ದಾವಣಗೆರೆ: ಮಳೆ ಜೊತೆ ಜೌಗುಗಟ್ಟಿದ ಮೂರು ಗ್ರಾಮಗಳು!
ನೀರಾವರಿ ಜಮೀನಿನಿಂದ 8-10 ಅಡಿ ಕೆಳ ಭಾಗದಲ್ಲಿರುವ ದಾವಣಗೆರೆ ತಾಲೂಕಿನ ಬಲ್ಲೂರು, ಶಿರಗಾನಹಳ್ಳಿ, ಜಡಗನಹಳ್ಳಿ ಗ್ರಾಮಗಳÜಲ್ಲಿ ಬಸಿಯುತ್ತಿರುವ ನೀರಿನಿಂದ ಮನೆ, ಕಟ್ಟಡಗಳ ರಕ್ಷಿಸಿ, ಜನರ ಕಾಪಾಡದ ನೀರಾವರಿ ಇಲಾಖೆ ನಿರ್ಲಕ್ಷ್ಯದಿಂದಾಗಿ ಗ್ರಾಮಸ್ಥರು ಮಳೆಗಾಲದಲ್ಲಿ ಮತ್ತಷ್ಟುತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದಾವಣಗೆರೆ (ಜು.27) : ನೀರಾವರಿ ಜಮೀನಿನಿಂದ 8-10 ಅಡಿ ಕೆಳ ಭಾಗದಲ್ಲಿರುವ ದಾವಣಗೆರೆ ತಾಲೂಕಿನ ಬಲ್ಲೂರು, ಶಿರಗಾನಹಳ್ಳಿ, ಜಡಗನಹಳ್ಳಿ ಗ್ರಾಮಗಳÜಲ್ಲಿ ಬಸಿಯುತ್ತಿರುವ ನೀರಿನಿಂದ ಮನೆ, ಕಟ್ಟಡಗಳ ರಕ್ಷಿಸಿ, ಜನರ ಕಾಪಾಡದ ನೀರಾವರಿ ಇಲಾಖೆ ನಿರ್ಲಕ್ಷ್ಯದಿಂದಾಗಿ ಗ್ರಾಮಸ್ಥರು ಮಳೆಗಾಲದಲ್ಲಿ ಮತ್ತಷ್ಟುತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸತತ ಸುರಿಯುತ್ತಿರುವ ಮಳೆಯಿಂದಾಗಿ ಮೂರು ಗ್ರಾಮಗಳ ಜನರ ಬದುಕು ನರಕ ಸದೃಶವಾಗುತ್ತಿದೆ ಎಂದು ಬುಧವಾರ ಗ್ರಾಮಗಳಿಗೆ ಭೇಟಿ ನೀಡಿದ್ದ ಮಾಧ್ಯಮದವರ ಬಳಿ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ, ಗ್ರಾಮದ ಹಿರಿಯ ಮುಖಂಡ ಬಲ್ಲೂರು ರವಿಕುಮಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Weather forecast: ದಕ್ಷಿಣಕನ್ನಡದಲ್ಲಿ ಮಳೆ ಇಳಿಮುಖ, ಉಡುಪಿಯಲ್ಲಿ ಮುಂದುವರಿಕೆ
ನೀರಾವರಿ ಇಲಾಖೆ ಭದ್ರಾ ನಾಲಾ ಉಪ ವಿಭಾಗದ ತ್ಯಾವಣಿಗೆ ಎಇಇ ಮೂರೂ ಗ್ರಾಮಗಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲಿಸಿ, ವರದಿ ನೀಡಿದ್ದಾರೆ. ಭದ್ರಾ ಅಚ್ಚುಕಟ್ಟಿಗೆ ಒಳಪಡುವ ಶಿರಗಾನಹಳ್ಳಿ, ಜಡಗನಹಳ್ಳಿ, ಬಲ್ಲೂರು ಕಪ್ಪು ಮಣ್ಣಿನಿಂದ ಕೂಡಿದೆ. ಬಲ್ಲೂರು ಗ್ರಾಮದ ಸುತ್ತಲೂ ನೀರಾವರಿ ಕಾಲುವೆ ಹಾದು ಹೋಗಿದ್ದು, ಕಾಲುವೆಯಲ್ಲಿ ಜಂಗಲ್ ಮತ್ತು ಹೂಳು ತುಂಬಿದ್ದು, ನೀರು ಸರಾಗವಾಗಿ ಹರಿಯದೇ ನಿಂತಲ್ಲೇ ಬಸಿಯುತ್ತಿದೆ. ಇದರಿಂದ ನಾಲೆ ಕೆಳ ಭಾಗದಲ್ಲಿನ ಬಲ್ಲೂರು ಗ್ರಾಮದ ಮನೆಗಳು, ಕಟ್ಟಡಗಳು, ನೆಲವೆಲ್ಲ ತೇವಾಂಶದಿಂದ ಕೂಡಿದ್ದು, ಜನ, ಜಾನುವಾರು ವಾಸಿಸುವುದು ತೊಂದರೆಯಾಗುತ್ತಿದೆ. ನೀರು ಸರಾಗವಾಗಿ ಹರಿಯಲು ಅನುವು ಮಾಡಿದರೆ, ಗ್ರಾಮಗಳ ತಾತ್ಕಾಲಿಕವಾಗಿ ಬಸಿ ನೀರು ಪೀಡೆಯಿಂದ ತಪ್ಪಿಸಲು ಸಾಧ್ಯ ಎಂದು ಹೇಳಿದರು.
ವಸತಿಗೆ ಯೋಗ್ಯವಾಗಿಲ್ಲ:
ಕಾಲುವೆ ಸ್ವಚ್ಛಗೊಳಿಸಲು ಅವಶ್ಯವಿರುವ ಕಡೆ ಪೈಪ್ ಹಾಗೂ ಡೆಕ್ ಸ್ಲಾಬ್ ನಿರ್ಮಿಸಲು 50 ಲಕ್ಷ ರು. ಅನುದಾನದ ಅಗತ್ಯವಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೂ ಮನವಿ ಮಾಡಲಾಗಿದೆ. ಮೂರೂ ಗ್ರಾಮಗಳ ಮಣ್ಣಿನಲ್ಲಿ ತೇವಾಂಶ ಹೆಚ್ಚು ದಿನಗಳ ಕಾಲವಿರುವುದರಿಂದ ಜನ ವಸತಿಗೆ, ಜಾನುವಾರು ವಸತಿಗೆ ಯೋಗ್ಯವಾಗಿಲ್ಲ. ಗ್ರಾಮಗಳ ಸುತ್ತಲೂ ನಿರಂತರ ನೀರು ಹರಿಯುವಿಕೆ, ಭಾಗಶಃ ನಿಂತ ನೀರು ಇರುವುದರಿಂದ ಸಾಂಕ್ರಾಮಿಕ ರೋಗಗಳಿಗೂ ತುತ್ತಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಾಶ್ವತವಾಗಿ ಸ್ಥಳಾಂತರಿಸಿ:
ಬಲ್ಲೂರು ಗ್ರಾಮದಲ್ಲಿ ಸುಮಾರು 250 ಮನೆಗಳಿದ್ದು, 750ಕ್ಕೂ ಹೆಚ್ಚು ಜನರಿದ್ದಾರೆ. ಶಿರಗಾನಹಳ್ಳಿ, ಜಡಗನಹಳ್ಳಿಯಲ್ಲಿ ಸಾವಿರಾರು ಜನರಿದ್ದಾರೆ. ಮೂರೂ ಗ್ರಾಮಸ್ಥರು, ಜಾನುವಾರುಗಳ ಹಿತದೃಷ್ಟಿಯಿಂದ ಸ್ವಚ್ಛ ಹಾಗೂ ಆರೋಗ್ಯಕರ ಜೀವನ ನಡೆಸಲು ಮೂರೂ ಗ್ರಾಮಗಳ ಎತ್ತರದ ಪ್ರದೇಶಕ್ಕೆ ಶಾಶ್ವತವಾಗಿ ಸ್ಥಳಾಂತರಿಸಬೇಕು. ಈ ಬಗ್ಗೆ ನೀರಾವರಿ ಇಲಾಖೆಯ ಭದ್ರಾ ಕಾಲುವೆಯ ನಂ.5ರ ಕಾರ್ಯ ಪಾಲಕ ಅಭಿಯಂತರರೂ ಇಲಾಖೆ ಪ್ರಧಾನ ಕಚೇರಿಗೆ ವರದಿ ನೀಡಿದ್ದಾರೆ. ಈ ಎಲ್ಲಾ ಸಾಧಕ, ಬಾದಕಗಳನ್ನು ಗಮನಿಸಿ, ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ರಾಯಚೂರು: ಕೃಷ್ಣ ನದಿ ದಡದಲ್ಲಿ ಮೊಸಳೆಗಳ ಹಿಂಡು, ಆತಂಕದಲ್ಲಿ ಗ್ರಾಮಸ್ಥರು!
ಭದ್ರಾ ಕಾಲುವೆಯ ದಾವಣಗೆರೆ ಶಾಖಾ ಕಾಲುವೆಯ 2ನೇ ವಲಯದ ವಿತರಣಾ ಕಾಲುವೆ 32 ಕಿಮೀ ಉದ್ದವಿದ್ದು, ಸುಮಾರು 7,200 ಹೆಕ್ಟೇರ್ ಪ್ರದೇಶಕ್ಕೆ ಅಧಿಕೃತ ಅಚ್ಚುಕಟ್ಟು ಹೊಂದಿದೆ. ಇದೇ ಕಾಲುವೆಯು ಅರೇ ನೀರಾವರಿ ಬೆಳೆಗಳಿಗೆ ವಿನ್ಯಾಸವಾಗಿದ್ದು, ಕಾಲುವೆಯ ಆರಂಭದಲ್ಲಿರುವ ರೈತರು ಬೆಳೆ ಉಲ್ಲಂಘನೆ ಮಾಡಿ, ಹೆಚ್ಚು ನೀರುಣ್ಣುವ ಅನಧಿಕೃತ ಬೆಳೆ ಬೆಳೆಯುವುದರಿಂದ 2ನೇ ವಲಯದ ಕಾಲುವೆಯ ಕೊನೆಯ ಪ್ರದೇಶವು ಜೌಗುನಿಂದ ಕೂಡಿದೆ.
ಬಲ್ಲೂರು ರವಿಕುಮಾರ, ರಾಜ್ಯ ಕಾರ್ಯದರ್ಶಿ, ರೈತ ಸಂಘ