ರಮೇಶ್ ಹಾಗೂ ರೌಡಿಶೀಟರ್ ಕೆಂಪೇಗೌಡ ಇಬ್ಬರು ಸ್ನೇಹಿತರಾಗಿದ್ದಾರೆ. ಬಾರ್‌ನಲ್ಲಿ‌ ಕುಡಿದು ಅಂಗಡಿ ಮುಂದೆ ಬಂದು ನಿಂತಿದ್ದಾರೆ. ಈ‌‌ ವೇಳೆ ಕೆಂಪೇಗೌಡನಿಗೆ ನಿನ್ನ ಪತ್ನಿ ನಂಬರ್ ಕೊಡು ಎಂದು ರಮೇಶ್ ಕೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಕೆಂಪೇಗೌಡ ರಮೇಶ್‌ ಕಪಾಳಕ್ಕೆ‌ ಹೊಡೆದ ಕೆಂಪೇಗೌಡ.  

ಬೆಂಗಳೂರು(ಸೆ.14): ಕುಡಿದ ಮತ್ತಿನಲ್ಲಿ‌ ಶುರುವಾದ ಜಗಳ ಮನೆಯನ್ನೇ ಧ್ವಂಸ ಮಾಡುವ ಹಂತಕ್ಕೆ ಬಂದು ತಲುಪಿದ ಘಟನೆ ನಿನ್ನೆ(ಬುಧವಾರ) ರಾತ್ರಿ ಹೊಯ್ಸಳ ನಗರದಲ್ಲಿ ನಡೆದಿದೆ. ಹೆಂಡತಿ‌‌ ನಂಬರ್ ಕೊಡು ಎಂದಿದ್ದಕ್ಕೆ ರೊಚ್ಚಿಗೆದ್ದ ರೌಡಿಶೀಟರ್ ಕೆಂಪೇಗೌಡ ಸ್ನೇಹಿತ ರಮೇಶ್ ಎಂಬಾತನಿಗೆ ರಸ್ತೆಯಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ್ದಾನೆ. 

ಈ ಸಂಬಂಧ ಚಂದ್ರಲೇಔಟ್ ಪೊಲೀಸರು ರೌಡಿಶೀಟರ್ ಕೆಂಪೇಗೌಡ @ ಕೆಂಪನನ್ನ ಬಂಧಿಸಿದ್ದಾರೆ. ರಮೇಶ್ ಹಾಗೂ ರೌಡಿಶೀಟರ್ ಕೆಂಪೇಗೌಡ ಇಬ್ಬರು ಸ್ನೇಹಿತರಾಗಿದ್ದಾರೆ. ಬಾರ್‌ನಲ್ಲಿ‌ ಕುಡಿದು ಅಂಗಡಿ ಮುಂದೆ ಬಂದು ನಿಂತಿದ್ದಾರೆ. ಈ‌‌ ವೇಳೆ ಕೆಂಪೇಗೌಡನಿಗೆ ನಿನ್ನ ಪತ್ನಿ ನಂಬರ್ ಕೊಡು ಎಂದು ರಮೇಶ್ ಕೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಕೆಂಪೇಗೌಡ ರಮೇಶ್‌ ಕಪಾಳಕ್ಕೆ‌ ಹೊಡೆದು ಕೆಂಪೇಗೌಡ ಮನೆಗೆ ಹೋಗಿದ್ದನು. 

ಅವಳು ಹಿಂದೂ, ಅವನು ಮುಸ್ಲಿಂ..ಅವರನ್ನ ಒಂದು ಮಾಡಿದ್ದು ನಶೆ: ಆವತ್ತು ಆ ರೂಮಿನಲ್ಲಿ ನಡೆದಿದ್ದೇನು..?

ರಾತ್ರಿ 11 ಗಂಟೆಗೆ ಹಲ್ಲೆ ವಿಚಾರವಾಗಿ ಪ್ರಶ್ನೆ ಮಾಡಲು ರಮೇಶ್ ಸಂಬಂಧಿಕರು ಮತ್ತು ಸ್ನೇಹಿತರು ಕೆಂಪೇಗೌಡನ ಮನೆಗೆ ತೆರಳಿದ್ದರು. ಇನ್ನು ರಮೇಶ್ ಮನೆ ಬಳಿ ಹೋಗಿದ್ದ ಮಂಜುನಾಥ್, ಜವರೇಗೌಡ, ಕೃಷ್ಣಮೂರ್ತಿ ಮತ್ತು 10 ಕ್ಕೂ ಹೆಚ್ಚು ಜನರ ತಂಡ. ಈ ವೇಳೆ ಮಾತಿಗೆ ಮಾತು ಬೆಳೆದು ಮತ್ತೆ ಗಲಾಟೆ ನಡೆದಿದೆ. 

ಗಲಾಟೆಯಲ್ಲಿ ಮಂಜುನಾಥ್, ಜವರೇಗೌಡ, ಕೃಷ್ಣಮೂರ್ತಿಗೆ ಕೆಂಪೇಗೌಡ ಚಾಕುವಿನಿಂದ ಇರಿದಿದ್ದಾನೆ. ನಂತರ ರೊಚ್ಚಿಗೆದ್ದ ಗುಂಪಿನಿಂದ ಕೆಂಪೇಗೌಡ ಮನೆ ಮೇಲೆ ಕಲ್ಲು ಎಸೆದು, ಕಿಟಕಿ ಗಾಜುಗಳು ಪುಡಿ‌ ಪುಡಿ ಮಾಡಿದ್ರು, ಬಾಗಿಲು ಮುರಿದು ಹಾಕಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚಂದ್ರಲೇಔಟ್ ಪೊಲೀಸರು ಆರೋಪಿ ಕೆಂಪೇಗೌಡನನ್ನ ಬಂಧಿಸಿದ್ದಾರೆ.