ದುಡ್ಡು ಎಸೆದ ಬಗ್ಗೆ ಮಾತ್ರ ಕೇಳ್ತೀರಿ, ಪರಿಹಾರ ಹಣ ವಾಪಾಸ್ ತೆಗೆದುಕೊಂಡಿದ್ದಾರೆ ಅದರ ಬಗ್ಗೆ ಮಾತಾಡಿ!
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೀಡಿದ್ದ ಪರಿಹಾರದ ಹಣವನ್ನು ಮುಸ್ಲಿಂ ಮಹಿಳೆಯೊಬ್ಬಳು ಎಸೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಮಾಜಿ ಸಿಎಂ ಪ್ರತಿಕ್ರಿಯೆ ನೀಡಿದ್ದು, ಬರೀ ದುಡ್ಡು ಎಸೆದ ಬಗ್ಗೆ ಮಾತ್ರ ಕೇಳ್ತೀರಿ, ಅವರು ಪರಿಹಾರ ಹಣವನ್ನು ವಾಪಸ್ ಪಡೆದುಕೊಂಡಿದ್ದಾರೆ ಅದರ ಬಗ್ಗೆ ಮಾತನಾಡಿ ಎಂದು ತಿಳಿಸಿದ್ದಾರೆ.
ಬಾಗಲಕೋಟೆ (ಜುಲೈ 15): ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಪರಿಹಾರದ ಹಣವಮ್ನ ಮುಸ್ಲಿಂ ಮಹಿಳೆ ರಾಜ್ಮಾ ಎಸೆದ ಪ್ರಕರಣ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಮಾನವೀಯತೆ ದೃಷ್ಟಿಯಿಂದ ಈ ಪರಿಹಾರ ವೈಯಕ್ತಿವಾಗಿ ನೀಡಿದ್ದು, ಕೆಲವರ ಕುಮ್ಮಕ್ಕಿನಿಂದ ಮಹಿಳೆ ಹೀಗೆ ಮಾಡಿರಬಹುದು ಎಂದು ಹೇಳಿದ್ದಾರೆ. ಅವರು ಸಿಟ್ಟಿನ ಭರದಲ್ಲಿ ಹಾಗೆ ಮಾಡಿರಬಹುದು. ಹಣವನ್ನು ವಾಪಾಸ್ ಕೊಟ್ಟು ಕಳುಹಿಸಿದ್ದೀವಿ, ಅದನ್ನು ಅವರು ತೆಗೆದುಕೊಂಡಿದ್ದಾರೆ. ಹಣ ವಾಪಾಸ್ ಕೊಟ್ಟಿದ್ದು, ಅವರು ತೆಗೆದುಕೊಂಡಿದ್ದು ಅದನ್ನೆಲ್ಲಾ ನೀವು ಹೇಳೋದಿಲ್ಲ ಎಂದು ಮಾಧ್ಯಮದವರಿಗೆ ಪ್ರಶ್ನೆ ಮಾಡಿದರು." ನಾವು ಮಾನವೀಯತೆ ದೃಷ್ಟಿಯಿಂದ ಹಣ ಕೊಟ್ಟಿದ್ದೇವೆ. ಅವರ ಕಷ್ಟಕ್ಕೆ ಈ ಹಣ ಆಗುತ್ತದೆ ಎನ್ನುವ ಕಾರಣಕ್ಕೆ ನೀಡಿದ್ದಲ್ಲ. ಇಂಥವೆಲ್ಲ ಆದಾಗ ಸರ್ಕಾರದಿಂದ 1-2 ಲಕ್ಷ ಪರಿಹಾರ ಕೊಡುತ್ತಾರೆ. ಸತ್ತವರಿಗೂ ಪರಿಹಾರ ಕೊಟ್ಟಿದ್ದೇವೆ. ನಾವು ಹಣ ಕೊಟ್ಟರೆ ಅವರು ವಾಪಾಸ್ ಬರ್ತಾರ ಎಂದು ಪ್ರಶ್ನೆ ಮಾಡಿದ ಅವರು, ಯಾವುದೇ ಸಂದರ್ಭದಲ್ಲೂ ಹಣ ಎನ್ನುವುದು ಪರಿಹಾರವಲ್ಲ. ಇದು ಮಾನವೀಯತೆಯಿಂದ ನೀಡಿರುವ ಪರಿಹಾರ ಎಂದು ಹೇಳಿದರು. ಕಷ್ಟದಲ್ಲಿದ್ದೋರಿಗೆ ಅನುಕೂಲ ಆಗಲಿ ಅಂತಾ ಹೀಗೆ ಮಾಡಿರ್ತೇವೆ. ಯಾರೂ ಕೂಡ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಉರಿಯೋ ಬೆಂಕಿ ಮೇಲೆ ಉಪ್ಪು ಹಾಕಿ ಆನಂದ ನೋಡುವ ಕೆಲಸ ಮಾಡಬಾರದು. ನಾವೆಲ್ಲರೂ ಜನಪ್ರತಿಧಿ ಆಗಿರೋದು ಇಂಥ ಘಟನೆಗಳು ಅಗದಂತೆ ತಡೆಯೋದಿಕ್ಕೆ ಎಂದು ಹೇಳುವ ಮೂಲಕ ವಿಷಯದ ಬಿಸಿಯನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದರು.
ಕೆರೂರಿನಂತಹ (Kerur ) ಘಟನೆ ನಡೆಯಬಾರದು. ಕುಳಗೇರಿಯಲ್ಲಿ(Kulageri) ಈ ಘಟನೆ ನಡೆಯಬಾರದಿತ್ತು. ಹಲ್ಲೆಗೆ ಒಳಗಾದವರೆಲ್ಲ ಪಾಪ ಬಡವರು ಇದ್ದಾರೆ. ನನ್ನ ಪ್ರಕಾರ ಪರಿಹಾರ ಧನ ಒಪ್ಪಿಕೊಳ್ತಾರೆ ಅಂದುಕೊಂಡಿದ್ದೇನೆ. ಅವರಿಗೂ ಕೊಟ್ಟಿದ್ದೀನಿ, ಗಲಭೆಯಲ್ಲ ಗಾಯಗೊಂಡ ಇನ್ನೊಬ್ಬ ವ್ಯಕ್ತಿ ಗೋಪಾಲ (Gopal) ಎನ್ನುವವನಿಗೂ ಕೊಟ್ಟಿದ್ದೇನೆ. ಎರಡೂ ಕಡೆಯವರ ಆಸ್ಪತ್ರೆಗೆ ಹೋಗಿ ಬಂದಿದ್ದೇನೆ ಎಂದು ಸಿದ್ಧರಾಮಯ್ಯ ತಿಳಿಸಿದರು.
ಇದನ್ನೂ ಓದಿ: ಮಾನವೀಯ ದೃಷ್ಟಿಯಿಂದ ಹಣ ನೀಡಿದ್ದೆ, ಆಕೆಯನ್ನು ಯಾರೋ ಎತ್ತಿಕಟ್ಟಿದ್ದಾರೆ!
ಗೋಪಾಲನಿಗೆ 50 ಸಾವಿರ ಪರಿಹಾರ: ಮುಸ್ಲಿಂ ಮಹಿಳೆ ರಾಜ್ಮಾ ಅವರ ಕುಟುಂಬವನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡುವ ಮುನ್ನ, ಗಾಯಾಳು ಗೋಪಾಲ ಅವರ ಆರೋಗ್ಯ ವಿಚಾರಿಸಲು, ಬಾಗಲಕೋಟೆ ಮಿರ್ಜಿ ಆಸ್ಪತ್ರೆಗೆ ಸಿದ್ಧರಾಮಯ್ಯ ಭೇಟಿ ನೀಡಿದರು. ಈ ವೇಳೆ ಐವತ್ತು ಸಾವಿರ ಪರಿಹಾರ ನೀಡುವ ವೇಳೆ ಗೋಪಾಲ ಕುಟುಂಬಸ್ಥರಿಂದಲೂ ಹಣ ಪಡೆಯಲು ನಿರಾಕರಣೆ ಮಾಡಿದರು. ಗೋಪಾಲನ ತಾಯಿ ಜಯಶ್ರೀ ದಾಸಮನಿ, ಸಹೋದರ ಹಣ ಪಡೆಯಲು ನಿರಾಕರಿಸಿದರು.
ಇದನ್ನೂ ಓದಿ: ನಾವು ಹುಟ್ಟುಹಬ್ಬ ಮಾಡ್ಕೋತಿದ್ರೆ ಬಿಜೆಪಿಗೆ ನಡುಕ: ಸಿದ್ದರಾಮಯ್ಯ
ಮಾನವೀಯತೆ ದೃಷ್ಟಿ ಮೇಲೆ ಕೊಡುತ್ತಿದ್ದೇನೆ.ಇಂತಹ ಘಟನೆ ಆಗಬಾರದು. ನೀವು ಆರಾಮವಾಗಿರಿ,ರೆಸ್ಟ್ ಮಾಡು ಎಂದು ಗೋಪಾಲ ಅವರ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು. ಸಿದ್ದರಾಮಯ್ಯ ಒತ್ತಾಯದ ಮೇರೆಗೆ ಗೋಪಾಲ ತಾಯಿ ಹಾಗೂ ಸಹೋದರ ಹಣ ಪಡೆದರು.