ಯೆಜ್ಡಿ ಟ್ರೇಡ್ ಮಾರ್ಕ್‌ಗೆ ನಿರ್ಬಂಧ ಹೇರಿ ಹೈಕೋರ್ಟ್ ಆದೇಶ
ಐಡಿಯಲ್ ಜಾವಾ ಇಂಡಿಯಾ ಲಿಮಿಟೆಡ್‌ಗೆ ಸೇರಿದ ಯೆಜ್ಡಿ (Yezdi) ಟ್ರೇಡ್ ಮಾರ್ಕ್ ಅಥವಾ ಹೆಸರು ಒಳಗೊಂಡ ಇತರೆ ಯಾವುದೇ ಟ್ರೇಡ್ ಮಾರ್ಕನ್ನು ಬಳಸುವುದಕ್ಕೆ ಕ್ಲಾಸಿಕ್ ಲೆಂಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಸಹ ಸಂಸ್ಥಾಪಕ ಬೊಮನ್ ಇರಾನಿಗೆ ನಿರ್ಬಂಧ ಹೇರಿ ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರು (ಡಿ.31): ಐಡಿಯಲ್ ಜಾವಾ ಇಂಡಿಯಾ ಲಿಮಿಟೆಡ್‌ಗೆ ಸೇರಿದ ಯೆಜ್ಡಿ (Yezdi) ಟ್ರೇಡ್ ಮಾರ್ಕ್ ಅಥವಾ ಹೆಸರು ಒಳಗೊಂಡ ಇತರೆ ಯಾವುದೇ ಟ್ರೇಡ್ ಮಾರ್ಕನ್ನು ಬಳಸುವುದಕ್ಕೆ ಕ್ಲಾಸಿಕ್ ಲೆಂಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಸಹ ಸಂಸ್ಥಾಪಕ ಬೊಮನ್ ಇರಾನಿಗೆ ನಿರ್ಬಂಧ ಹೇರಿ ಹೈಕೋರ್ಟ್ ಆದೇಶಿಸಿದೆ. ಬೊಮನ್ ಇರಾನಿ ಅವರು ತಾವು ಐಡಿಯಲ್ ಜಾವಾ ಸಂಸ್ಥೆಯ ಸಹ ಸಂಸ್ಥಾಪಕ ಎಂದು ಆ ಸಂಸ್ಥೆಯ ಯೆಜ್ಡಿ ಟ್ರೇಡ್ ಮಾರ್ಕನ್ನು ಅಹಮದಾಬಾದ್, ದೆಹಲಿ ಮತ್ತು ಮುಂಬೈನಲ್ಲಿ ನೋಂದಣಿ ಮಾಡಿಕೊಂಡಿದ್ದರು. ಆದರೆ, ದಿವಾಳಿಯಾಗಿರುವ ಐಡಿಯಲ್ ಜಾವಾ ಸಂಸ್ಥೆಯು ಇನ್ನೂ ಬರಖಾಸ್ತು (ಲಿಕ್ವಿಡೇಶನ್) ಪ್ರಕ್ರಿಯೆ ಬಾಕಿಯಿದೆ.
ಈ ಹಂತದಲ್ಲೇ ಅವರು ಟ್ರೇಡ್ ಮಾರ್ಕ್ ನೋಂದಣಿ ಮಾಡಿಕೊಂಡಿರುವುದು ಸರಿಯಲ್ಲ ಎಂದು ಐಡಿಯಲ್ ಜಾವಾದ ಬರಖಾಸ್ತುದಾರ (ಲಿಕ್ವಿಡೇಟರ್) ಅವರು, ಇರಾನಿ ಮೂರು ನಗರಗಳಲ್ಲಿ ನೋಂದಾಯಿಸಿದ್ದ ಟ್ರೇಡ್‌ಮಾರ್ಕ್ ನೋಂದಣಿ ಪ್ರಮಾಣ ಪತ್ರವನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರ ಪೀಠ, ಐಡಿಯಲ್ ಜಾವಾ (ಇಂಡಿಯಾ) ಲಿಮಿಟೆಡ್ ಯೆಜ್ಡಿ ಬ್ರಾಂಡ್ (ಪದ ಹಾಗೂ ಸಾಧನ) ಮತ್ತು ಟ್ರೇಡ್ ಮಾರ್ಕ್ನ ಮಾಲಿಕತ್ವ ಹೊಂದಿದೆ.
ಅಪ್ರಾಪ್ತರ ಪಾಸ್‌ಪೋರ್ಟ್ ಗೊಂದಲ ಪರಿಹರಿಸಿ: ಹೈಕೋರ್ಟ್
ಈ ಕಂಪನಿಗೆ ಸೇರಿದ ಯೆಜ್ಡಿ ಹೆಸರಿನ ಟ್ರೇಡ್ ಮಾರ್ಕ್ಗಳನ್ನು ಬೊಮನ್ ಇರಾನಿ ಅಥವಾ ಅವರ ಪರವಾಗಿರುವ ಇತರೆ ಯಾವುದೇ ವ್ಯಕ್ತಿಯು ಬಳಕೆ ಮಾಡಬಾರದು ಎಂದು ಆದೇಶಿಸಿದೆ. ಅಲ್ಲದೆ, ಐಡಿಯಲ್ ಜಾವಾ (ಇಂಡಿಯಾ) ಲಿಮಿಟೆಡ್‌ನ ಯೆಜ್ಡಿ ಬ್ರಾಂಡ್ (ಪದ ಹಾಗೂ ಸಾಧನ) ಮತ್ತು ಟ್ರೇಡ್ ಮಾರ್ಕನ್ನು ದೆಹಲಿ, ಮುಂಬೈ ಮತ್ತು ಅಹಮದಬಾದ್‌ನಲ್ಲಿ ಬೊಮನ್ ಇರಾನಿ ಅವರ ಹೆಸರಿನಲ್ಲಿ ನೋಂದಣಿ ಮಾಡಲು ನೋಂದಣಿ ರಿಜಿಸ್ಟ್ರಾರ್ ವಿತರಿಸಿದ ನೋಂದಣಿ ಪ್ರಮಾಣ ಪತ್ರ ಕಾನೂನು ಬಾಹಿರ ಎಂದು ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ಇರಾನಿ, ಕ್ಲಾಸಿಕ್‌ಗೆ 10 ಲಕ್ಷ ದಂಡ: ಬೊಮನ್ ಇರಾನಿ ಹೆಸರಿನಲ್ಲಿ ನೋಂದಣಿಯಾದ ಯೆಜ್ಡಿ ಹೆಸರಿನ ಎಲ್ಲಾ ನೋಂದಣಿಗಳನ್ನು ಟ್ರೇಡ್ ಮಾರ್ಕ್ ರಿಜಿಸ್ಟ್ರಾರ್ ಅವರು ರದ್ದುಪಡಿಸಬೇಕು. ಆ ಎಲ್ಲಾ ನೋಂದಣಿಗಳನ್ನು ಐಡಿಯಲ್ ಕಂಪನಿಗೆ ಕೂಡಲೇ ವರ್ಗಾಯಿಸಬೇಕು. ಇನ್ನು ಬೊಮನ್ ಇರಾನಿ ಅಥವಾ ಕ್ಲಾಸಿಕಲ್ ಲೆಜೆಂಡ್‌್ಸ ಪ್ರೈ.ಲಿ ಅಥವಾ ಇತರೆ ಯಾವುದೇ ವ್ಯಕ್ತಿಯ ಹೆಸರಿನಲ್ಲಿ ಯೆಜ್ಡಿ ಟ್ರೇಡ್ ಮಾರ್ಕ್ ನೋಂದಣಿಗೆ ಅರ್ಜಿ ಸಲ್ಲಿಕೆಯಾಗಿದ್ದರೆ, ಅವುಗಳನ್ನು ಅಹಮದಾಬಾದ್, ಮುಂಬೈ ಮತ್ತು ನವ ದೆಹಲಿಯ ಟ್ರೇಡ್ ಮಾರ್ಕ್ ರಿಜಿಸ್ಟ್ರಾರ್ ಅವರು ಕೂಡಲೇ ಮುಕ್ತಾಯಗೊಳಿಸಬೇಕು. ಯೆಜ್ಡಿ ಟ್ರೇಡ್ ಮಾರ್ಕ್ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಬೊಮನ್ ಇರಾನಿ ಮತ್ತು ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯು ತಲಾ ಹತ್ತು ಲಕ್ಷ ಹಣವನ್ನು ಐಡಿಯಲ್ ಕಂಪನಿಯ ಬರಖಾಸ್ತು್ತದಾರರಿಗೆ ದಂಡ ಪಾವತಿಸಬೇಕು ಎಂದು ಆದೇಶಲ್ಲಿ ತಿಳಿಸಿದೆ.
ದುಬೈ ಮಹಿಳೆ ಮೇಲಿನ ಕೇಸ್ ರದ್ದತಿಗೆ ಒಪ್ಪದ ಹೈಕೋರ್ಟ್
1996ರಲ್ಲಿ ದಿವಾಳಿ: ಐಡಿಯಲ್ ಜಾವಾ (ಇಂಡಿಯಾ) ಲಿಮಿಟೆಡ್ ಕಂಪನಿಯು ಯೆಜ್ಡಿ ಬ್ರಾಂಡ್ ಮೋಟಾರು ಸೈಕಲನ್ನು ಉತ್ಪಾದಿಸಿ ಮಾರಾಟ ಮಾಡುತ್ತಿತ್ತು. ಕಂಪನಿಯು ದಿವಾಳಿ ಎದ್ದ ಕಾರಣ ಅದನ್ನು ಬರಖಸ್ತುಗೊಳಿಸಲು 1996ರಲ್ಲಿ ಆದೇಶಿಸಲಾಗಿತ್ತು. ಸದ್ಯ ಇಡೀ ಕಂಪನಿಯ ಹಕ್ಕು ಮತ್ತು ಆಸ್ತಿಯು ಬರಖಸ್ತುದಾರ ಬಳಿಯಿದೆ. ಈ ಮಧ್ಯೆ ಯೆಜ್ಡಿ ಬ್ರಾಂಡ್, ಟ್ರೇಡ್ ಮಾರ್ಕನ್ನು ನೋಂದಣಿ ಮಾಡಿಕೊಳ್ಳಲು ಬೊಮ್ಮನ್ ಇರಾನಿ ಅವರಿಗೆ ನೋಂದಣಿ ಪ್ರಮಾಣ ಪತ್ರವನ್ನು ಟ್ರೇಡ್ ಮಾರ್ಕ್ ರಿಜಿಸ್ಟ್ರಾರ್ ಕಂಪನಿಗೆ ವಿತರಿಸಿದ್ದರು. ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.