ಚನ್ನಪಟ್ಟಣ: ಜಮೀನು ವಿಚಾರಕ್ಕೆ ತಂಗಿ ಮೇಲೆ ಅಣ್ಣನಿಂದಲೇ ಹಲ್ಲೆ
ಜಯಮ್ಮ ಅವರನ್ನು ಮನಸೋ ಇಚ್ಛೆ ಥಳಿಸಿ, ಕಾಲಿಂದ ಒದ್ದು ಹಲ್ಲೆ ಮಾಡಿದ್ದಾರೆ. ಬಿಡಿಸಲು ಬಂದ ಜಯಮ್ಮ ಅವರ ಸೊಸೆ ಅರ್ಪಿತಾ ಮೇಲೂ ಹಲ್ಲೆ ನಡೆಸಿದ್ದು, ಅವರು ಮೊಬೈಲ್‌ನಲ್ಲಿ ಮಾಡಿದ್ದ ವಿಡಿಯೋ ಡಿಲೀಟ್ ಮಾಡುವಂತೆ ಬೆದರಿಸಿದ ರಾಜಣ್ಣ.
ಚನ್ನಪಟ್ಟಣ(ಸೆ.13): ಜಮೀನು ವಿಚಾರಕ್ಕೆ ತಂಗಿಯ ಮೇಲೆ ಅಣ್ಣ ಮತ್ತು ಆತನ ಮನೆಯವರು ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕುರಿದೊಡ್ಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜಯಮ್ಮ ಎಂಬುವವರ ಕುರಿ ಮೇಯಿಸಿಕೊಂಡು ಮನೆಗೆ ಹಿಂದಿರುಗುವಾಗ ಸಹೋದರ ರಾಜಣ್ಣ, ಅವರ ಮಗ ಮಧುಕುಮಾರ್ ಮತ್ತು ಅವರ ಮನೆಯವರು ಜಯಮ್ಮ ಮೇಲೆ ಏಕಾಏಕಿ ದಾಳಿ ಮಾಡಿ, ಅವಾಚ್ಯ ಪದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ.
ಜಯಮ್ಮ ಅವರನ್ನು ಮನಸೋ ಇಚ್ಛೆ ಥಳಿಸಿ, ಕಾಲಿಂದ ಒದ್ದು ಹಲ್ಲೆ ಮಾಡಿದ್ದಾರೆ. ಬಿಡಿಸಲು ಬಂದ ಜಯಮ್ಮ ಅವರ ಸೊಸೆ ಅರ್ಪಿತಾ ಮೇಲೂ ಹಲ್ಲೆ ನಡೆಸಿದ್ದು, ಅವರು ಮೊಬೈಲ್‌ನಲ್ಲಿ ಮಾಡಿದ್ದ ವಿಡಿಯೋ ಡಿಲೀಟ್ ಮಾಡುವಂತೆ ಬೆದರಿಸಿದ್ದಾರೆ.
ಮಚ್ಚಿನಿಂದ ಪತ್ನಿ ಕೊಚ್ಚಿ ಕೊಂದ ಪತಿ: ಮಾವನ ಮೇಲೂ ಮಾರಣಾಂತಿಕ ಹಲ್ಲೆ
ಗಾಯಾಳು ಜಯಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ರಾಜಣ್ಣ, ಮಧುಕುಮಾರ್ ಸೇರಿದಂತೆ 7 ಮಂದಿ ಮೇಲೆ ಜಯಮ್ಮ ಸೊಸೆ ಅರ್ಪಿತಾ ಪ್ರಕರಣ ದಾಖಲಿಸಿದ್ದಾರೆ.