Asianet Suvarna News Asianet Suvarna News

ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿಯದ್ದು ಸಹಜ ಸಾವಲ್ಲ: ಡಿ.ಕೆಂಪಣ್ಣ ಟ್ವಿಸ್ಟ್!

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಸಾವು ಸಹಜವಾದದ್ದಲ್ಲ ಎಂದು ಡಿ.ಕೆಂಪಣ್ಣ ಸ್ಫೋಟಕ ಟ್ವಿಸ್ಟ್‌ ನೀಡಿದ್ದಾರೆ. 

Karnataka Contractors Association President D Kempanna Twist given for Ambikapathy death sat
Author
First Published Nov 28, 2023, 1:17 PM IST

ಬೆಂಗಳೂರು (ನ.28): ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ (ಕಳೆದ ತಿಂಗಳು ನಡೆದ ಐಟಿ ದಾಳಿ ವೇಳೆ ಮನೆಯಲ್ಲಿ 42 ಕೋಟಿ ರೂ. ಸಮೇತ ಸಿಕ್ಕಿಬಿದ್ದಿದ್ದ ಗುತ್ತಿಗೆದಾರ) ಅವರದ್ದು ಸಹಜ ಸಾವಲ್ಲ. ಬಿಜೆಪಿ ಸರ್ಕಾರದ ಮಾಜಿ ಸಚಿವರು ಹಾಗೂ ಹಾಲಿ ಶಾಸಕರೂ ಆಗಿರುವ ಒಬ್ಬರು ಅಂಬಿಕಾಪತಿಗೆ ತೀವ್ರವಾಗಿ ಟಾರ್ಚರ್ ಕೊಟ್ಟಿದ್ದಾರೆ. ಆದ್ದರಿಂದಲೇ ಅವರು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಆರೋಪ ಮಾಡಿದ್ದಾರೆ.

ಕರ್ನಾಟಕ ಗುತ್ತಿಗೆದಾರರ ಉಪಾಧ್ಯಕ್ಷ ಅಂಬಿಕಾಪತಿ ಸಾವನ್ನಪ್ಪಿದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು, ಹಿಂದಿನ ಸರ್ಕಾರದ ಮಿನಿಸ್ಟರ್ ಅಂದರೆ ಈಗಿನ ಹಾಲಿ ಶಾಸಕರೊಬ್ಬರಿಂದ ಟಾರ್ಚರ್‌ನಿಂದಾಗಿ ಹಾಗೂ ಈಗಿನ‌ ಸರ್ಕಾರದಲ್ಲಿ ಅಂಬಿಕಾಪತಿ ಅವರನ್ನು ನಡೆಸಿಕೊಂಡ ರೀಯಿಂದಾಗಿ  ಬಹಳ ನೊಂದುಕೊಂಡಿದ್ದರಿಂದ ಒತ್ತಡ ಉಂಟಾಗಿ ಸಾವನ್ನಪ್ಪಿದ್ದಾರೆ. ಹಾಲಿ ಶಾಸಕರೊಬ್ಬರ ಜೊತೆಗೆ ಈಗಿನ ಸರ್ಕಾರದ ಅಧಿಕಾರಿಗಳಿಂದ ಟಾರ್ಚರ್ ಕೂಡ ಇತ್ತು. ಜೊತೆಗೆ, ಸಿಬಿಐ ತನಿಖೆ ಆದಾಗ ಉಂಟಾಗಿದ್ದ ಆಘಾತದಿಂದಾಗಿ ಅಂಬಿಕಾಪತಿಗೆ ಹೃದಯಾಘಾತ ಆಗಿದೆ ಎಂದು ಹೇಳಿದ್ದಾರೆ.

ಐಟಿ ರೇಡ್‌ನಲ್ಲಿ 42 ಕೋಟಿ ರೂ. ಸಮೇತ ಸಿಕ್ಕಿಬಿದ್ದಿದ್ದ ಬಿಬಿಎಂಪಿ ಗುತ್ತಿಗೆದಾರ ಅಂಬಿಕಾಪತಿ ನಿಧನ

ಜಸ್ಟೀಸ್ ನಾಗಮೋಹನ್‌ದಾಸ್ ಅವರಿಗೆ ದಾಖಲೆ ಸಲ್ಲಿಕೆ ಕುರಿತು ಮಾತನಾಡಿದ ಕೆಂಪಣ್ಣ ಅವರು, ಈಗ ದಾಖಲೆ ಸಲ್ಲಿಕೆ ಮಾಡಿದ್ದೇವೆ ಆದ್ರೆ ಏನ್ ದಾಖಲೆ‌ ಅಂತ ಹೇಳೋಕೆ‌ ಆಗಲ್ಲ. 10 ದಿನದ ನಂತರ ಮತ್ತಷ್ಟು ದಾಖಲೆ ಸಲ್ಲಿಕೆ ಮಾಡುತ್ತೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.40 ಪರ್ಸೆಂಟ್ ಆರೋಪಕ್ಕೆ ‌ಸಂಬಂಧ ದಾಖಲೆ ನೀಡಲಾಗಿದೆ. ಈ ಸರ್ಕಾರದ ಕೆಲವು ದಾಖಲೆಗಳನ್ನ ಕೊಟ್ಟಿದ್ದೇವೆ. ಈ ಸರ್ಕಾರದ ಕೆಲವು ಕೇಸಿನ ದಾಖಲೆಗಳು ಕೊಟ್ಟಿದ್ದೇವೆ. ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರಿಗೆ ಅಗತ್ಯ ದಾಖಲೆಗಳನ್ನು ಕೊಟ್ಟಿದ್ದೇವೆ. ಹೀಗಾಗಿ ದಾಖಲೆಗಳ ಬಗ್ಗೆ ಮಾತಾಡಲ್ಲ ಎಂದು ಹೇಳಿದರು.

ಇನ್ನು ನಮ್ಮ ಹೋರಾಟ ಸರ್ಕಾರಗಳ ವಿರುದ್ಧ ಹೋರಾಟ ಅಲ್ಲ. ಗುತ್ತಿಗೆದಾರರಿಗೆ ಆಗುವ ತೊಂದರೆ ಸರಿಪಡಿಸಲು ಕೇಳ್ತಾ ಇದ್ದೇವೆ. ಇದೇ ಮೊದಲ ಬಾರಿ ದಾಖಲೆಗಳ ಕೊಟ್ಟಿದ್ದೇವೆ. ಮತ್ತಷ್ಟು ದಾಖಲೆಗಳನ್ನು ಆಯೋಗದಿಂದ ಕೇಳಲಾಗಿದ್ದು ಅವುಗಳನ್ನು ಕೂಡ ಕೆಲವು ದಿನಗಳ ನಂತರ ಸಲ್ಲಿಕೆ ಮಾಡುತ್ತೇವೆ. ಪಿಡಬ್ಲ್ಯೂಡಿ, ಪಂಚಾಯತ್ ರಾಜ್, ನೀರಾವರಿ, ಆರೋಗ್ಯ ಇಲಾಖೆ ಸೇರಿ ಎಲ್ಲಾ ಇಲಾಖೆ ದಾಖಲೆಗಳನ್ನು ಕೊಟ್ಟಿದ್ದೇವೆ. ಮತ್ತೆ ಕೆಲವು ಮಾಹಿತಿಗಾಗು ಮಾಹಿ ಹಕ್ಕು ಅಧಿನಿಯಮ (ಆರ್‌ಟಿಐ) ಅಡಿಯಲ್ಲಿ ಹಾಕಿದ್ದೇವೆ, ಬಂದ ಮೇಲೆ ದಾಖಲೆ‌ ಕೊಡ್ತೇವೆ ಎಂದು ತಿಳಿಸಿದರು.

ನಾಳೆ ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರಿಂದ ಶೇ.40 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆಂಬ ಆರೋಪ ವಿಚಾರವಾಗಿ ಕಾಂಗ್ರೆಸ್‌ ಸರ್ಕಾರದಿಂದ ನೇಮಕ ಮಾಡಲಾಗಿದ್ದ ಜಸ್ಟೀಸ್ ‌ನಾಗಮೋಹಮ್‌ದಾಸ್ ಆಯೋಗಕ್ಕೆ ದಾಖಲೆಗಳ ಸಲ್ಲಿಕೆ ಮಾಡಲಾಗಿದೆ.ಕರ್ನಾಟಕ ರಾಜ್ಯ ಗುತ್ತಿಗೆದಾರರ ‌ಸಂಘದ ಅಧ್ಯಕ್ಷ ಕೆಂಪಣ್ಣ ನೇತೃತ್ವದಲ್ಲಿ ದಾಖಲೆಗಳ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಅಧ್ಯಕ್ಷ ಕೆಂಪಣ್ಣ, ಜನರಲ್ ಸೆಕ್ರೆಟರಿ ಜಿ.ಎಂ.ರವೀಂದ್ರ, ಕಾರ್ಯಾಧ್ಯಕ್ಷರಾದ ಮಂಜುನಾಥ್, ಸಂಕಗೌಡ ಶಾನಿ ಮತ್ತಿತರು ಜೊತೆಯಲ್ಲಿದ್ದರು.

Follow Us:
Download App:
  • android
  • ios