ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಮನೆಯಲ್ಲಿ 42 ಕೋಟಿ ರೂ. ಹಣದ ಸಮೇತವಾಗಿ ಸಿಕ್ಕಿಬಿದ್ದಿದ್ದ ಬಿಬಿಎಂಪಿ ಗುತ್ತಿಗೆದಾರ ಅಂಬಿಕಾಪತಿ ನಿಧನರಾಗಿದ್ದಾರೆ.

ಬೆಂಗಳೂರು (ನ.27): ಬೆಂಗಳೂರಿನಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆಯ ಅಧಿಕಾರಿಗಳಿಂದ ದಾಳಿ ಮಾಡಿದಾಗ ಮನೆಯಲ್ಲಿ 42 ಕೋಟಿ ರೂ. ಕಪ್ಪು ಹಣದ ಸಮೇತವಾಗಿ ಸಿಕ್ಕಿಬಿದ್ದಿದ್ದ ಬಿಬಿಎಂಪಿ ಗುತ್ತಿಗೆದಾರ ಅಂಬಿಕಾಪತಿ ಸೋಮವಾರ ಸಂಜೆ ನಿಧನರಾಗಿದ್ದಾರೆ. ಇವರು ಕರ್ನಾಟಕ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಡಿ.ಕೆಂಪಣ್ಣ ಅವರ ಆಪ್ತ ಸ್ನೇಹಿತರೂಐ ಆಗಿದ್ದರು.

ಬಿಬಿಎಂಪಿ ಕಂಟ್ರ್ಯಾಕ್ಟರ್ ಅಂಬಿಕಾ ಪತಿ ನಿಧನ ಸೋಮವಾರ ಆಸ್ಪತ್ರೆಯಲ್ಲಿ ಕೊನೆ ಉಸಿರನ್ನೆಳೆದಿದ್ದಾರೆ. ಆರೋಗ್ಯ ತೀವ್ರ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾನೆ. ಇನ್ನು ಇತ್ತೀಚೆಗಷ್ಟೇ ಐಟಿ ರೈಡ್‌ನ ವೇಳೆ ಸುಮಾರು 42 ಕೋಟಿ ರೂ. ಕಂತೆ ಕಂತೆ ಹಣದ ಸಮೇತ ಸಿಕ್ಕಿಬಿದ್ದಿದ್ದ ಅಂಬಿಕಾಪತಿ ರಾಜ್ಯಾದ್ಯಂತ ತೀವ್ರ ಸುದ್ದಿಯಾಗಿದ್ದರು. ಈ ವೇಳೆ ಅಂಬಿಕಾಪತಿ ಮನೆಯಲ್ಲಿ ಸಿಕ್ಕಿದ್ದ 42 ಕೋಟಿಗೂ ಅಧಿಕ ಮೌಲ್ಯದ ಹಣವನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದರು. ಈ ಪ್ರಕರಣದಿಂದ ರಾಜ್ಯ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ತೀವ್ರ ತಿಕ್ಕಾಟವೂ ಶುರುವಾಗಿತ್ತು. ಇನ್ನು ಹಲವು ದಿನಗಳಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಅಂಬಿಕಾಪತಿ ಈಗ ದೇಹತ್ಯಾಗ ಮಾಡಿದ್ದಾರೆ.

ಅಂಬಿಕಾಪತಿ 45 ವರ್ಷದ ಸ್ನೇಹಿತ, ಆರೋಪ ಸಾಬೀತಾದ್ರೆ ಕಾಲ್ಕೆಳಗೆ ನುಗ್ಗುತ್ತೇನೆ: ಡಿ. ಕೆಂಪಣ್ಣ ಆಕ್ರೋಶ

ಇಂದು ಸಂಜೆ 6.30 ಕ್ಕೆ ಲಘು ಹೃದಯಾಘಾತವಾಗಿತ್ತು. ತಕ್ಷಣವೇ ಅವರನ್ನ ಹತ್ತಿರದ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯಕೀಯ ವೃತ್ತಿಪರರು ಅವರು ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಅವರ ಪಾರ್ಥಿವ ಶರೀರವನ್ನು ಸುಲ್ತಾನಪಾಳ್ಯದ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಅಂತ್ಯಕ್ರಿಯೆ ಮಂಗಳವಾರ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ಇನ್ನು ಅಂಬಿಕಾಪತಿ ಅವರು ಕರ್ನಾಟಕದ ಮಾಜಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸಂಬಂಧಿ ಆಗಿದ್ದರು.

ಅಂಬಿಕಾಪತಿ ಈಗ ಕರೋಡ್ ಪತಿ ಈತ ಯಾರ ಬೇನಾಮಿ?: ಸಿಟಿ ರವಿ ಕಿಡಿ

ಅಂಬಿಕಾಪತಿ ಪರವಾಗಿ ನಿಂತಿದ್ದ ಸ್ನೇಹಿತ ಡಿ.ಕೆಂಪಣ್ಣ: ಬೆಂಗಳೂರಿನಲ್ಲಿ ಅಂಬಿಕಾಪತಿ ಮನೆಯ ಮೇಲೆ ಐಟಿ ದಾಳಿ ನಡೆದು 45 ಕೋಟಿ ರೂ. ಲಭ್ಯವಾಗಿದೆ ನಿಜ. ಆದರೆ, ಅಂಬಿಕಾಪತಿ ನಗೆಗೊತ್ತಿಲ್ಲವೆಂದು ಎಂದಿಗೂ ಹೇಳಿಲ್ಲ. ನಾನು ಮತ್ತು ಅಂಬಿಕಾಪತಿ 45 ವರ್ಷದ ಸ್ನೇಹಿತರು. ಅವರಿಗೆ ಕಿಡ್ನಿ ಸಮಸ್ಯೆಯಿದ್ದು, ಆರೋಗ್ಯ ವಿಚಾರಿಸಿದ್ದೇನೆ. ಅಂಬಿಕಾಪತಿ ಏನು ತಪ್ಪು ಮಾಡಿಲ್ಲ, ಅವರ ಪರವಾಗಿ ನಾನು ಈಗಲೂ ಇದ್ದೇನೆ. ಆರೋಪ ಸಾಬೀತಾದರೆ ನಿಮ್ಮ ಕಾಲಿನ ಕೆಳಗೆ ನುಗ್ಗುತ್ತೇನೆ ಎಂದು ಸಂಸದ ಸದಾನಂದಗೌಡರಿಗೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ತಿರುಗೇಟು ನೀಡಿದ್ದರು. ಅಂದರೆ, ಅಂಬಿಕಾಪತಿ ಅವರು ಹಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬಗ್ಗೆ ಕೆಂಪಣ್ಣ ಅವರೇ ತಿಳಿಸಿದ್ದರು.