ಬೆಂಗಳೂರು(ಜು. 02)  ಕೊರೋನಾ ಸಂದರ್ಭದಲ್ಲಿ ಗುತ್ತಿಗೆ ವೈದ್ಯರ ರಾಜೀನಾಮೆಗೆ ಅಂಜಿದ ರಾಜ್ಯ ಸರ್ಕಾರ  ಗುತ್ತಿಗೆ ವೈದ್ಯರ ವೇತನ ಹೆಚ್ಚಳ ಮಾಡಿದೆ. 

ಕೊರೋನಾ ಹೋರಾಟದ ಸಂದರ್ಭದದಲ್ಲಿಯೂ  ಗ್ರಾಮೀಣ ಭಾಗ, ತಾಲ್ಲೂಕು, ಜಿಲ್ಲಾ ಕೇಂದ್ರ, ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ವೈದ್ಯರ ವೇತನ ಹೆಚ್ಚಳ ಮಾಡಲಾಗಿದೆ.  45 ಸಾವಿರ ರೂ. ಇದ್ದ ವೇತನವನ್ನು  60 ಸಾವಿರ ರೂ. ಗೆ ಏರಿಕೆ ಮಾಡಲಾಗಿದೆ. ಆದೇಶ ಕೂಡಲೇ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.

ಡಿಸಿಎಂ ಮುಂದೆ ಬೇಡಿಕೆ ಇಟ್ಟಿದ್ದ ವೈದ್ಯರು

ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಆಧಾರಿತ ವೈದ್ಯರು ಜುಲೈ 8ರಿಂದ ಕೆಲಸಕ್ಕೆ ಹಾಜರಾಗದಿರಲು ನಿರ್ಧರಿಸಿದ್ದರು.  ಕೆಲಸ ಕಾಯಂ ಮಾಡಿ ಎಂಬ ಬೇಡಿಕೆಯನ್ನು ಇಟ್ಟಿದ್ದರು. 

ಕೊರೋನಾದಂತಹ ವಿಷಮ ಸ್ಥಿತಿಯಲ್ಲಿ ವೈದ್ಯರು ನಿರಂತರವಾಗಿ  ಕೆಲಸ ಮಾಡಿಕೊಂಡು ಬಂದಿದ್ದಾರೆ. ಕೊರೋನಾ ವಾರಿಯರ್ಸ್ ಗೆ ಸರ್ಕಾರ ಮಣಿದಿದೆ.