Asianet Suvarna News Asianet Suvarna News

ರಾಯಚೂರು: ಕೃಷ್ಣ ನದಿ​ ದಡದಲ್ಲಿ ಮೊಸಳೆಗಳ ಹಿಂಡು, ಆತಂಕದಲ್ಲಿ ಗ್ರಾಮಸ್ಥರು!

ಮಳೆ ಹಾಗೂ ಕೃಷ್ಣ ನದಿಯಲ್ಲಿ ನೆರೆ ಬಂದ ಹಿನ್ನೆಲೆಯಲ್ಲಿ ತಾಲೂ​ಕಿನ ಆತ್ಕೂರು ಗ್ರಾಮದ ಸಮೀ​ಪ​ದಲ್ಲಿ ಹರಿ​ಯು​ತ್ತಿ​ರುವ ಕೃಷ್ಣಾ ನದಿ  ದಡದ ಮೇಲೆ ಮೊಸ​ಳೆ​ಗಳ ಹಿಂಡು ಏಕ​ಕಾ​ಲ​ದಲ್ಲಿ ಪ್ರತ್ಯ​ಕ್ಷ​ಗೊಂಡಿ​ದ್ದು, ನದಿ ದಡದ ಗ್ರಾಮ​ಸ್ಥರು ಆತಂಕ​ಗೊಂಡಿ​ದ್ದಾರೆ.

Crocodiles in the Krishna river vlllagers are worried raichur rav
Author
First Published Jul 27, 2023, 5:38 AM IST

ರಾಯ​ಚೂ​ರು (ಜು.27) :  ಮಳೆ ಹಾಗೂ ಕೃಷ್ಣ ನದಿಯಲ್ಲಿ ನೆರೆ ಬಂದ ಹಿನ್ನೆಲೆಯಲ್ಲಿ ತಾಲೂ​ಕಿನ ಆತ್ಕೂರು ಗ್ರಾಮದ ಸಮೀ​ಪ​ದಲ್ಲಿ ಹರಿ​ಯು​ತ್ತಿ​ರುವ ಕೃಷ್ಣಾ ನದಿ(Krishna river) ದಡದ ಮೇಲೆ ಮೊಸ​ಳೆ​ಗಳ ಹಿಂಡು ಏಕ​ಕಾ​ಲ​ದಲ್ಲಿ ಪ್ರತ್ಯ​ಕ್ಷ​ಗೊಂಡಿ​ದ್ದು, ನದಿ ದಡದ ಗ್ರಾಮ​ಸ್ಥರು ಆತಂಕ​ಗೊಂಡಿ​ದ್ದಾರೆ. ನದಿ​ಯಲ್ಲಿ ನೀರಿನ ಮಟ್ಟಜಾಸ್ತಿ​ಯಾ​ಗು​ತ್ತಿರುವ ಹಿನ್ನೆಲೆಯಲ್ಲಿ ಬಂಡೆ​, ಪೊದೆ​ಗ​ಳಲ್ಲಿ ಮೊಸಳೆಗಳು ಅವಿ​ತು​ಕೊಂಡಿ​ದ್ದು, ಇದನ್ನು ಕಂಡು ಜನರು ಬೆಚ್ಚಿ​ ಬೀ​ಳು​ತ್ತಿ​ದ್ದಾರೆ.

ಕಳೆದ ಎರಡು ವಾರ​ಗ​ಳಿಂದ ಜಿಟಿ​ಜಿಟಿ ಮಳೆ​ಯಾಗುತ್ತಿದ್ದು, ನದಿ​ಯಲ್ಲಿ ನೀರಿನ ಮಟ್ಟಜಾಸ್ತಿ​ಯಾ​ಗು​ತ್ತಿದೆ. ತಾಲೂ​ಕಿನ ಯಾಪ​ಲ​ದಿನ್ನಿ ಹೋಬ​ಳಿಯ ಆತ್ಕೂರು ಸಮೀ​ಪ​ದಲ್ಲಿ ಕೃಷ್ಣಾ ನದಿ ತಟ​ದಲ್ಲಿ ಮೊಸ​ಳೆ​ಗಳ ಗುಂಪು ಬಿಡಾರ ಹೂಡಿದ್ದು, ಬಂಡೆ​, ಪೊದೆ​ಗ​ಳಲ್ಲಿ ಅವಿ​ತು​ಕೊಂಡಿ​ರುವ ಮೊಸ​ಳೆ​ಗಳ ಸಮೂಹವನ್ನು ಕಂಡ ಜನರು ಬೆಚ್ಚಿ​ ಬಿದ್ದಿದ್ದಾರೆ.

 

ಗಂಗಾವತಿ ಜನವಸತಿ ಪ್ರದೇಶದಲ್ಲಿ ಮೊಸಳೆ ಪ್ರತ್ಯಕ್ಷ; ಆತಂಕದಲ್ಲಿ ಜನರು!

ನದಿ​ತ​ಟ​ದ​ಲ್ಲಿ​ರುವ ಆತ್ಕೂರು, ಡಿ.ರಾಂಪುರ ಗ್ರಾಮ​ಗ​ಳಿಂದ ನಡು​ಗಡ್ಡೆ ಪ್ರದೇ​ಶ​ಗ​ಳಿಗೆ ಹಾಗೂ ದತ್ತಾ​ತ್ರೇಯ ಹಾಗೂ ನಾರ​ದ​ಗಡ್ಡೆ ಗುಡಿಗೆ ಜನರು ಮತ್ತು ಭಕ್ತ​ರು ನಿತ್ಯ ದೋಣಿ ಮೇಲೆ ಹೋಗು​ತ್ತಾರೆ. ಇದೀಗ ಆ ಸುತ್ತ​ಮು​ತ್ತ​ಲಿನ ಪ್ರದೇ​ಶ​ದ​ಲ್ಲಿಯೇ ಮೊಸ​ಳೆ​ಗಳ ಹಿಂಡು ಭಯ​ಭೀ​ತ​ಗೊಂಡಿ​ದ್ದಾರೆ. ಮೊಸ​ಳೆ​ಗಳ ಗುಂಪಿನ ವಿಡಿಯೋ​ವನ್ನು ಸ್ಥಳೀ​ಯರು ಚಿತ್ರಿ​ಕ​ರಿಸಿದ್ದು ಇದೀಗ ಆ ತುಣುಕು ವೈರ​ಲ್‌​ಗೊಂಡಿದೆ.

Follow Us:
Download App:
  • android
  • ios