಮೂಲಕ ಅಧಿಕಾರಕ್ಕೆ ಬಂದು ಮೆರೆಯಬೇಕು ಅನ್ನೋದು ಬಿಜೆಪಿ ಪ್ಲಾನ್" ಎಂದರು. 

ಯುವತಿಯನ್ನು ಚುಡಾಯಿಸಿದರೆಂಬ ಕಾರಣಕ್ಕೆ ಬಾಗಲಕೋಟೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು.  ಈ ಸಂಬಂಧ ಬಂಧಿತರಲ್ಲಿ ವಿಜಯಪುರದ ಕೇಂದ್ರ ಕಾರಾಗೃಹದಲ್ಲಿ 13 ಹಿಂದೂ ಮುಖಂಡರಿದ್ದು, ಅವರಿಗೆ ಧೈರ್ಯ ತುಂಬಲು ಮುತಾಲಿಕ್ ಶುಕ್ರವಾರ ಭೇಟಿಯಾದರು.  

ಈ ವೇಳೆ ಮಾತನಾಡಿದ ಮುತಾಲಿಕ್  "ಎಸ್‌ಡಿಪಿಐ, ಪಿಎಫ್‌ಐ ಕ್ಯಾನ್ಸರ್ ಇದ್ದ ಹಾಗೆ,  ಇವರು ದೇಶದ್ರೋಹಿಗಳು, ಟೆರರಿಸ್ಟ್‌ಗಳು. ದೇಶದ ಎಲ್ಲ ರಾಜ್ಯಗಳಿಗೆ ವ್ಯಾಪಿಸಿದ್ದಾರೆ. ಇವರಿಗೆ ದೇಶ, ಸಂವಿಧಾನ, ನೀತಿ-ನಿಯಮ ಇಲ್ಲ. ಎಸ್‌ಡಿಪಿಐ, ಪಿಎಫ್‌ಐ ಕುರಾನ್ ಆಧಾರದ ಮೇಲೆ ನಡೆಯೋದು. ಹಿಂದೆ ಎಸ್‌ಡಿಪಿಐ, ಪಿಎಫ್‌ಐ ಬ್ಯಾನ್ ಮಾಡಲು ಬಿಜೆಪಿ ಒತ್ತಡಹಾಕಿತ್ತು.  ಈ ಬಗ್ಗೆ ದಾಖಲೆ ನನ್ನ ಬಳಿ ಇವೆ. ಬಿಜೆಪಿಯವರೆ ಕೇಂದ್ರಕ್ಕೆ ಹೋಗಿ ಬ್ಯಾನ್ ಮಾಡಲು ಮನವಿ ಸಲ್ಲಿಸಿದ್ದರು. ರಾಜ್ಯದಲ್ಲಿ, ಕೇಂದ್ರದಲ್ಲಿ ಇವರದ್ದೆ ಸರ್ಕಾರ ಇದ್ದಾಗ ಬಾಯಿ ಮುಚ್ಚಿಕೊಂಡಿದ್ದಾರೆ. ಈಗ ಬ್ಯಾನ್ ಬಗ್ಗೆ ಮಾತಾಡ್ತಿಲ್ಲ" ಎಂದು ಕಿಡಿಕಾರಿದರು.  

ಹುಡುಗಿರಯನ್ನ ಚುಡಾಯಿಸೊದನ್ನ ತಡೆಯಬಾರದಾ?: "ಕೆರೂರು ಘಟನೆಯನ್ನ ಖಂಡಿಸುತ್ತೇನೆ, ಒಬ್ಬ ಭಟ್ಕಳದ ಮಹಿಳೆ, ಬುರ್ಕಾನಲ್ಲಿ ಚಾಕೂ ತಂದು ಇರಿದಿದ್ದಾಳೆ, ಈ ಘಟನೆ ನೋಡಿದರೆ ಭಟ್ಕಳದಲ್ಲಿ ಇನ್ನು ಭಯೋತ್ಪಾದನೆಯ ಕೂಕೃತ್ಯ ಜೀವಂತವಾಗಿದೆ,  ಹಿಂದೂ ಹುಡುಗಿರನ್ನ ಚುಡಾಯಿಸುವುದನ್ನ ತಡೆಯಲು ಹೋದಾಗ ಘಟನೆ ನಡೆದಿದೆ, ಹಿಂದೂ ಹುಡುಗಿರಯನ್ನ ಚುಡಾಯಿಸೊದನ್ನ ತಡೆಯಬಾರದಾ?" ಎಂದು ಪ್ರಶ್ನಿಸಿದರು. 

ಇದನ್ನೂ ಓದಿ: ಕೆರೂರ ಪಟ್ಟಣ ಗಲಾಟೆಗೆ ಹಳೇ ದ್ವೇಷ ಹಾಗೂ ಯುವತಿಯರನ್ನು ಚುಡಾಯಿಸಿದ್ದೇ ಮೂಲ ಕಾರಣ!

"ಹಿಂದೂ ಹುಡುಗಿಯರು, ಮಹಿಳೆಯರ ರಕ್ಷಣೆ ನಮ್ಮ ಹೊಣೆ,  ಹಿಂದೂ ಮಹಿಳೆಯರ ರಕ್ಷಣೆ ನಾವೇ ಮಾಡಬೇಕು, ಅದು ನಮ್ಮ ಕರ್ತವ್ಯ, ಮುಸ್ಲಿಂ ಕಿಡಿಗೇಡಿಗಳ ಪುಂಡಾಟಿಕೆ ಇನ್ನು ನಡೆಯೋದಿಲ್ಲ, ಮುಸ್ಲಿಂರ ಗೂಂಡಾಗಿರಿ ಇನ್ನು ನಡೆಯೊಲ್ಲ, ಹಿಂದೂ ಸಮಾಜ ಜಾಗೃತಿಯಾಗಿದೆ,  ಮುಸ್ಲಿಂರಿಗೆ ಎಚ್ಚರಿಕೆ ಕೊಡ್ತಿದ್ದೇನೆ" ಎಂದ ಮುತಾಲಿಕ್ ಹೇಳಿದರು. 

"ಹುಷಾರಾಗಿರಿ. ನಿಮ್ಮ ಪಾಡಿಗೆ ನೀವಿರಿ. ಗಲಭೆ, ಕೊಲೆ, ಹಿಂದೂಗಳನ್ನ ಕೆಣಕೋದು ಇನ್ನು ನಡೆಯೊಲ್ಲ, ಇದಕ್ಕೆ ಹಿಂದೂ ಸಮಾಜ ಉತ್ತರ ಕೊಡುತ್ತೆ, ಸಂವಿಧಾನದ ಆಧಾರದ ಮೇಲೆ ದೇಶ ಪಡೆಯುತ್ತಿದೆ, ಡಾ. ಬಿಆರ್ ಅಂಬೇಡ್ಕರರ ಸಂವಿಧಾನ ಇದೆ, ಕಂಪ್ಲೆಂಟ್ ಕೊಡಿ, ಪ್ರಜಾಪ್ರಭುತ್ವದ ಆಧಾರದ ಮೇಲೆ ಧರಣಿ ಮಾಡಿ, ಚಾಕೂ, ತಲವಾರ್ ಹಿಡಿದು ಬರೋದಕ್ಕೆ ಇದು ತಾಲಿಬಾನ್ ಅಲ್ಲ, ಇನ್ಮುಂದೆ ನಿಮ್ಮ ಆಟ ನಡೆಯೊಲ್ಲ" ಎಂದು ಮುತಾಲಿಕ ಎಚ್ಚರಿಕೆ ನೀಡಿದರು.

ಹಿಂದೂಗಳ ರಕ್ಷಣೆಯಲ್ಲಿ ರಾಜ್ಯ ಸರ್ಕಾರ ವಿಫಲ: "ಹಿಂದೂಗಳ ರಕ್ಷಣೆ ವಿಚಾರದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ, ನೂರಕ್ಕೆ ನೂರು ರಾಜ್ಯ ಸರ್ಕಾರ ವಿಫಲವಾಗಿದೆ,  ಹರ್ಷನ ಕೊಲೆ ಬಳಿಕ ಮತ್ತೆ ಐದು ಬಾರಿ ಹಿಂದೂಗಳ ಮೇಲೆ ಹಲ್ಲೆಯಾಗಿದೆ, ಶಿವಮೊಗ್ಗ ಕೋಟೆ ಹೊಕ್ಕು ಹೊಡೆಯುತ್ತಿದ್ದಾರೆ,  ಶಿವಮೊಗ್ಗ ಮಾಜಿ ಸಿಎಂ, ಹಾಲಿ ಗೃಹ ಮಂತ್ರಿ ಜಿಲ್ಲೆ ಅಲ್ಲೆ ಹೊಕ್ಕು ಹೊಡೆಯುತ್ತಿದ್ದಾರೆ, ಎಲ್ಲ ಶಾಸಕರು ಬಿಜೆಪಿಯವರು, ಇದು ಸರ್ಕಾರದ ವಿಫಲತೆ ಅಲ್ಲದೆ ಇನ್ನೇನು?" ಎಂದು ಮುತಾಲಿಕ ಆಕ್ರೋಶ ಹೊರಹಾಕಿದರು.  

ಇದನ್ನೂ ಓದಿ: ದುಡ್ಡು ಎಸೆದ ಬಗ್ಗೆ ಮಾತ್ರ ಕೇಳ್ತೀರಿ, ಪರಿಹಾರ ಹಣ ವಾಪಾಸ್‌ ತೆಗೆದುಕೊಂಡಿದ್ದಾರೆ ಅದರ ಬಗ್ಗೆ ಮಾತಾಡಿ!

"ಹರ್ಷಾ ಹಂತಕರು ಜೈಲಿಂದಲೇ ವಿಡಿಯೋ ಕಾಲ್ ಮಾಡಿ ಹೆಂಡ್ತಿ-ಮಕ್ಕಳ ಜೊತೆಗೆ ಮಾತಾಡ್ತಾರೆ, ಇದು ಎಂಥಹ ವ್ಯವಸ್ಥೆ , ಜೈಲು ಲಾಡ್ಜಿಂಗ್ ಆಂಡ್ ಬೋರ್ಡಿಂಗ್,  ಹರ್ಷನ ತಾಯಿಗೆ ಹೇಗೆ ಆಗಿರಬಹುದು, ಮಗನ ಕೊಲೆ ಮಾಡಿದವರು ಜೈಲಿಂದ ಆನಂದದಿಂದ ಮಾತಾಡ್ತಾರೆ ಅಂದ್ರೆ ತಾಯಿಗೆ ಹೇಗೆ ಆಗಿರಬೇಡ,  ಅದೇ ಜೈಲಲ್ಲಿ ಪಾಕಿಸ್ತಾನಿಗಳಿದ್ದಾರೆ, ಟೆರರಿಸ್ಟ್ ಇದ್ದಾರೆ. ಮುಸ್ಲಿಂ ಗೂಂಡಾಗಳಿದ್ದಾರೆ, ಅವರು ಪಾಕಿಸ್ತಾನಕ್ಕೆ ಹೀಗೆ ಮಾತನಾಡ್ತಿರಬಹುದು, ಇದು ರಾಜ್ಯ ಸರ್ಕಾರದ ವೈಫಲ್ಯ, ಹೀಗೆ ಆದ್ರೆ ಮುಂದೆ ಸರ್ಕಾರಕ್ಕೆ ಹಿಂದೂ ಸಮಾಜ ಪಾಠ ಕಲಿಸುತ್ತಾರೆ" ಎಂದು ಮುತಾಲಿಕ ಆಕ್ರೋಶ ಹೊರಹಾಕಿದರು. 

ಹಿಂದುತ್ವ ವಾದಿಗಳಿಗೆ ಬಿಜೆಪಿಯಲ್ಲಿ ಪ್ರವೇಶ ಇಲ್ಲ:  "ನಾನು ರಾಜಕೀಯ ಬಾಗಿಲನ್ನ ಬಂದ್ ಮಾಡಿದ್ದೇನೆ, ಯಾವುದೆ ಕಾರಣಕ್ಕು ಚುನಾವಣೆ ಇಲ್ಲ, ನಮ್ಮಂತಹ ಹೋರಾಟಗಾರರಿಗೆ, ಪ್ರಾಮಾಣಿಕರಿಗೆ,ಹಿಂದುತ್ವ ವಾದಿಗಳಿಗೆ ಇಂದಿನ ರಾಜಕೀಯ ಬಿಜೆಪಿಯಲ್ಲಿ ಪ್ರವೇಶ ಇಲ್ಲ, ಎಲ್ಲ ಕಳ್ಳರು,ದರೋಡೆಕೋರರು, ಯಾರು ಭ್ರಷ್ಟರಿದ್ದಾರೆ ಅವರಿಗೆ ಬಿಜೆಪಿ ಬಾಗಿಲು ತೆರೆದಿದೆ, ಕಾರಣ ನಿಶ್ಚಿವಾಗಿ ಚುನಾವಣೆಗಾಗಿ ನನ್ನ ಬಾಗಿಲನ್ನ ಕ್ಲೋಸ್ ಮಾಡಿದ್ದೇನೆ" ಎಂದು ಮುತಾಲಿಕ ಹೇಳಿದರು. 

Follow Us:
Download App:
  • android
  • ios