ಮಾಲೂರು [ಜ.06]:  ಕರ್ನಾಟಕದ ನಾಡ ಧ್ವಜವನ್ನು ಸುಟ್ಟು ಕನ್ನಡಿಗರ ಹಾಗೂ ಮರಾಠಿಗರ ನಡುವೆ ಸೌಹರ್ದವನ್ನು ಕದಡಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಸದಾ ಕಾಲ ನಿರ್ಮಿಸುವ ಶಿವಸೇನೆ ಪಕ್ಷ ಹಾಗೂ ಎಂಇಎಸ್‌ ಸಂಘಟನೆಯನ್ನು ನಿಷೇಧಿಸುವಂತೆ ಅಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಭಾನುವಾರ ಪಟ್ಟಣದ ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.

ಸಂಘದ ಅಧ್ಯಕ್ಷ ಶಿವಾರ ನಾಣಿ ಈ ಸಂದರ್ಭದಲ್ಲಿ ಮಾತನಾಡಿ, ಗಡಿ ಭಾಗಗಳಲ್ಲಿರುವ ರಾಜ್ಯಗಳು ಅನಗತ್ಯವಾಗಿ ಸದಾ ಒಂದಿಲ್ಲೊಂದು ವಿಚಾರವನ್ನು ಕೆದಕಿ ನಮ್ಮ ಮೇಲೆ ಅಕ್ರಮಣ ಮಾಡುತ್ತ ಶಾಂತಿ ಪ್ರಿಯ ಹಾಗೂ ಸಹಿಷ್ಣುಗಳ ಸಹನೆಯನ್ನು ಕೆಣಕುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಂಇಎಸ್‌-ಶಿವಸೇನೆ ನಿಷೇಧಕ್ಕೆ ಒತ್ತಾಯ...

ಎರಡೂ ಸಂಘಟನೆಯನ್ನು ನಿಷೇಧಿಸಿ

ಮಹಾರಾಷ್ಟ್ರದಲ್ಲಿ ಕನ್ನಡದ ಧ್ವಜವನ್ನು ಸುಟ್ಟು, ಕನ್ನಡಿಗರ ಪ್ರತಿನಿಧಿಯಾದ ರಾಜ್ಯದ ಮುಖ್ಯಮಂತ್ರಿಗಳ ಪ್ರತಿಕೃತಿ ದಹಿಸಿದಿದ್ದಲ್ಲದೆ ಗಡಿಭಾಗದಲ್ಲಿ ಕನ್ನಡ ಚಲನ ಚಿತ್ರದ ಪ್ರದರ್ಶನ ಕೊಡ ನಿಲ್ಲಿಸಿ ನಾಮಫಲಕಗಳಿಗೆ ಮಸಿ ಬಳಿದು ಕನ್ನಡಿಗರ ಸ್ವಾಭಿಮಾನವನ್ನು ಕೆಣುಕುತ್ತಿದ್ದಾರೆ. ಶಿವ ಸೇನೆ ಹಾಗೂ ಎಂ.ಇ.ಎಸ್‌ ಸಂಘಟನೆಗಳು ಒಕ್ಕೂಟ ವ್ಯವಸ್ಥೆಯ ಮೂಲ ಉದ್ದೇಶಗಳನ್ನು ಬುಡಮೇಲು ಮಾಡಿ ಸಮಾಜದ ಶಾಂತಿಯನ್ನು ಕದಡುತ್ತಿರುವುದರಿಂದ ಆ ಎರಡು ಸಂಘಟನೆಗಳನ್ನು ಕೇಂದ್ರ ಸರ್ಕಾರವು ನಿಷೇಧಿಸಬೇಕು ಎಂದು ಅಗ್ರಹಿಸಿದರು.

ಖಾತೆ ಅಸಮಾಧಾನ: ಸರ್ಕಾರದಿಂದ ಹೊರನಡೆದ ಶಿವಸೇನೆ ಶಾಸಕ...

ಸರ್ಕಾರದಿಂದ ಕಾಂಗ್ರೆಸ್‌ ಹೊರಬರಲಿ

ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಗಡಿನಾಡ ಕನ್ನಡಿಗರ ರಕ್ಷಣೆಗೆ ಮುಂದಾಗಬೇಕು. ಕರ್ನಾಟಕ ಕಾಂಗ್ರೆಸ್‌ ಹೈ ಕಮಾಂಡ್‌ ಮೇಲೆ ಒತ್ತಡ ಹಾಕಿ ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸರ್ಕಾರದಿಂದ ಹೊರಬರಬೇಕೆಂದು ಒತ್ತಾಯಿಸಬೇಕೆಂದು ಅಗ್ರಹಿಸಿದರು.