ಹುಬ್ಬಳ್ಳಿ(ಸೆ. 27)   ಶಿಕ್ಷಕರ ಕಡ್ಡಾಯ ವರ್ಗಾವಣೆ ಆದೇಶದಿಂದ ಆಘಾತಕ್ಕೆ ಒಳಗಾಗಿ ಕೋಮಾ ಸೇರಿದ್ದ ಶಿಕ್ಷಕರು ಸಾವನ್ನಪ್ಪಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಶಿಕ್ಷಕ ಸುಭಾಷ್ ತರ್ಲಘಟ್ಟ ಮೃತಪಟ್ಟಿದ್ದಾರೆ.  ಹುಬ್ಬಳ್ಳಿಯ ಆನಂದನಗರದ ಸರ್ಕಾರಿ ಹೈಸ್ಕೂಲ್ ಶಿಕ್ಷಕ‌ರಾಗಿದ್ದ ಸುಭಾಷ್ ತರ್ಲಘಟ್ಟ ಅವರಿಗೆ, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ರಾಮಗಿರಿ ಶಾಲೆಗೆ ವರ್ಗಾವಣೆ ಮಾಡಲಾಗಿತ್ತು.

ಸಾವಿನಲ್ಲೂ ಒಂದಾದ್ರು ದಶಕಗಳ ಕಾಲ ವಿದ್ಯೆ ಧಾರೆ ಎರೆದ ಶಿಕ್ಷಕ ದಂಪತಿ!

ಕಡ್ಡಾಯ ವರ್ಗಾವಣೆ ನಿಯಮದಡಿ ಸೆಪ್ಟೆಂಬರ್ 11ರಂದು ವರ್ಗಾವಣೆ ಮಾಡಲಾಗಿತ್ತು. ಅಂದಿನಿಂದ ಮಾನಸಿಕ ಶಾಕ್‌ಗೆ ಒಳಗಾಗಿದ್ದ ಸುಭಾಷ್ ತರ್ಲಘಟ್ಟ ತೀವ್ರ ನೊಂದಿದ್ದರು. ಮನೆಯಲ್ಲಿ ಮೂರ್ಛೆ ಹೋಗಿದ್ದರು.

ಬ್ರೇನ್ ಹ್ಯಾಮರೇಜ್‌ ಆದ ಪರಿಣಾಮ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಶಿಕ್ಷಕ ಸುಭಾಷ್ ತರ್ಲಘಟ್ಟ ಇಂದು ಕೊನೆಯುಸಿರೆಳೆದಿದ್ದಾರೆ. ಶಿಕ್ಷಕರ ಕಡ್ಡಾಯ ವರ್ಗಾವಣೆಯಿಂದ ಸುಭಾಷ್‌ ಸಾವನ್ನಪ್ಪಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕಡ್ಡಾಯ ವರ್ಗಾವಣೆ ಆದೇಶ ಎಫೆಕ್ಟ್ : ಆಘಾತಕ್ಕೊಳಗಾದ ಶಿಕ್ಷಕ ಕೋಮಾ ಸೇರಿದ

ಖಾಸಗಿ ಆಸ್ಪತ್ರೆ ಮುಂದೆ ಶಿಕ್ಷಕರು, ಸಂಬಂಧಿಕರು ಹಾಗೂ ಸುಭಾಷ್ ಪತ್ನಿ ಜಮಾಯಿಸಿ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಸರ್ಕಾರ ಸುಭಾಷ್ ಅವರನ್ನು ವರ್ಗಾವಣೆ ಮಾಡಿದ್ದೇ ಅವರ ಈ ಸ್ಥಿತಿಗೆ ಕಾರಣ ಎಂದು ಆರೋಪಿಸಿದರು.

ಇದನ್ನು ಓದಿ:  ಸೆ.27ರ ಟಾಪ್ 10 ನ್ಯೂಸ್; ಶುಕ್ರವಾರ ಬಿಜೆಪಿ ಮಂದಹಾಸ, HDKಗೆ ಸಂಕಷ್ಟ!