ಬೆಂಗಳೂರು, (ಜ.9): ಸ್ಟೀಲ್​​ ಬ್ರಿಡ್ಜ್ ನಿರ್ಮಾಣ ಮಾಡಲು ಹೊರಟಿದ್ದ ರಾಜ್ಯ ಮೈತ್ರಿ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ.ಪರಿಸರ ಇಲಾಖೆಯ ಕ್ಲಿಯರೆನ್ಸ್​ ಇಲ್ಲದೇ ಸ್ಟೀಲ್​​ ಬ್ರಿಡ್ಜ್​ ಯೋಜನೆ​ ಕೈಗೆತ್ತಿಕೊಳ್ಳುವಂತಿಲ್ಲ ಎಂದು ಬಿಡಿಎಗೆ ಹೈಕೋರ್ಟ್​ ಆದೇಶ ನೀಡಿದೆ.

"

ಸ್ಟೀಲ್ ಬ್ರಿಡ್ಜ್ ವಿರುದ್ಧ ಮೊದಲು ದನಿ ಎತ್ತಿದ್ದು ಸಂಸದ ರಾಜೀವ್ ಚಂದ್ರಶೇಖರ್

ಪರಸರ ಇಲಾಖೆ‌ ಕ್ಲಿಯರೆನ್ಸ್ ಪಡೆಯದೇ ಪ್ರಾಜೆಕ್ಟ್​ ಕೈಗೆತ್ತಿಕೊಳ್ಳದಂತೆ ಸೂಚನೆ ನೀಡಿ, ವಿಚಾರಣೆಯನ್ನ ಜೂನ್​ಗೆ ಮುಂದೂಡಿದೆ. ಇದ್ರಿಂದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಸ್ಟೀಲ್​ ಬ್ರಿಡ್ಜ್​​ ನಿರ್ಮಾಣ ಸಂಬಂಧ ನಮ್ಮ ಬೆಂಗಳೂರು ಫೌಂಡೇಶನ್ ಅರ್ಜಿ ಸಲ್ಲಿಸಿತ್ತು.

ಸ್ಟೀಲ್ ಬ್ರಿಡ್ಜ್ ಕಾಮಗಾರಿ ತಡೆಗೆ ಸುಪ್ರೀಂ ನಕಾರ

ಈ ಅರ್ಜಿಯನ್ನು ಇಂದು ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರಿದ್ದ ವಿಭಾಗೀಯ ಪೀಠ, ನಮ್ಮ ಬೆಂಗಳೂರು ಫೌಂಡೇಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿತು.

ಪರಿಸರ ಇಲಾಖೆ ಕ್ಲೀಯರೆನ್ಸ್ ಕಡ್ಡಾಯಗೊಳಿಸಿ 2017ರಲ್ಲಿ ಎನ್​ಜಿಟಿ ಆದೇಶ ನೀಡಿದೆ. ಎನ್​ಜಿಟಿ ಆದೇಶಕ್ಕೆ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ನಮ್ಮ ಬೆಂಗಳೂರು ಫೌಂಡೇಶನ್ ಪರ ವಕೀಲ ವಿಜಯ್ ಶಂಕರ್ ವಾದ ಮಂಡಿಸಿದರು.

ಸ್ಟೀಲ್ ಬ್ರಿಡ್ಜ್ ಯೋಜನೆ :ಸ್ವತಂತ್ರ ತನಿಖೆಗೆ ರಾಜೀವ್ ಚಂದ್ರಶೇಖರ್ ಆಗ್ರಹ

ಸ್ಟೀಲ್​​ ಬ್ರಿಡ್ಜ್​ ನಿರ್ಮಾಣ ಮಾಡಲು ಪರಿಸರ ಇಲಾಖೆಯ ಕ್ಲಿಯರೆನ್ಸ್​ ಪಡೆದುಕೊಂಡಿದ್ದೀರಾ ಎಂದು ಎಜಿ ಉದಯ್ ಹೊಳ್ಳಾಗೆ ಕೋರ್ಟ್ ಪ್ರಶ್ನೆ ಮಾಡಿದೆ..

ಇನ್ನೂ ಯಾವುದೇ ಕ್ಲಿಯರೆನ್ಸ್​ಗೆ ಅರ್ಜಿ ಸಲ್ಲಿಸಿಲ್ಲ ಎಂದು ಬಿಡಿಎ ಪರ ವಕೀಲರು ಉತ್ತರ ನೀಡಿದರು. ನಂತರ ಕೋರ್ಟ್ ತಡೆ ನೀಡಿ ಆದೇಶ ಹೊರಡಿಸಿದೆ.