Bagalkot: ಕೆರೂರ ಪಟ್ಟಣ ಗಲಾಟೆಗೆ ಹಳೇ ದ್ವೇಷ ಹಾಗೂ ಯುವತಿಯರನ್ನು ಚುಡಾಯಿಸಿದ್ದೇ ಮೂಲ ಕಾರಣ!

ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಎರಡು ಅನ್ಯಕೋಮಗಳ ಗುಂಪಿನ ನಡುವೆ ಗಲಾಟೆಗೆ ಹಳೇ ದ್ವೇಷ ಹಾಗೂ ಯುವತಿಯರನ್ನು ಚುಡಾಯಿಸಿದ್ದೇ ಮೂಲ ಕಾರಣವಾಗಿದ್ದು, 4 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

reason for clashes between two groups at kerur in bagalkot gvd

ಬಾಗಲಕೋಟೆ (ಜು.07): ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಎರಡು ಅನ್ಯಕೋಮಗಳ ಗುಂಪಿನ ನಡುವೆ ಗಲಾಟೆಗೆ ಹಳೇ ದ್ವೇಷ ಹಾಗೂ ಯುವತಿಯರನ್ನು ಚುಡಾಯಿಸಿದ್ದೇ ಮೂಲ ಕಾರಣವಾಗಿದ್ದು, 4 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಎರಡೂ ಗುಂಪಿನ 18 ಜನರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಬಾಗಲಕೋಟೆ ಎಸ್.ಪಿ.ಜಯಪ್ರಕಾಶ್ ಹೇಳಿಕೆ ನೀಡಿದ್ದಾರೆ. 

ಬುಧವಾರ ಈ ಸಂಬಂಧ ಎರಡು ಕೋಮಿನ ಯುವಕರ ಮಧ್ಯೆ ಗಲಾಟೆಯಾಗಿದೆ. ನಾಲ್ವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಲಾಟೆಯಲ್ಲಿ ಒಂದು ಗುಂಪಿನ 3 ಜನ, ಮತ್ತೊಂದು ಗುಂಪಿನ ಓರ್ವನಿಗೆ ಗಾಯವಾಗಿದೆ. ನಾಳೆ (ಶುಕ್ರವಾರ) ರಾತ್ರಿ 8 ಗಂಟೆಯವರೆಗೆ 144 ಸೆಕ್ಷನ್ ಜಾರಿಯಲ್ಲಿರುತ್ತೆ. ಜನರು ಅನವಶ್ಯಕವಾಗಿ ಕಾನೂನು ಕೈಗೆ ತೆಗೆದುಕೊಳ್ಳಬಾರದು ಹಾಗೂ ಪೋಲಿಸ ಇಲಾಖೆಗೆ  ಸಹಕರಿಸಬೇಕು.

ಇನ್ನು ಯುವತಿಯರನ್ನ ಚುಡಾಯಿಸುತ್ತಿದ್ದ ವಿಚಾರಕ್ಕೆ ಗಲಾಟೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಯಾರೂ ಕೂಡ ತಪ್ಪು ಸಂದೇಶ ರವಾನೆ ಮಾಡಬಾರದು. ಬೇರೆ ಯಾವುದೇ ಅಂಶಕ್ಕೆ ಇದು ಜಗಳವಾಗಿಲ್ಲ. ಇದೊಂದು ಹಳೇ ದ್ವೇಷ ಮತ್ತು ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಇದರಲ್ಲಿ ಬೇರೆ ಕಾರಣ ಇಲ್ಲ. ಈಗಾಗಲೇ ಇನ್ನಷ್ಟು ಆರೋಪಿಗಳ ಪತ್ತೆಗಾಗಿ ತಂಡ ರಚನೆ ಮಾಡಲಾಗಿದೆ. 

ಎರಡು ಅನ್ಯಕೋಮಿನ ಗುಂಪುಗಳ ಮಧ್ಯೆ ಗಲಾಟೆ, ಅಂಗಡಿಗಳಿಗೆ ಬೆಂಕಿ , ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ

ಉಳಿದ ಆರೋಪಿಗಳನ್ನ ಬಂಧಿಸಿ ವಿಚಾರಣೆ ಮಾಡುತ್ತೇವೆ. ಘಟನೆಯಲ್ಲಿ ಗಾಯಗೊಂಡ ಗಾಯಾಳುಗಳು ಅಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಗುಂಪಿನ ವ್ಯಕ್ತಿಗೆ ಗಾಯವಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಒಂದು ಬೈಕ್ ಮತ್ತು ತಳ್ಳುವ ಗಾಡಿ ಸುಟ್ಟಿದ್ದಾರೆ. 6 ಬೈಕ್ ಗಳು ಜಖಂ ಆಗಿವೆ. ಭದ್ರತೆಗಾಗಿ 5 IRB ತುಕುಡಿಗಳು ಸೇರಿದಂತೆ ಹೆಚ್ಚಿನ ಆಫೀಸರ್ ಗಳನ್ನ ನಿಯೋಜಿಸಲಾಗಿದೆ ಎಂದು ಎಸ್.ಪಿ.ಜಯಪ್ರಕಾಶ್ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios