Asianet Suvarna News Asianet Suvarna News

ಪಂಢರಪುರ, ಶ್ರೀಶೈಲದಲ್ಲಿ ಕರ್ನಾಟಕ ಭವನ: ಸಚಿವೆ ಜೊಲ್ಲೆ

*  ಪಂಢರಪುರ, ಗುಡ್ಡಾಪುರ, ಶ್ರೀಶೈಲ ಹಾಗೂ ತಿರುಪತಿಯಲ್ಲಿ ಕರ್ನಾಟಕ ಭವನ 
*  ರಾಜ್ಯದಿಂದ ತೆರಳುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕರ್ನಾಟಕ ಭವನ ನಿರ್ಮಾಣ
*  ಈ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುವ ಕರ್ನಾಟಕದ ಭಕ್ತರು 
 

Karnataka Bhavan at Srisailam Pandharpur and Guddapur Says Shashikala Jolle grg
Author
Bengaluru, First Published Sep 10, 2021, 11:57 AM IST

ಯಕ್ಸಂಬಾ(ಸೆ.10): ರಾಜ್ಯ ಮುಜರಾಯಿ ಇಲಾಖೆಯು ಪ್ರಸಿದ್ಧ ತೀರ್ಥಕ್ಷೇತ್ರಗಳಾದ ಪಂಢರಪುರ, ಗುಡ್ಡಾಪುರ ಹಾಗೂ ಶ್ರೀಶೈಲಗಳಲ್ಲಿ ಕರ್ನಾಟಕ ಭವನ ನಿರ್ಮಿಸಲು ಪ್ರಯತ್ನಿಸುತ್ತಿದ್ದು, ಶೀಘ್ರವೇ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. 

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವನಲ್ಲಿ ಕಾರ್ಮಿಕರಿಗೆ ಕಿಟ್‌ ವಿತರಿಸಿ ಮಾತನಾಡಿದ ಅವರು, ರಾಜ್ಯದಿಂದ ತೆರಳುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಇದನ್ನು ನಿರ್ಮಿಸಲಾಗುತ್ತಿದ್ದು, ತಿರುಪತಿಯಲ್ಲಿ ಕೂಡ ಯಾತ್ರಿ ನಿವಾಸ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದರು.

ಸುವರ್ಣ ಪರಿಣಾಮ; ಶಿರಸಿ ಮಾರಿಕಾಂಬಾ ದೇವಾಲಯ ಸೇವಾ ದರ ಹೆಚ್ಚಳಕ್ಕೆ ಬ್ರೇಕ್!

ಪಂಢರಪುರ, ಗುಡ್ಡಾಪುರ, ಶ್ರೀಶೈಲ ಹಾಗೂ ತಿರುಪತಿಗೆ ಕರ್ನಾಟಕದಿಂದ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಭೇಟಿ  ನೀಡುತ್ತಾರೆ. ಹೀಗಾಗಿ ಕರ್ನಾಟಕದ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕರ್ನಾಟಕ ಭವನವನ್ನ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. 
 

Follow Us:
Download App:
  • android
  • ios