Asianet Suvarna News Asianet Suvarna News

ಬಾಲ ಬಿಚ್ಚಿದ್ರೆ ಪರಿಣಾಮ ನೆಟ್ಟಗಿರಲ್ಲ; ರೌಡಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಹುಬ್ಬಳ್ಳಿ ಕಮಿಷನರೇಟ್

ಬಾಲ ಬಿಚ್ಚಿದ್ರೆ ಕಟ್ ಮಾಡ್ತೇವೆ. ಸುಮ್ಮನೆ ಇದ್ರೆ ಸರಿ. ಚುನಾವಣೆ ಸಮಯದಲ್ಲಿ ಆಟ ಮುಂದುವರಿಸಿದರೆ ಎಲ್ಲಿ ಹೊಡಿಬೇಕು ಅಲ್ಲಿ ಹೊಡ್ತೀವಿ ಹುಷಾರಾಗಿರಬೇಕು ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನರ್‌ ರೌಡಿಶೀಟರ್‌ಗಳಿಗೆ ಕೊಟ್ಟ ಎಚ್ಚರಿಕೆ ಇದು.

Karnataka assembly election rowdy pared by hubballi dharwad commissionerate rav
Author
First Published Feb 24, 2023, 10:42 AM IST

ಹುಬ್ಬಳ್ಳಿ (ಫೆ.24) : ಬಾಲ ಬಿಚ್ಚಿದರೆ ಸುಮ್ಮನಿರಲ್ಲ ಹುಷಾರ್‌, ಪರಿಣಾಮ ಎದುರಿಸಬೇಕಾದೀತು..!

ಇದು ನಗರದಲ್ಲಿನ ರೌಡಿಶೀಟರ್‌ಗಳಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನರ್‌(Hubli-Dharwad Police Commissioner) ನೀಡಿರುವ ಖಡಕ್‌ ಎಚ್ಚರಿಕೆ. ಕಳೆದ ಕೆಲ ದಿನಗಳಿಂದ ಹೆಚ್ಚುತ್ತಿರುವ ಕೊಲೆ, ಸುಲಿಗೆ, ಕೊಲೆ ಯತ್ನ ಪ್ರಕರಣಗಳಿಗೆ ಕಡಿವಾಣ ಹಾಕಲು ಹಾಗೂ ವಿಧಾನಸಭೆ ಚುನಾವಣೆ(Karnataka Assembly election) ಹಿನ್ನೆಲೆಯಲ್ಲಿ ಶಾಂತಿ​-ಸುವ್ಯವಸ್ಥೆ ಕಾಪಾಡಲು ಕಸಬಾಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಮಿಷನರೇಟ್‌ ರೌಡಿ ಪರೇಡ್‌(Rowdy Parade) ನಡೆಸಿತು.

ಸುಮಾರು 100ಕ್ಕೂ ಅಧಿಕ ರೌಡಿಶೀಟರ್‌(Rowdy sheeters)ಗಳ ಪರೇಡ್‌ ಮಾಡಿಸಿದ ಪೊಲೀಸ್‌ ಕಮಿಷನರೇಟ್‌, ಚುನಾವಣೆ ಹತ್ತಿರ ಬರುತ್ತಿದೆ. ಬಾಲ ಬಿಚ್ಚಿದರೆ ನಡೆಯಲ್ಲ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ನಿಮ್ಮ ಹಳೆ ಚಾಳಿಯನ್ನೆಲ್ಲ ಕೈಬಿಡಿ ಎಂದು ತಾಕೀತು ಮಾಡಲಾಯಿತು.

ಹಾವೇರಿಯಲ್ಲಿ ರೌಡಿಗಳ ಪರೇಡ್‌: ರೌಡಿಗಳಿಗೆ ಗಡಿಪಾರು ಎಚ್ಚರಿಕೆ ನೀಡಿದ ಎಸ್.ಪಿ

ಕಳೆದ ಕೆಲ ದಿನಗಳಿಂದ ಆಸ್ತಿ ವಿಚಾರ, ಹಣಕಾಸಿನ ಗಲಾಟೆ, ವೈಯಕ್ತಿಕ ದ್ವೇಷ, ಕೌಟುಂಬಿಕ ಕಲಹ, ಪ್ರೀತಿ, ಪ್ರೇಮ ಸೇರಿದಂತೆ ಕ್ಷುಲ್ಲಕ ಕಾರಣಗಳಿಗೆ ಕೊಲೆ, ಕೊಲೆ ಯತ್ನ ಪ್ರಕರಣಗಳು ನಗರದಲ್ಲಿ ಜಾಸ್ತಿಯಾಗುತ್ತಿವೆ. ಪೊಲೀಸರ ಕಂಟ್ರೋಲ್‌ಗೆ ಸಿಗುತ್ತಿಲ್ಲ. ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡಿದೆ. ಆತಂಕದಲ್ಲಿ ಜನರು ಜೀವನ ಸಾಗಿಸುವಂತಾಗಿತ್ತು. ಜತೆಗೆ ಇತ್ತೀಚæಗೆ ನೇಕಾರನಗರದಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಯುವಕನನ್ನೊಬ್ಬನನ್ನು ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಇದು ಇಡೀ ನಗರವನ್ನೇ ಬೆಚ್ಚಿ ಬೀಳಿಸುವಂತಾಗಿತ್ತು. ಈ ವೇಳೆ ಎರಡು ತಿಂಗಳಿಗೊಮ್ಮೆ ಹುಬ್ಬಳ್ಳಿಯಂಥ ದೊಡ್ಡ ಸಿಟಿಗಳಲ್ಲಿ ಕೊಲೆಗಳೆಲ್ಲ ಸಹಜ ಎಂದು ಕಮಿಷನರ್‌ ಹೇಳಿಕೆ ನೀಡಿದ್ದರು. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು.

ಇದರಿಂದ ಹೊರಬರಬೇಕು. ನಗರದಲ್ಲಿ ಕಾನೂನು, ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂಬ ಉದ್ದೇಶದಿಂದ ರೌಡಿ ಪರೇಡ್‌ನ್ನು ನಡೆಸಲಾಯಿತು. ಕಳೆದ ಆರು ತಿಂಗಳಲ್ಲಿ ಬರೋಬ್ಬರಿ 8 ಕೊಲೆಗಳಾಗಿವೆ. ಸಣ್ಣ ಪುಟ್ಟವಿಷಯಗಳಿಗೆಲ್ಲ ನೆತ್ತರು ಹರಿಯುತ್ತಿದೆ. ಇದು ಪೊಲೀಸರನ್ನು ಕಂಗೆಡಿಸಿದಂತಾಗಿದೆ.

ಇನ್ನು, ವಿಧಾನಸಭೆ ಚುನಾವಣೆ ಹತ್ತಿರವಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ದಿಟ್ಟಹೆಜ್ಜೆ ಇಟ್ಟಿದೆ. ರೌಡಿಶೀಟರ್‌ಗಳನ್ನು ಪರೇಡ್‌ ನಡೆಸುವ ಮೂಲಕ ಅಪರಾಧ ಪ್ರಕರಣಗಳನ್ನು ನಿಯಂತ್ರಣ ಮಾಡುವ ಕೆಲಸಕ್ಕೆ ಕೈ ಹಾಕಿದ್ದು, ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ತಗೆದುಕೊಳ್ಳುವುದಾಗಿ ಪೊಲೀಸ್‌ ಆಯುಕ್ತ ರಮಣ್‌ ಗುಪ್ತ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಬೀಳೋ ಜಾಗಕ್ಕೆ ಬಿದ್ದರೆ ಕರೆಕ್ಟ್ ಆಗ್ತಿಯಾ..., ರೌಡಿಗಳ ಮೈ ಚಳಿ ಬಿಡಿಸಿದ ಹಾವೇರಿ ಎಸ್ ಪಿ!

ಇನ್ನಾದರೂ ಕೊಲೆ ಕೊಲೆ ಯತ್ನಗಳಂತಹ ಪ್ರಕರಣಗಳು ಕಡಿಮೆಯಾಗುತ್ತವೆಯೇ ಎಂಬುದನ್ನು ಕಾಯ್ದು ನೋಡಬೇಕಷ್ಟೇ!

Follow Us:
Download App:
  • android
  • ios