ಶಿವಮೊಗ್ಗ[ಜ.22]  ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಬಳಿ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ದತ್ತಾತ್ರಿಯವರ ಕಾರು ಅಪಘಾತಕ್ಕೆ ಗುರಿಯಾಗಿದೆ.  ಬ್ರಹ್ಮಾವರದಿಂದ ಶಿವಮೊಗ್ಗಕ್ಕೆ ದತ್ತಾತ್ರಿಯವರು ತಮ್ಮ ಕಾರಿನಲ್ಲಿ ಆಗಮಿಸುತ್ತಿದ್ದರು.

ಮಂಗಳವಾರ ಸಂಜೆ ಸುಮಾರು 4 ಗಂಟೆಗೆ ಮಂಡಗದ್ದೆಯ ಬಳಿ ರಸ್ತೆ ಪಕ್ಕದಲ್ಲಿರುವ ಮರಕ್ಕೆ ಕಾರು ಡಿಕ್ಕಿಯಾಗಿದೆ.  ದತ್ತಾತ್ರಿಯವರನ್ನು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿದೆ.  ದತ್ತಾತ್ರಿ ಅವರ ತಲೆಗೆ ಪೆಟ್ಟಾಗಿದೆ.

ಶಿವಮೊಗ್ಗ: ಬ್ರಾಹ್ಮಣರ ವಧು ತೋರಿಸಿ ಇಲ್ಲಾ ಹಣ ವಾಪಸ್ ಕೊಡಿ!

ರಸ್ತೆ ಅಪಘಾತದ ನಡೆದಾಗ ಇವರ ಜೊತೆ ಗಿದ್ದ ಬಿಜೆಪಿ ಯುವ ಮೋರ್ಚ ಕಾರ್ಯಕರ್ತ ವಿಜೇತ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಮಾಳೂರು ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.