Asianet Suvarna News Asianet Suvarna News

ಹುಬ್ಬಳ್ಳಿಯಲ್ಲಿ ಕರ್ನಾಟಕದ ಮೊದಲ ದ್ವಾರಕಾಮಾಯಿ ದೇಗುಲ..!

‘ಶಿರಡಿ ಸಾಯಿಬಾಬಾ ಮಹಾಮಂಡಳ’ ಹುಬ್ಬಳ್ಳಿಯ ಶಿರಡಿ ನಗರದಲ್ಲಿ 50 ಲಕ್ಷ ವೆಚ್ಚದಲ್ಲಿ ಈ ದ್ವಾರಕಾಮಾಯಿ ಮಂದಿರವನ್ನು 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದು, ಸೆ.10ರಂದು ಲೋಕಾರ್ಪಣೆ ಆಗಲಿದೆ. ಸಾಯಿಬಾಬಾ ಅವರು ಶಿರಡಿ ಗ್ರಾಮದಲ್ಲಿ 60 ವರ್ಷಗಳ ಕಾಲ ನೆಲೆಸಿದ್ದ ಪವಿತ್ರ ಹಾಗೂ ಜಾಗೃತ ಸ್ಥಳವೇ ಈ ದ್ವಾರಕಾಮಾಯಿ ಆಗಿದೆ.

Karnatakas First Dwarkamai Temple in Hubballi grg
Author
First Published Sep 3, 2023, 11:06 AM IST | Last Updated Sep 3, 2023, 11:06 AM IST

ಅಜೀಜ ಅಹ್ಮದ ಬಳಗಾನೂರ

ಹುಬ್ಬಳ್ಳಿ(ಸೆ.03): ಮಹಾರಾಷ್ಟ್ರದ ಶಿರಡಿಯ ಸಾಯಿಬಾಬಾ ಅವರು ಬಾಳಿ, ಬದುಕಿದ ‘ದ್ವಾರಕಾಮಾಯಿ ಮಂದಿರ’ದ ಯಥಾವತ್‌ ಮಾದರಿ ಕಟ್ಟಡವನ್ನು ಇಲ್ಲಿನ ಶಿರಡಿ ನಗರದಲ್ಲಿ ನಿರ್ಮಿಸಲಾಗಿದ್ದು, ರಾಜ್ಯದಲ್ಲಿಯೇ ಮೊದಲ ದ್ವಾರಕಾಮಾಯಿ ಇದಾಗಿದೆ.

‘ಶಿರಡಿ ಸಾಯಿಬಾಬಾ ಮಹಾಮಂಡಳ’ ಇಲ್ಲಿನ ಶಿರಡಿ ನಗರದಲ್ಲಿ 50 ಲಕ್ಷ ವೆಚ್ಚದಲ್ಲಿ ಈ ದ್ವಾರಕಾಮಾಯಿ ಮಂದಿರವನ್ನು 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದು, ಸೆ.10ರಂದು ಲೋಕಾರ್ಪಣೆ ಆಗಲಿದೆ. ಸಾಯಿಬಾಬಾ ಅವರು ಶಿರಡಿ ಗ್ರಾಮದಲ್ಲಿ 60 ವರ್ಷಗಳ ಕಾಲ ನೆಲೆಸಿದ್ದ ಪವಿತ್ರ ಹಾಗೂ ಜಾಗೃತ ಸ್ಥಳವೇ ಈ ದ್ವಾರಕಾಮಾಯಿ ಆಗಿದೆ.

ಠೇವಣಿ ಹಣ ಹಿಂದಿರುಗಿಸದ ಸರಸ್ವತಿ ಕೋ ಆಪ್‍ರೇಟಿವ್ ಸೊಸೈಟಿಗೆ  ₹11 ಲಕ್ಷ 76 ಸಾವಿರ ದಂಡ ಮತ್ತು ಪರಿಹಾರ

ದ್ವಾರಕಾಮಾಯಿ ವಿಶೇಷ:

ಶಿರಡಿಯ ದ್ವಾರಕಾಮಾಯಿ ಕಟ್ಟಡದ ಅಳತೆ, ಗೋಡೆಯ ರಚನೆ, ಮಂಟಪ, ಚರಣ ಕಮಲ, ಧುನಿ (ಅಗ್ನಿ), ನಿಂಬಾರ (ಕಮಾನು) ರಚನೆ ಎಲ್ಲವೂ ಇಲ್ಲಿ ಯಥಾವತ್ತಾಗಿವೆ. 22 ಅಡಿ ಅಗಲ, 20 ಅಡಿ ಉದ್ದದ ಕಟ್ಟಡವಿದು. ಶಿರಡಿಯಲ್ಲಿ ಚಿನ್ನ ಲೇಪಿತ ಚರಣ ಕಮಲಗಳಿದ್ದರೆ ಇಲ್ಲಿ ಬೆಳ್ಳಿ ಲೇಪಿತ ಚರಣ ಕಮಲಗಳಿವೆ. ಭಕ್ತರಿಗೆ ಬಾಬಾ ಅವರು ಧುನಿಯಿಂದ ನೀಡುತ್ತಿದ್ದ ವಿಭೂತಿ, ಬೀಸುವ ಕಲ್ಲು ಹಾಗೂ ಗೋದಿಯ ಚೀಲದ ಮಾದರಿ ಇರಿಸಲಾಗಿದೆ. ಶಿರಡಿಯಲ್ಲಿ ಬಾಬಾ ಅವರು ಬಳಸುತ್ತಿದ್ದ ಚೀಲದಲ್ಲಿನ ಗೋದಿ ತರಿಸಿ ಇಲ್ಲಿನ ಗೋದಿ ಚೀಲದಲ್ಲಿ ಮಿಶ್ರಣ ಮಾಡಲಾಗಿದೆ. 26 ಕೆಜಿಯ ಬೆಳ್ಳಿಯ ಮಂಟಪ ನಿರ್ಮಾಣ ಮಾಡಲಾಗಿದೆ. ವಿಶೇಷವಾಗಿ ಶಿರಡಿಯ ಬೆಳ್ಳಿ ಮಂಟಪದಲ್ಲಿ ಇರಿಸಿದ ಬಾಬಾ ಅವರ ಚಿತ್ರ ಬಿಡಿಸಿದ ಪೂನಾದ ಸುನೀಲ್‌ ಸೇಜವಾಡಕರ್‌ ಅವರಿಂದಲೇ ಬಾಬಾ ಅವರ ಭಾವಚಿತ್ರ ಬಿಡಿಸಿ ಇಲ್ಲಿನ ದ್ವಾರಕಾಮಾಯಿಯ ಬೆಳ್ಳಿ ಮಂಟಪದಲ್ಲಿ ಇರಿಸಲಾಗುತ್ತಿದೆ.

ಕಾಂಗ್ರೆಸ್ ಸದಸ್ಯರ ವಿರೋಧದ ನಡುವೇ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ!

ಸೆ.10ರಂದು ದ್ವಾರಕಾಕಮಾಯಿ ಲೋಕಾರ್ಪಣೆ ಆಗಲಿದೆ. ಇದರ ಅಂಗವಾಗಿ ಸೆ.9ರಂದು ಮಧ್ಯಾಹ್ನ 2ಗಂಟೆಗೆ ಶಿರಡಿ ನಗರದ ಗಣಪತಿ ದೇವಸ್ಥಾನದಿಂದ ಸಾಯಿನಾಥರ ಪಾದುಕೆ, ಮತ್ತು ಕಫನಿ (ಬಾಬಾ ಅವರು ಧರಿಸಿದ ನಿಲುವಂಗಿ) ಇತ್ಯಾದಿಗಳನ್ನು ಭವ್ಯ ಮೆರವಣಿಗೆ ಮೂಲಕ ಮಂದಿರಕ್ಕೆ ತರಲಾಗುತ್ತಿದೆ ಎಂದು ಮಹಾಮಂಡಳದ ಕೋಶಾಧ್ಯಕ್ಷ ಜಗದೀಶ ಯಲಿಗಾರ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಕಳೆದ 40 ವರ್ಷಗಳ ಹಿಂದೆ ಮಹಾಮಂಡಳ ಸ್ಥಾಪನೆಯಾಗಿದೆ. ಭಕ್ತರ ಆಶಯದಂತೆ ಹುಬ್ಬಳ್ಳಿಯಲ್ಲೂ ಶಿರಡಿ ಮಾದರಿ ದ್ವಾರಕಾಮಾಯಿ ನಿರ್ಮಾಣ ಮಾಡಲಾಗಿದೆ. ಇದು ರಾಜ್ಯದ ಮೊದಲ ಮಂದಿರವಾಗಿದೆ ಎಂದು ಶ್ರೀ ಶಿರಡಿ ಸಾಯಿಬಾಬಾ ಮಹಾಮಂಡಳದ ಅಧ್ಯಕ್ಷ ವಿಶ್ವನಾಥ ತ್ರಿಮಲ್ಲೆ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios