Asianet Suvarna News Asianet Suvarna News

ರಾಮನಗರದಲ್ಲಿ ಕಮರಿದ ಕನಸು : ಕೈ - ದಳ​ದಲ್ಲಿ ಭಾರಿ ಬೇಸರದ ಛಾಯೆ

ರಾಮನಗರ ಜಿಲ್ಲೆಯಲ್ಲಿ ಕನಸೊಂದು ಕಮರಿದಂತಾಗಿದೆ. ಇದೇ ವೇಳೆ ಬಿಜೆಪಿ ನಿರ್ಧಾರ ಒಂದಕ್ಕೆ ಕಾಂಗ್ರೆಸ್ - ಜೆಡಿಎಸ್ ನಾಯಕರು ಅಸಮಾಧಾನಗೊಂಡಿದ್ದಾರೆನ್ನಲಾಗಿದೆ.

Karnataka Govt Plan To Rename Ramanagara  As Nava Bengaluru
Author
Bengaluru, First Published Jan 5, 2020, 10:53 AM IST

ವರದಿಎಂ.ಅಫ್ರೋಜ್ ಖಾನ್‌

ರಾಮ​ನ​ಗರ [ಜ.05]: ರಾಮ​ನ​ಗರ ಜಿಲ್ಲೆಗೆ ನವ ಬೆಂಗ​ಳೂರು ಹೆಸ​ರಿ​ಡುವ ಸಂಬಂಧ ಜಿಲ್ಲೆ​ಯನ್ನು ಪ್ರತಿ​ನಿ​ಧಿ​ಸು​ತ್ತಿರುವ ರಾಜ​ಕೀಯ ನಾಯ​ಕ​ರ ಸಲಹೆ ಸಹ​ಕಾರ ಕೇಳ​ದ ರಾಜ್ಯ​ ಸ​ರ್ಕಾ​ರದ ನಡೆಗೆ ಜೆಡಿ​ಎಸ್‌ ಮತ್ತು ಕಾಂಗ್ರೆಸ್‌ ಪಕ್ಷ​ಗ​ಳಲ್ಲಿ ಬೇಸರ ವ್ಯಕ್ತ​ವಾ​ಗಿದೆ.

ಬಿಜೆಪಿ ನೇತೃ​ತ್ವದ ರಾಜ್ಯ​ ಸ​ರ್ಕಾರ ಅಧಿ​ಕಾ​ರಕ್ಕೆ ಬಂದ ದಿನ​ದಿಂದಲೂ ರಾಮ​ನ​ಗ​ರ ಜಿಲ್ಲೆಯ ಅಭಿ​ವೃದ್ಧಿ ಹಾಗೂ ಆಡ​ಳಿ​ತದ ವಿಚಾ​ರ​ದಲ್ಲಿ ಏಕ​ಪ​ಕ್ಷೀಯ ನಿರ್ಧಾ​ರ​ಗ​ಳನ್ನೇ ಕೈಗೊ​ಳ್ಳು​ತ್ತಿದೆ. ಇದೀಗ ಯಾರೊಂದಿಗೂ ಚರ್ಚೆ ನಡೆಸದೆ, ಯಾರ ಅಭಿ​​ಪ್ರಾ​ಯ​ವನ್ನು ಸಂಗ್ರ​ಹಿ​ಸ​ದೆಯೇ ರಾಮ​ನ​ಗರ ಜಿಲ್ಲೆಗೆ ನವ ಬೆಂಗ​ಳೂರು ಹೆಸ​ರನ್ನಿಡುವ ಚಿಂತನೆ ನಡೆ​ಸು​ತ್ತಿರುವುದು ಉಭಯ ಪಕ್ಷ​ಗಳ ಟೀಕೆಗೆ ಗುರಿ​ಯಾ​ಗಿದೆ.

ರಾಮನಗರ ಘಟಾನುಘಟಿ ನಾಯಕರಿಗೆ ರಾಜಕೀಯ ಆಶ್ರಯ ನೀಡಿದ ಜಿಲ್ಲೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ರಾಜ​ಕೀ​ಯ​ವಾಗಿ ಮರು ಹುಟ್ಟು ಸಿಕ್ಕಿದ್ದು ಇಲ್ಲೇ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪಾಲಿಗೆ ರಾಮನಗರವೇ ರಾಜಕೀಯ ಕರ್ಮಭೂಮಿ. ರಾಮಕೃಷ್ಣ ಹೆಗಡೆ ಅವರಿಗೂ ಈ ಜಿಲ್ಲೆ ಆಶ್ರಯ ಕೊಟ್ಟಿತ್ತು.

ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ, ಎಚ್‌.ಡಿ. ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ ಅವರು ರಾಮನಗರದಿಂದಲೇ ಗೆದ್ದು ಮುಖ್ಯ​ಮಂತ್ರಿ ಗದ್ದುಗೆ ಏರಿದ್ದರು. ರಾಜ​ಕೀಯ, ಧಾರ್ಮಿಕ ಹಾಗೂ ಸಾಂಸ್ಕೃ​ತಿ​ಕ​ವಾಗಿ ರಾಮ​ನ​ಗರ ತನ್ನ​ದೇ ಛಾಪು ಮೂಡಿ​ಸಿ​ರು​ವು​ದ​ರಿಂದ ರಾಮ​ನ​ಗರ ಜಿಲ್ಲೆ ಹೆಸ​ರನ್ನೇ ಉಳಿ​ಸಿ​ಕೊ​ಳ್ಳ​ಬೇ​ಕೆಂಬ ಅಭಿ​ಪ್ರಾ​ಯವೂ ಒಂದೆ​ಡೆ ವ್ಯಕ್ತ​ವಾ​ಗು​ತ್ತಿ​ದೆ.
ಡಿಕೆಶಿ ನಾಡಲ್ಲಿ 25 ಎಕರೆಯಲ್ಲಿ ತಿರು​ಪತಿ ಮಾದ​ರಿ​ ದೇಗುಲ : ರಾಜ್ಯ ಸರ್ಕಾರದಿಂದ ಅಸ್ತು...

ಇದೀಗ ಶಾಸ​ಕ​ರಾದ ಎಚ್‌.ಡಿ.​ ಕು​ಮಾ​ರ​ಸ್ವಾಮಿ, ಡಿ.ಕೆ.​ ಶಿ​ವ​ಕು​ಮಾರ್‌, ಶಾಸ​ಕ​ರಾದ ಅನಿತಾ ಕುಮಾ​ರ​ಸ್ವಾಮಿ, ಎ. ಮಂಜು​ನಾಥ್‌, ವಿಧಾನ ಪರಿ​ಷತ್‌ ಸದ​ಸ್ಯರಾದ ಸಿ.ಎಂ.​ ಲಿಂಗಪ್ಪ, ಎಸ್‌. ರವಿ, ಅ. ದೇ​ವೇ​ಗೌ​ಡ ಹಾಗೂ ಸಂಸದ ಡಿ.ಕೆ.​ಸು​ರೇಶ್‌ ಅವರು ರಾಮ​ನ​ಗರ ಜಿಲ್ಲೆ​ಯನ್ನು ಪ್ರತಿ​ನಿ​ಧಿ​ಸು​ತ್ತಿ​ದ್ದಾರೆ.

ಅಲ್ಲದೆ, ಮಾಜಿ ಸಚಿವ ಪಿಜಿ​ಆರ್‌ ಸಿಂಧ್ಯಾ, ಮಾಜಿ ಶಾಸ​ಕ​ರಾದ ಎಚ್‌.ಸಿ.​ ಬಾ​ಲ​ಕೃಷ್ಣ, ಅಶ್ವತ್‌್ಥ , ಕೆ. ರಾಜು ಸೇರಿ​ದಂತೆ ಅನೇ​ಕ ನಾಯ​ಕರು ಜಿಲ್ಲೆ​ಯನ್ನು ಪ್ರತಿ​ನಿ​ಧಿ​ಸಿ​ದ್ದವರು. ಇವ​ರೊಂದಿಗೆ ಚರ್ಚೆ ನಡೆ​ಸು​ವು​ದಿ​ರಲಿ, ಬಿಜೆಪಿಯಲ್ಲಿ ಗುರು​ತಿ​ಸಿ​ಕೊಂಡಿ​ರುವ ಮಾಜಿ ಸಚಿವ ಸಿ.ಪಿ.​ ಯೋ​ಗೇ​ಶ್ವರ್‌ ಅವರ ಗಮ​ನಕ್ಕೂ ತರ​ದೆಯೇ ಬಿಜೆಪಿ ನಾಯ​ಕರ ನವ ಬೆಂಗ​ಳೂರು ಪ್ರಸ್ತಾ​ವನೆಗೆ ರಾಜ್ಯ​ಸ​ರ್ಕಾರ ಚಿಂತನೆ ನಡೆ​ಸಿ​ರುವುದು ಸಾಕ​ಷ್ಟುಚರ್ಚೆ​ಗೆ ಗ್ರಾಸ​ವಾ​ಗಿದೆ.

ಕಮ​ರಿದ ಅವಳಿ ನಗ​ರದ ಕನಸು:

ಕುಮಾ​ರ​ಸ್ವಾ​ಮಿ​ರ​ವರು ಮುಖ್ಯ​ಮಂತ್ರಿ​ಯಾ​ಗಿದ್ದ ಅವ​ಧಿ​ಯ​ಲ್ಲಿಯೇ ರಾಮ​ನ​ಗರ ಜಿಲ್ಲೆ ಅಸ್ತಿ​ತ್ವಕ್ಕೆ ಬಂದಿತು. ಇದಾದ 12 ವರ್ಷ​ಗಳ ನಂತರ ಕುಮಾ​ರ​ಸ್ವಾಮಿ​ ರಾಮನಗರ ಮತ್ತು ಚನ್ನಪಟ್ಟಣವನ್ನು ಅವಳಿ ನಗರಗಳಂತೆ ಅಭಿವೃದ್ಧಿಪಡಿಸುವ ಕನಸು ಕಂಡಿದ್ದರು. ಬೃಹತ್‌ ಕೈಗಾರಿಕಾ ವಲಯ ಸ್ಥಾಪಿಸಿ ಎರಡು ನಗರಗಳ ಯುವಜನರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶವಿರುವುದಾಗಿ ಹೇಳಿಕೊಂಡಿದ್ದರು.

ರಾಮನಗರ ಜಿಲ್ಲೆಗೆ ಹೊಸ ಹೆಸರು!?...

ರಾಮನಗರ ಮತ್ತು ಚನ್ನಪಟ್ಟಣ ನಗರಗಳನ್ನು ಅವಳಿ ನಗರಗಳನ್ನಾಗಿ ಅಭಿವೃದ್ಧಿಪಡಿಸುವುದಕ್ಕೆ ಎರಡೂ ನಗರಗಳ ಜನತೆ ಕೂಡ ಸ್ವಾಗತಿಸಿ​ದ್ದರು. ಅವಳಿ ನಗರ ಸಾಕಾರವಾದರೆ ವ್ಯಾಪಾರ, ವಹಿವಾಟು ವೃದ್ಧಿಸಿ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕಾರಣವಾಗಲಿದೆ ಎಂಬುದು ಸಾರ್ವಜನಿಕರ ಹಂಬಲವಾಗಿತ್ತು. ಆದರೆ, ಅವಳಿ ನಗ​ರದ ಕನಸು ಕಮರಿ ಹೋಯಿತು.

ಇನ್ನು ಮಾಜಿ ಸಚಿವ ಡಿ.ಕೆ.​ ಶಿ​ವ​ಕು​ಮಾರ್‌ ಅವ​ರಿಗೆ ಬೆಂಗ​ಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿ​ಯ​ಲ್ಲಿದ್ದ ನಾಲ್ಕು ತಾಲೂ​ಕು​ಗ​ಳನ್ನು ಒಟ್ಟು​ಗೂ​ಡಿಸಿ ರಾಮ​ನ​ಗರ ಜಿಲ್ಲೆಯಾಗಿ ರಚನೆ ಮಾಡಿ​ದ್ದಕ್ಕೆ ಮೊದ​ಲಿ​ನಿಂದಲು ಬೇಸ​ರ​ವಿತ್ತು. ಕುಮಾ​ರ​ಸ್ವಾಮಿ ಅವ​ರೊಂದಿಗಿನ ಮಿತ್ರ​ತ್ವಕ್ಕೆ ಮುನ್ನ ಶಿವ​ಕು​ಮಾರ್‌ ಯಾವುದೇ ಸಭೆ, ಸಮಾ​ರಂಭ​ಗ​ಳಲ್ಲಿ ರಾಮ​ನ​ಗರ ಜಿಲ್ಲೆ ಎಂದು ಹೇಳದೆ ಬೆಂಗ​ಳೂರು ದಕ್ಷಿಣ ಎಂತಲೇ ಸಂಬೋ​ಧಿ​ಸು​ತ್ತಿ​ದ್ದ​ರು.

ಅಲ್ಲದೆ, ರಾಮ​ನ​ಗರ ಜಿಲ್ಲೆ ಬದ​ಲಿಗೆ ಬೆಂಗ​ಳೂರು ದಕ್ಷಿಣ ಜಿಲ್ಲೆಯೆಂದು ನಾಮ​ಕರಣ ಮಾಡ​ಬೇ​ಕಿತ್ತು ಎಂದಿ​ದ್ದರು.

ಆದ​ರೀಗ ಬಿಜೆಪಿ ನಾಯ​ಕರು ಜಿಲ್ಲೆ​ಯನ್ನು ಪ್ರತಿ​ನಿ​ಧಿ​ಸು​ತ್ತಿ​ರುವ ಜೆಡಿ​ಎಸ್‌ ಮತ್ತು ಕಾಂಗ್ರೆಸ್‌ ಶಾಸ​ಕರು, ಸಂಸ​ದರನ್ನು ವಿಶ್ವಾ​ಸಕ್ಕೆ ತೆಗೆ​ದು​ಕೊ​ಳ್ಳದೆ ದೇಶ ವಿದೇ​ಶ​ಗಳ ಬಂಡ​ವಾ​ಳ​ದಾ​ರ​ರನ್ನು ಆಕ​ರ್ಷಿ​ಸಲು ರಾಜ್ಯ​ಸ​ರ್ಕಾ​ರಕ್ಕೆ ರಾಮ​ನ​ಗರ ಜಿಲ್ಲೆಗೆ ನವ ಬೆಂಗ​ಳೂರು ಹೆಸರು ನಾಮ​ಕ​ರ​ಣಕ್ಕೆ ಬೇಡಿ​ಕೆ​ಯಿ​ಟ್ಟಿ​ದ್ದಾರೆ. ಇದು ಜೆಡಿ​ಎಸ್‌ ಮತ್ತು ಕಾಂಗ್ರೆ​ಸ್‌ ನಾಯ​ಕರ ಟೀಕೆಗೆ ಗುರಿ​ಯಾ​ಗಿದೆ.

ಇನ್ನು ರಾಜ​ಕೀ​ಯೇ​ತರ ಪ್ರಮುಖ ಗಣ್ಯ ವ್ಯಕ್ತಿ​ಗಳು ಹಾಗೂ ಪ್ರಮುಖ ಸಂಘ​ಟ​ನೆ​ಗಳ ನಾಯ​ಕರು, ರಾಮ​ನ​ಗರ ಜಿಲ್ಲೆ ಎಂಬ ಹೆಸರನ್ನೇ ಉಳಿ​ಸಿ​ಕೊ​ಳ್ಳ​ಬೇಕು ಅಥವಾ ಬೆಂಗ​ಳೂರು ದಕ್ಷಿಣ ಜಿಲ್ಲೆಯೆಂಬ ಹೆಸ​ರನ್ನು ಮರು ನಾಮ​ಕ​ರ​ಣಕ್ಕೆ ಪ್ರಯ​ತ್ನಿ​ಸ​ಬೇಕು ಎನ್ನುತ್ತಿ​ದ್ದಾ​ರೆ.

ನಾನು ಊರಿ​ನಲ್ಲಿ ಇರ​ಲಿಲ್ಲ. ರಾಮ​ನ​ಗರ ಜಿಲ್ಲೆಗೆ ನವ ಬೆಂಗ​ಳೂರು ಹೆಸರು ಮರು ನಾಮ​ಕರಣ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆ​ಸಿ​ರು​ವುದು ಗಮ​ನಕ್ಕೆ ಬಂದಿಲ್ಲ. ಯಾರು ಪ್ರಸ್ತಾ​ವನೆ ಸಲ್ಲಿ​ಸಿ​ದರು, ರಾಜ್ಯ ಸರ್ಕಾರದ ನಡೆಯ ಬಗ್ಗೆ ನನ​ಗೇನು ಗೊತ್ತಿಲ್ಲ. ಮಾಹಿತಿ ಪಡೆ​ದು​ಕೊಂಡು ಪ್ರತಿ​ಕ್ರಿಯೆ ನೀಡು​ತ್ತೇನೆ.

- ಅನಿತಾ ಕುಮಾ​ರ​ಸ್ವಾಮಿ, ಶಾಸ​ಕರು, ರಾಮ​ನ​ಗರ ಕ್ಷೇತ್ರ.

ರಾಮನಗರ ಜಿಲ್ಲೆಯನ್ನು ನವಬೆಂಗಳೂರು ಎಂದು ಹೆಸರು ಬದಲಾಯಿಸುವ ವಿಚಾರದ ಬಗ್ಗೆ ನನಗೆ ಸಂಪೂರ್ಣ ಮಾಹಿತಿಯಿಲ್ಲ. ಕಾನೂನು ಬದ್ಧವಾಗಿ ರಾಮನಗರ ಜಿಲ್ಲೆಯಾಗಿದೆ. ಜನರಿಗೆ ಅನುಕೂಲ ಆಗು​ವು​ದಾ​ದರೆ ನಾನು ಕೂಡ ಸ್ವಾಗತ ಮಾಡುತ್ತೇನೆ.

- ಸಿ.ಪಿ.​ಯೋ​ಗೇ​ಶ್ವರ್‌, ಮಾಜಿ ಸಚಿ​ವರು.

ರಾಮ​ನ​ಗರ ಜಿಲ್ಲೆ ಅಸ್ತಿ​ತ್ವಕ್ಕೆ ತರುವ ಸಂದ​ರ್ಭ​ದ​ಲ್ಲಿಯೇ ಬೆಂಗ​ಳೂರು ದಕ್ಷಿಣ ಜಿಲ್ಲೆ ಹೆಸ​ರಿ​ಡು​ವಂತೆ ಸಲಹೆ ನೀಡಿದ್ದೆ. ಬೆಂಗ​ಳೂರು ಕೆಂಪೇ​ಗೌ​ಡರು ಕಟ್ಟಿದ ನಾಡು. ಬೆಂಗ​ಳೂರು ಪದ​ವನ್ನು ಸೇರಿಸಿ ಜಿಲ್ಲೆಗೆ ಹೆಸ​ರಿ​ಟ್ಟಿದ್ದರೆ ಅಂತಾರಾ​ಷ್ಟ್ರೀಯ ಮಟ್ಟ​ದಲ್ಲಿ ಜಿಲ್ಲೆಯ ಹೆಸರು ಸ್ಥಾನ ಪಡೆ​ಯು​ತ್ತಿತ್ತು. ನವ ಬೆಂಗ​ಳೂರು ಎಂದು ಮರು ನಾಮ​ಕ​ರಣ ಮಾಡು​ವುದು ಸ್ವಾಗ​ತಾರ್ಹ ಸಂಗ​ತಿ.

- ಎಚ್‌.ಸಿ.​ ಬಾ​ಲ​ಕೃಷ್ಣ, ಮಾಜಿ ಶಾಸ​ಕ​ರು.

Follow Us:
Download App:
  • android
  • ios