Asianet Suvarna News Asianet Suvarna News

ಕರ್ನಾಟಕ ಇಬ್ಭಾಗವಾಗಬಾರದು: ಸಚಿವ ಮುರಗೇಶ್‌ ನಿರಾಣಿ

*  ನಾವೆಲ್ಲರೂ ಒಗ್ಗಟ್ಟಾಗಿ ಮುಂದುವರೆಯಬೇಕು 
*  ಉದ್ಯಮದಾರರ ಮನೆಬಾಗಿಲಿಗೆ ತೆರಳಿ ಅವರ ಸಮಸ್ಯೆ ಅರಿಯಲಿರುವ ಐಎಎಸ್‌ ಅಧಿಕಾರಿಗಳು
*  ರೀತಿ ಕಲಬುರಗಿಯಲ್ಲೂ ‘ಉದ್ಯಮಿಯಾಗು ಉದ್ಯೋಗ ನೀಡು’ ಹಾಗೂ ಕೈಗಾರಿಕಾ ಆದಾಲತ್‌
 

Karnataka Should Not Devide Says Minister Murugesh Nirani grg
Author
Bengaluru, First Published Nov 2, 2021, 2:49 PM IST

ಕಲಬುರಗಿ(ನ.02): ಕನ್ನಡ ರಾಜ್ಯೋತ್ಸವದ(Kannada Rajyotsava) ಸಂಭ್ರಮ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ನಿರಂತರ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ನೆಲ-ಜಲ ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಸದೃಢ, ಸಮೃದ್ಧ ಹಾಗೂ ಸ್ವಾವಲಂಭಿ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಯಲ್ಲಿ ಉತ್ತುಂಗಕ್ಕೆ ಕೊಂಡೊಯ್ಯೋಣ ಎಂದು ರಾಜ್ಯದ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಹಾಗೂ ಕಲಬುರಗಿ ಜಿಲ್ಲಾ ಕೋವಿಡ್‌-19(Covid19) ಮತ್ತು ನೆರೆ ಮೇಲುಸ್ತುವಾರಿ ಸಚಿವ ಮುರುಗೇಶ್‌ ನಿರಾಣಿ(Murugesh Nirani) ಕರೆ ನೀಡಿದ್ದಾರೆ. 

ನಗರೇಶ್ವರ ಪ್ರೌಢಶಾಲೆ ಆವರಣದಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ನಿಮಿತ್ತ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕರ್ನಾಟಕ ಏಕೀಕರಣಕ್ಕಾಗಿ(Karnataka Integration) ಹೋರಾಡಿದ ರಾಜ್ಯ ಮತ್ತು ಕಲಬುರಗಿ(Kalaburagi) ಜಿಲ್ಲೆಯ ಹೋರಾಟಗಾರರನ್ನು ಸ್ಮರಿಸಿದ ಸಚಿವರು, ‘ಕವಿರಾಜ ಮಾರ್ಗ’ ಕನ್ನಡಕ್ಕೆ(Kannada) ಮೊಟ್ಟಮೊದಲ ಕನ್ನಡದ ಗ್ರಂಥ ನೀಡಿದ್ದು ನೃಪತುಂಗನ ನಾಡು ಕಲಬುರಗಿ ಜಿಲ್ಲೆ, ಕನ್ನಡ ಇತಿಹಾಸದ ಆರಂಭವೇ ಇಲ್ಲಿಂದ ಎಂದರು.

ನಿರಂತರ ಭೂಕಂಪ: 'ಶೆಡ್‌ ಹಾಕಿ ಕೊಡಿ, ಅಲ್ಲೇ ಮಕ್ಕೊಂಡು ಜೀವಾ ಉಳಿಸ್ಕೋತೀವಿ'

ಕಲಬುರಗಿ ದಕ್ಷಿಣ ಶಾಸಕ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕೆಕೆಆರ್‌ಟಿಸಿ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕರಾದ ಬಸವರಾಜ ಮತ್ತಿಮಡು, ಡಾ. ಅವಿನಾಶ ಜಾಧವ, ಶಶೀಲ ನಮೋಶಿ, ಡಾ. ತಳವಾರ ಸಾಬಣ್ಣ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್‌ ಧಾರವಾಡಕರ್‌, ಕಲಬುರಗಿ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಲಿನ್‌ ಅತುಲ್‌, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸಾನ, ಜಿಪಂ ಸಿಇಓ ಡಾ. ದಿಲೀಷ ಶಶಿ, ಕಲಬುರಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌, ಪಾಲಿಕೆ ಆಯುಕ್ತ ಸ್ನೇಹಲ್‌ ಲೋಖಂಡೆ, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಕಲಬುರಗಿ ಉಪವಿಭಾಗಾಧಿಕಾರಿ ಮೋನಾ ರೂಟ್‌ ಇದ್ದರು. ಎಡಿಸಿ ಡಾ. ಶಂಕರಣ್ಣ ವಣಿಕ್ಯಾಳ ವಂದಿಸಿದರು.

ಕರ್ನಾಟಕ ಇಬ್ಭಾಗವಾಗಬಾರದು: ನಿರಾಣಿ

ಅಖಂಡ ಕರ್ನಾಟಕ(Karnataka) ಇಬ್ಭಾಗವಾಗಬಾರದು. ನಾವೆಲ್ಲರೂ ಒಗ್ಗಟ್ಟಾಗಿ ಮುಂದುವರೆಯಬೇಕು ಎಂದು ಎಂದು ಸಚಿವ ಮುರುಗೇಶ್‌ ನಿರಾಣಿ ಕರೆ ನೀಡಿದರು. ನಗರದ ನಗರೇಶ್ವರ ಪ್ರೌಢಶಾಲೆ ಆವರಣದಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಒಂದು ವೇಳೆ ಇಬ್ಭಾಗವಾದರೆ, ರಾಜ್ಯದ ಬೆಂಗಳೂರು(Bengaluru) ಭಾಗಗಳನ್ನು ಹೊರತುಪಡಿಸಿ ಉಳಿದ ಭಾಗಗಳು ಹಿಂದುಳಿಯಲಿವೆ. ಹಾಗಾಗಿ ಅಖಂಡ ಕರ್ನಾಟಕ ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಕಾಣಬೇಕು ಎಂದರು.

ಹಳೇ ಮೈಸೂರು(Mysuru) ಜಿಲ್ಲೆಗಳಿಗೆ ನೀಡುವ ಆದ್ಯತೆಯನ್ನು ಉತ್ತರ ಕರ್ನಾಟಕಕ್ಕೆ(North Karnataka) ನೀಡುತ್ತಿಲ್ಲ ಎಂಬ ಮಾತಿದೆ. ಮುಂಬರುವ ದಿನಗಳಲ್ಲಿ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ(Chief Minister) ಗಮನಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯೋತ್ಸವ ದಿನದಂದೇ ಬೆಳಗಾವಿಯಲ್ಲಿ ಕರಾಳ ದಿನ, ಕಲಬುರಗಿಯಲ್ಲಿ ಪ್ರತ್ಯೇಕ ರಾಜ್ಯದ ಕೂಗು

ಗಡಿಕೇಶ್ವರದಲ್ಲಿ ನ.11ಕ್ಕೆ ವಾಸ್ತವ್ಯ:

ಭೂಕಂಪನ(Earthquake) ಹಿನ್ನೆಲೆಯಲ್ಲಿ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ನ.11ರಂದು ಗ್ರಾಮವಾಸ್ತವ್ಯ ಮಾಡಲಾಗುತ್ತಿದ್ದು, ಈಗಾಗಲೇ ಘಟನೆ ಕುರಿತು ಜಿಲ್ಲಾಧಿಕಾರಿಗಳು ಸೇರಿದಂತೆ ಇತರರಿಂದ ಮಾಹಿತಿ ತರಿಸಿಕೊಳ್ಳಲಾಗಿದೆ ಎಂದರು.

ಬೆಂಗಳೂರಿನಲ್ಲಿ ಕಳೆದ ತಿಂಗಳು ‘ಉದ್ಯಮಿಯಾಗು ಉದ್ಯೋಗ ನೀಡು’ ಹಾಗೂ ಕೈಗಾರಿಕಾ ಆದಾಲತ್‌(Industrial Adalat) ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. 10 ಸಾವಿರ ಪದವೀಧರರು ಪಾಲ್ಗೊಂಡಿದ್ದು, ಈ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿದೆ. ಅದೇ ರೀತಿ ಕಲಬುರಗಿಯಲ್ಲೂ ನ.11ರಂದು ‘ಉದ್ಯಮಿಯಾಗು ಉದ್ಯೋಗ ನೀಡು’ ಹಾಗೂ ಕೈಗಾರಿಕಾ ಆದಾಲತ್‌ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ಸರ್ಕಾರಿ ಮತ್ತು ಅರೆ ಸರ್ಕಾರಿ ಉದ್ಯೋಗಗಳಿಗೆ(Jobs) ಅವಲಂಬನೆಯಾಗದೆ, ತಾವೇ ಉದ್ಯಮಗಳನ್ನು(Industry) ಸ್ಥಾಪಿಸಿ, ಇತರರಿಗೆ ಉದ್ಯೋಗ ನೀಡುವ ಯೋಜನೆ ಇದಾಗಿದೆ ಎಂದು ಅವರು ವಿವರಿಸಿದರು. ಕೈಗಾರಿಕಾ ಅದಾಲತ್‌ನಲ್ಲಿ ಸರ್ಕಾರವೇ(Government), ಅಂದರೆ ಐಎಎಸ್‌ ಅಧಿಕಾರಿಗಳೇ(IAS Officers) ಉದ್ಯಮದಾರರ ಮನೆಬಾಗಿಲಿಗೆ ತೆರಳಿ ಅವರ ಸಮಸ್ಯೆ ಅರಿಯಲಿದ್ದಾರೆ ಎಂದು ಅವರು ವಿವರಿಸಿದರು.

ಈಗಾಗಲೇ ಉದ್ಯಮದಾರರ ರಿಜಿಸ್ಪ್ರೇಷನ್‌ ನಡೆದಿದ್ದು, ವಲಯವಾರು ಸಮಸ್ಯೆಗಳ ಬಗ್ಗೆ 500ಕ್ಕೂ ಅರ್ಜಿಗಳು ಬಂದಿವೆ. ಈ ಪೈಕಿ 435 ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ. ಆರ್ಥಿಕತೆ ಮತ್ತು ಕಾಯ್ದೆಗೆ ತಿದ್ದುಪಡಿ ತರುವ ವಿಚಾರಗಳ ಹಿನ್ನೆಲೆಯಲ್ಲಿ ಕೇವಲ ಶೇಕಡ 20ರಷ್ಟು ಅರ್ಜಿಗಳು ಬಾಕಿ ಇವೆ ಎಂದು ಅವರು ಮಾಹಿತಿ ನೀಡಿದರು.

ಕಲಬುರಗಿ ವಿಜನ್‌-2050(Kalaburagi Vision-2050) ಕುರಿತಂತೆ 15 ಇಲಾಖೆಗಳಲ್ಲಿ ಏನೇನು ಇರಬೇಕು ಎಂಬ ಬಗ್ಗೆ ಜಿಲ್ಲಾಧಿಕಾರಿಗಳು(District Collector) ಈಗಾಗಲೇ ಕರಡು(Draft) ಸಿದ್ಧಪಡಿಸಿದ್ದಾರೆ. ಹಾಗೆಯೇ ವಿಜನ್‌ ಬಗ್ಗೆ ವಿದ್ಯಾರ್ಥಿಗಳು(Students), ಶಿಕ್ಷಕರು(Teachers) ಮುಂತಾದವರಿಂದ ಪ್ರಬಂಧ ಸ್ಪರ್ಧೆ ಕೂಡ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
 

Follow Us:
Download App:
  • android
  • ios