ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಎಂಬ ಘೋಷವಾಕ್ಯದಡಿ ನವೆಂಬರ್ 2 ರಿಂದ 6ರವರೆಗೆ ರಾಜ್ಯಾದ್ಯಂತ ಬಿಜೆಪಿ ಬೃಹತ್ ಪಾದಯಾತ್ರೆ ನಡೆಸಲಿದೆ. ಕೇಂದ್ರದ ವಿರುದ್ಧ ಅರಾಜಕತೆ ಸೃಷ್ಟಿಸುತ್ತಿರುವ ಇಂಡಿಯಾ ಒಕ್ಕೂಟ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಈ ಹೋರಾಟ ನಡೆಯಲಿದೆ ಎಂದು ಎಂಎಲ್‌ಸಿ ರವಿಕುಮಾರ್ ತಿಳಿಸಿದ್ದಾರೆ.

ರಾಯಚೂರು: ಕರ್ನಾಟಕ ಬಿಜೆಪಿ ಬೃಹತ್ ಹೋರಾಟಕ್ಕೆ ಅಣಿಯಾಗ್ತಿದೆ. ನವೆಂಬರ್ 2 ರಿಂದ ನವೆಂಬರ್ 6 ವರೆಗೆ ಬೃಹತ್ ಪಾದಯಾತ್ರೆ ನಡೆಯಲಿದೆ.

ಪಾದಯಾತ್ರೆ ಬಗ್ಗೆ ರಾಯಚೂರಲ್ಲಿ ಮಾಹಿತಿ ನೀಡಿರುವ ಎಂಎಲ್‌ಸಿ ರವಿಕುಮಾರ್.. 'ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆಯನ್ನ ಅಳಿಸಿ' ಹೆಸರಿನಲ್ಲಿ ಬಿಜೆಪಿ ಹೋರಾಟ ಮಾಡಲಿದೆ. ಕೇಂದ್ರ ಸರ್ಕಾರದ ವಿರುದ್ಧ ಅರಾಜಕತೆ ಸೃಷ್ಟಿಸಲಾಗ್ತಿರೋರ ವಿರುದ್ಧ ಬಿಜೆಪಿ ಪಾದಯಾತ್ರೆ ಮಾಡುತ್ತಿದೆ. ನವೆಂಬರ್ 2 ರಿಂದ 6ವರೆಗೆ ಕೋಲಾರ, ಮೈಸೂರು, ಬಳ್ಳಾರಿ, ಕೊಪ್ಪಳ, ಮಂಗಳೂರು, ಶಿವಮೊಗ್ಗ ಸೇರಿ 10 ಪ್ರಮುಖ ಕಡೆಗಳಲ್ಲಿ ಪಾದಯಾತ್ರೆ ನಡೆಸಲಿದೆ ಎಂದರು.

ಯಾಕೆ ಪಾದಯಾತ್ರೆ?

ಇಂಡಿಯಾ ಒಕ್ಕೂಟ ಅರಾಜಕತೆ ಸೃಷ್ಟಿಸುತ್ತಿರೋದರ ವಿರುದ್ಧ ನಮ್ಮ ಹೋರಾಟ. ಕೇಂದ್ರ ಸರ್ಕಾರದ ವಿರುದ್ಧ ಮನಸ್ಸಿಗೆ ಬಂದಂತೆ ಹೇಳಿಕೆ ಕೊಡ್ತಾರೆ. ಮಲ್ಲಿಕಾರ್ಜುನ ಖರ್ಗೆ ಏನು ಮಾತನಾಡಿದರು. ನೀನೇನು ನಿಮ್ಮಪ್ಪ ಹೋಗ್ಬೇಕು ಎಂದು ಪ್ರಧಾನಿ ಮೋದಿ ಅವರಿಗೆ ಹೇಳುತ್ತಾರೆ. ಮೋದಿ, ಅಪ್ಪನಿಗೆ ತಕ್ಕ ಮಗ.. ಹೀಗಾಗಿ ಮೋದಿ‌ ಅವರು ಮೂರು ಬಾರಿ ಪ್ರಧಾನಿ ಆಗಿದ್ದಾರೆ ಎಂದು ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎಂಎಲ್‌ಸಿ ಚುನಾವಣೆಯಲ್ಲಿ ಎನ್‌ಡಿಎ ಜಯಭೇರಿ ಬಗ್ಗೆ ಪ್ರತಿಕ್ರಿಯಿಸಿ.. ಸರಿಯಾದ ಸಮಯದಲ್ಲಿ ಸರ್ಕಾರಕ್ಕೆ ರಾಜ್ಯದ ಜನರು ಪಾಠ ಕಲಿಸಿದ್ದಾರೆ. ಪದವೀಧರ, ಶಿಕ್ಷಕರ ಚುನಾವಣೆಯಲ್ಲಿ ಅದನ್ನು ತೋರಿಸಿದ್ದಾರೆ. ಈ ಸರ್ಕಾರ ಅಭಿವೃದ್ಧಿ ಶೂನ್ಯ ಅನ್ನೋದನ್ನ ಈ ಚುನಾವಣೆ ಸ್ಪಷ್ಟಪಡಿಸುತ್ತೆ. ಖಜಾನೆ ಖಾಲಿಯಾಗಿದೆ ಎಂದು ಡಿಕೆ ಶಿವಕುಮಾರ್ ಕೈಕಟ್ಟಿಕೊಂಡು ಕೂತಿದ್ದಾರೆ. ಗೃಹ ಲಕ್ಷ್ಮೀ ನಿಲ್ಲಿಸೋದು ಅದರ ದುಡ್ಡು ಹೊಡೆಯೋದು, ವಿಧವಾ ವೇತನಕ್ಕೆ, ಕತ್ತರಿ ಹಾಕೋದು, ರೈತರಿಗೆ ಕೊಡ್ತೀವಿ ಅಂದಿದ್ದ 2500 ರೂ.ಕೊಡೋಕೆ‌ ಆಗ್ತಿಲ್ಲ. ನಾಚಿಕೆ ಆಗಬೇಕು ಎಂದು ಗುಡುಗಿದರು.

ನಮ್ಮ ನಾಲ್ಕು ಜನ ಅಭ್ಯರ್ಥಿಗಳಲ್ಲಿ‌ ಮೂವರು ಲಿಂಗಾಯತರು, ಓಬ್ಬರು ಒಕ್ಕಲಿಗ ಸಮುದಾಯದವರು. ಬರೀ ಆಯಾ ಜಾತಿ ಅವರು ಮಾತ್ರ ಮತ ಹಾಕಿದ್ರೆ ಅವರು ಗೆಲ್ಲುತ್ತಿದ್ರಾ? ದಲಿತ, ಎಸ್ ಟಿ, ಓಬಿಸಿ‌ ಸೇರಿ ಎಲ್ಲಾ ಸಮುದಾಯದವ್ರು ಮತ ಹಾಕಿ ಗೆಲ್ಲಿಸಿದ್ದಾರೆ. ಅಂದ್ರೆ ಹಿಂದುಳಿದ ಸಮುದಾಯ,ದಲಿತರಿಗೂ ಕೂಡ ಸರ್ಕಾರದ ವಿರುದ್ಧ ಬೇಸತ್ತಿದ್ದಾರೆ. ಎಸ್ ಸಿಎಸ್ ಟಿ ಟಿಎಸ್ ಪಿ ಹಣ ದುರ್ಬಳಕೆ ಮಾಡಿದ್ದರು. ಮೀಸಲಾತಿ ಹೆಚ್ಚಳದ ಬಗ್ಗೆ ಕೋರ್ಟ್‌ನಲ್ಲಿ ಸರ್ಕಾರದ ವಕೀಲರು ಸರಿಯಾಗಿ ವಾದಿಸಲಿಲ್ಲ.

ಇದನ್ನೆಲ್ಲಾ ನೋಡಿ ಎಲ್ಲಾ ಮತದಾರರು ಚರ್ಚೆ ಮಾಡಿ ಮತಹಾಕಿದ್ದಾರೆ. ಇದು ಮುಂದಿನ ಚುನಾವಣೆಯ ದಿಕ್ಸೂಚಿ‌ ಚುನಾವಣೆಯಾಗಿದೆ ಎಂದರು. ಇನ್ನೇನು‌ 14 ತಿಂಗಳಲ್ಲಿ ಮತದಾನ ಬರುತ್ತೆ. ಅಪ್ಪ-ಮಗನಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಚ್ಚರಿಕೆ ಗಂಟೆ ಇದು. ನಾವು ಕಲ್ಯಾಣ ಕರ್ನಾಟಕದ ಎಲ್ಲಾ ಲೋಕಸಭಾ ಸ್ಥಾನ ಸೋತಿದ್ದಿವಿ. ಈ ಚುನಾವಣೆಯಲ್ಲಿ ದುರಹಂಕಾರ ನಡೆಯಲ್ಲ ಎಂದು ಮತದಾರರು ಹೇಳಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲಿ 100 ಕ್ಕೆ‌100 ಎನ್‌ಡಿಎ ಅಧಿಕಾರಕ್ಕೆ ಬರುತ್ತೆ ಎಂದು ಭವಿಷ್ಯ ನುಡಿದರು.