ನಾಳೆ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. 

ಬೆಂಗಳೂರು (ನ.28): ರಾಜ್ಯದ ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆ ಬುಧವಾರ (ನ.29ರಂದು) ಬೆಳಗ್ಗೆ 10.30 ರಿಂದ ಮಧ್ಯಾಹ್ನ 3.30 ರವರೆಗೆ ವಿದ್ಯುತ್ ಕಡಿತ ಮಾಡಲಾಗುತ್ತದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮಾಹಿತಿ ತಿಳಿಸಿದೆ.

ವಿದ್ಯುತ್ ಸರಬರಾಜು ಕಂಪನಿಗಳು ನಿರ್ವಹಣೆಯ ಕಾರ್ಯ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಲಿದೆ. ಬೆಂಗಳೂರಿನ ಉತ್ತರ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬುಧವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3.30 ರವರೆಗೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಸಹಕಾರನಗರ ಎ, ಬಿ, ಡಿ, ಇ, ಎಫ್ ಮತ್ತು ಜಿ ಬ್ಲಾಕ್‌ಗಳು, ಅಮೃತಹಳ್ಳಿ, ತಲಕಾವೇರಿ ಲೇಔಟ್, ಬಿಜಿಎಸ್ ಲೇಔಟ್, ನವ್ಯ ನಗರ, ಜಿಕೆವಿಕೆ ಲೇಔಟ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ಧಾನಸೌಧ ಲೇಔಟ್, ಸಾಯಿಬಾಬಾ ಲೇಔಟ್, ಕೆಂಪಾಪುರ, ಟೆಲಿಕಾಂ ಲೇಔಟ್, ಸಿಂಗಹಳ್ಳಿ II ಹಂತ, ವೆಂಕಟೇಶ್ವರ ನಗರ, ಕಳ್ಳಿಪಾಳ್ಯ, ಅತ್ತೂರು ಲೇಔಟ್, ತಿರುಮನಹಳ್ಳಿ, ಯಶೋದಾ ನಗರ, ಗೋಪಾಲಪ್ಪ ಲೇಔಟ್, ರ್‌ಎಂಝಡ್ ಅಜೂರ್, ಬ್ರಿಗೇಡ್ ಕ್ಯಾಲಾಡಿಯಂ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಮೆಟ್ರೋದಲ್ಲಿ ಭಿಕ್ಷೆ ಬೇಡಿ ದಂಡ ಕಟ್ಟಿದ್ದಾಯ್ತು, ಇದೀಗ ದೇಣಿಗೆ ಸಂಗ್ರಹಿಸಲು ಹೋಗಿ ತಗ್ಲಾಕೊಂಡ ಮತ್ತೊರ್ವ ಮಹಿಳೆ!

ಯಾಕೆ ಪವರ್ ಕಟ್?

  • ಉತ್ತರ ಭಾಗಗ ವಿದ್ಯುತ್ ಕಂಬಗಳ ಅಥವಾ ಟ್ರ್ಯಾನ್ಸ್ ಫಾರ್ಮರ್ ಗಳ ಬಳಿ ಬೆಳೆದ ಗಿಡ-ಗಂಟಿಗಳನ್ನು ತೆರವುಗೊಳಿಸುವುದು.
  • ಬಹು-ಗ್ರಾಮ ಯೋಜನೆಗಳ ಅಡಿಯಲ್ಲಿ ನೀರು ಸರಬರಾಜು ಸ್ಥಾಪನೆಗೆ ವಿದ್ಯುತ್ ಸರಬರಾಜುಗಳನ್ನು ಸ್ಥಾಪಿಸುವುದು.
  • ನವೀಕರಣ, ಆಧುನೀಕರಣ, DTC ರಚನೆಗಳನ್ನು ನಿರ್ವಹಿಸುವುದು, ಕೇಬಲ್​ಗಳನ್ನು ದುರಸ್ತಿ ಮಾಡುವುದು.
  • ರಿಂಗ್ ಮುಖ್ಯ ಘಟಕಗಳನ್ನು ನಿರ್ವಹಿಸುವುದು ಮತ್ತು ಮರಗಳನ್ನು ಕತ್ತರಿಸುವುದು.
  • ದಿನದ 24 ಗಂಟೆಯೂ ಜಲಸಿರಿಗಾಗಿ ವಿದ್ಯುತ್ ಸಂಪರ್ಕಕ್ಕೆ ಕೇಬಲ್ ಅಳವಡಿಕೆ.
  • ಭೂಮಿಯೊಳಗಿನ ಕೇಬಲ್‌ಗಳಿಗೆ ಉಂಟಾದ ಹಾನಿಯನ್ನು ಸರಿಪಡಿಸುವುದು.