ಬೆಂಗಳೂರು (ಮಾ. 12):  ಶಿವಾನಂದ ಸರ್ಕಲ್ ಬಳಿ ನಿರ್ಮಾಣವಾಗುತ್ತಿರುವ ಸ್ಟೀಲ್ ಬ್ರಿಡ್ಜ್​ ನಿರ್ಮಾಣ  ಕಾಮಗಾರಿಗೆ ತಡೆ ನೀಡಲು ಸುಪ್ರೀಂಕೋರ್ಟ್ ನಕಾರ ವ್ಯಕ್ತಪಡಿಸಿದೆ. 

ಮೂಲ ಅರ್ಜಿ ಇತ್ಯರ್ಥಕ್ಕೆ ಹೈಕೋರ್ಟ್​ಗೆ ಸೂಚನೆ ನೀಡಿದೆ.  ಶೀಘ್ರವೇ ವಿಚಾರಣೆ ನಡೆಸುವಂತೆ ಹೈಕೋರ್ಟ್​ಗೆ ಸುಪ್ರೀಂಕೋರ್ಟ್  ಆದೇಶ ನೀಡಿದೆ.  ಬಿ.ಪಿ. ಮಹೇಶ್​ ಎಂಬುವರು ಕಾಮಗಾರಿ ತಡೆ ಕೋರಿ ಹೈಕೋರ್ಟ್’ನಲ್ಲಿ  ಅರ್ಜಿ ಸಲ್ಲಿಸಿದ್ದರು.  ಕಾಮಗಾರಿಗೆ ತಡೆ ನೀಡಲು ಹೈಕೋರ್ಟ್  ನಿರಾಕರಿಸಿತ್ತು.  ಇದನ್ನು ಪ್ರಶ್ನಿಸಿ ಮಹೇಶ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ​ಇಂದು ಸುಪ್ರೀಂಕೋರ್ಟ್ ಕೂಡಾ ನಕಾರ ವ್ಯಕ್ತಪಡಿಸಿದೆ.