ದಾವಣಗೆರೆ: ಮಹಿಳೆಯರೇ ಎಚ್ಚರ ಒಂಟಿ ಮನೆಗಳೇ ಇವನ ಟಾರ್ಗೆಟ್!
ಒಂಟಿ ಮಹಿಳೆ ಇದ್ದ ಮನೆಗೆ ಹಾಡಹಗಲೇ ದರೋಡೆಕೋರನೊಬ್ಬ ನುಗ್ಗಿ, ಮನೆ ಮಾಲಕಿ ಮೇಲೆ ತೀವ್ರ ಹಲ್ಲೆ ಮಾಡಿ, ಐದು ಲಕ್ಷ ರು. ದೋಚಿಕೊಂಡು ಪರಾರಿಯಾದ ಘಟನೆ ನಗರದ ಹೊರವಲಯದ ಕುಂದುವಾಡ ರಸ್ತೆಯ ಲೇಕ್ ವೀವ್ ಬಡಾವಣೆಯಲ್ಲಿ ಬುಧವಾರ ನಡೆದಿದೆ.
ದಾವಣಗೆರೆ (ಸೆ.14) : ಒಂಟಿ ಮಹಿಳೆ ಇದ್ದ ಮನೆಗೆ ಹಾಡಹಗಲೇ ದರೋಡೆಕೋರನೊಬ್ಬ ನುಗ್ಗಿ, ಮನೆ ಮಾಲಕಿ ಮೇಲೆ ತೀವ್ರ ಹಲ್ಲೆ ಮಾಡಿ, ಐದು ಲಕ್ಷ ರು. ದೋಚಿಕೊಂಡು ಪರಾರಿಯಾದ ಘಟನೆ ನಗರದ ಹೊರವಲಯದ ಕುಂದುವಾಡ ರಸ್ತೆಯ ಲೇಕ್ ವೀವ್ ಬಡಾವಣೆಯಲ್ಲಿ ಬುಧವಾರ ನಡೆದಿದೆ.
ನಗರದ ಕುಂದುವಾಡ ರಸ್ತೆಯ ಲೇಕ್ ವೀವ್ ಬಡಾವಣೆಯ ಶ್ರೀನಾಥ ಎಂಬುವರ ಮನೆಯಲ್ಲಿ ದರೋಡೆಕೋರನು ಬುಧವಾರ ಬೆಳಿಗ್ಗೆ 11.30ರ ವೇಳೆ ಈ ಕೃತ್ಯ ಎಸಗಿದ್ದಾನೆ. ಶ್ರೀನಾಥ ಮನೆ ಯಿಂದ ಹೊರಗೆ ಹೋಗಿದ್ದು, ಅವರ ಪತ್ನಿ ಯೋಗೇಶ್ವರಿ ಒಬ್ಬರೆ ಮನೆಯಲ್ಲಿದ್ದರು. ಇದನ್ನೆಲ್ಲಾ ಗಮನಿಸಿರುವ ದರೋಡೆಕೋರನೊಬ್ಬ ಮನೆಗೆ ನುಗ್ಗಿ, ಈ ಕೃತ್ಯ ಎಸಗಿರುವುದು ಆ ಭಾಗದ ಜನರ ಆತಂಕಕ್ಕೀಡು ಮಾಡಿದೆ.
ಬೆಂಗಳೂರು: ಹೆಂಡ್ತಿ ನಂಬರ್ ಕೇಳಿದ್ದಕ್ಕೆ ಸ್ನೇಹಿತನ ಮನೆಯನ್ನೇ ಧ್ವಂಸ ಮಾಡಿದ ರೌಡಿಶೀಟರ್..!
ಶ್ರೀನಾಥ, ಯೋಗೇಶ್ವರಿ ದಂಪತಿ ತಮ್ಮ ಮಗನ ಚಿಕಿತ್ಸೆಗೆಂದು 5 ಲಕ್ಷ ರು. ಇಟ್ಟುಕೊಂಡಿದ್ದರು. ಆದರೆ, ಯೋಗೇಶ್ವರಿ ಒಬ್ಬರೇ ಮನೆಯಲ್ಲಿ ಇರುವುದನ್ನು ಗಮನಿಸಿ, ನುಗ್ಗಿರುವ ದರೋಡೆಕೋರ ಮನೆ ಮಾಲಕಿ ಮೇಲೆ ತೀವ್ರ ಹಲ್ಲೆ ಮಾಡಿದ್ದಾನೆ. ಹಠಾತ್ ಘಟನೆಯಿಂದ ಕಕ್ಕಾಬಿಕ್ಕಿಯಾದ ಯೋಗೇಶ್ವರಿಯವರಿಗೆ ಮತ್ತಷ್ಟು ಭಯಪಡಿಸಿ, ಮನೆಯಲ್ಲಿದ್ದ 5 ಲಕ್ಷ ರು.ಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದಾನೆ. ಘಟನೆಯಿಂದಾಗಿ ಮಾನಸಿಕವಾಗಿ ಜರ್ಝರಿತವಾಗಿರುವ ಗಾಯಾಳು ಯೋಗೇಶ್ವರಿಯವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರೀನಾಥರ ಮನೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆ ರಾದಲ್ಲಿ ಮನೆಗೆ ದರೋಡೆಕೋರನು ಬಂದು, ಹೋಗುವ ದೃಶ್ಯಗಳು, ಚಲನವಲನಗಳ ದೃಶ್ಯಗಳು ಸೆರೆಯಾಗಿವೆ. ಘಟನಾ ಸ್ಥಳಕ್ಕೆ ಎಎಸ್ಪಿ ರಾಮಗೊಂಡ ಬಿ.ಬಸರಗಿ ಹಾಗೂ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆಕೋರನ ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ್ ಸೂಚನೆಯಂತೆ ವಿಶೇಷ ತಂಡವನ್ನು ರಚಿಸಿದ್ದು, ಶ್ರೀನಾಥ್‌ರ ಮನೆಯ ಸಿಸಿ ಕ್ಯಾಮೆರಾ ದೃಶ್ಯ ಸೇರಿದಂತೆ ಆರೋಪಿ ಸುಳಿವಿಗೆ ಪೂರಕ ಮಾಹಿತಿಯನ್ನೂ ಪೊಲೀಸರು ಕಲೆ ಹಾಕಿದ್ದಾರೆ. ಶೀಘ್ರವೇ ಆರೋಪಿಗೆ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಜಮೀನು ವಿಚಾರಕ್ಕೆ ತಂಗಿ ಮೇಲೆ ಅಣ್ಣನಿಂದಲೇ ಹಲ್ಲೆ
ಹೊಸ ಬಡಾವಣೆ, ಒಂಟಿ ಮಹಿಳೆಯರಲ್ಲಿ ಭೀತಿ
ಕುಂದುವಾಡ ರಸ್ತೆಯ ಲೇಕ್ ವೀವ್ ಲೇಔಟ್‌ನಲ್ಲಿ ಹಾಡಹಗಲೇ ದರೋಡೆಕೋರ ಮನೆಗೆ ನುಗ್ಗಿ, ಮನೆಯ ಮಾಲಕಿ ಮೇಲೆ ಹಲ್ಲೆ ಮಾಡಿದ್ದಲ್ಲದೇ ಐದು ಲಕ್ಷ ರು. ದೋಚಿಕೊಂಡು ಪರಾರಿಯಾಗಿರುವುದು ಸಾರ್ವಜನಿಕರು ವಿಶೇಷವಾಗಿ ಹೊಸ ಬಡಾವಣೆಗಳ ನಿವಾಸಿಗಳು, ಒಂಟಿ ಮಹಿಳೆಯರು, ವಯೋವೃದ್ಧರಲ್ಲಿ ತೀವ್ರ ಆತಂಕ ಹುಟ್ಟು ಹಾಕಿದೆ. ಮನೆಯಲ್ಲಿ ಒಬ್ಬಂಟಿ ಮಹಿಳೆ ಇರುವುದನ್ನು ಗಮನಿಸಿಯೇ ದರೋಡೆಕೋರ ಸಂಚು ಮಾಡಿರುವುದು ಸ್ಪಷ್ಟವಾಗಿದೆ. ದರೋಡೆಕೋರ ಒಬ್ಬನೇ ಇದ್ದನೇ ಅಥವಾ ಆತನ ಜೊತೆಗೆ ಇನ್ನೂ ಯಾರಾದರೂ ಇದ್ದರಾ? ಸ್ಥಳೀಯರು ಮಾಡಿದ್ದ ಅಥವಾ ಪರ ಊರಿನ, ಜಿಲ್ಲೆಯ ದರೋಡೆಕೋರರ ತಂಡವಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.